ಬೊಗಸೆಕಂಗಳ ಚೆಲುವೆ ಅನುಪಮಾ ಪರಮೇಶ್ವರನ್: 'ನಟಸಾರ್ವಭೌಮ'ನ ಬೆಡಗಿಯ ಹೊಸ​ ಫೋಟೋಶೂಟ್

Anupama Parameswaran: ಮಲೆಯಾಳಂ ಭಾಷೆಯ 'ಪ್ರೇಮಂ' ಸಿನಿಮಾದಲ್ಲಿ ಸೈಕಲ್ ತಳ್ಳಿಕೊಂಡು ಹೋಗುವ ಗುಂಗುರು ಕೂದಲಿನ ಮೇರಿ ಜಾರ್ಜ್​ ಪಾತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಮೊದಲ ಸಿನಿಮಾದಲ್ಲೇ ಸಿನಿ ರಸಿಕರನ್ನು ತನ್ನತ್ತ ಸೆಳೆದ ಆ ಹುಡುಗಿ ಹೆಸರು ಅನುಪಮಾ ಪರಮೇಶ್ವರನ್. ಚಿತ್ರರಂಗ ಪ್ರವೇಶಿಸಿದ ನಾಲ್ಕೇ ವರ್ಷದಲ್ಲಿ ತೆಲುಗು, ತಮಿಳು, ಮಲೆಯಾಳಂ ಭಾಷೆಯ 10ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅನುಪಮಾ ಕನ್ನಡದ 'ನಟಸಾರ್ವಭೌಮ' ಸಿನಿಮಾದಲ್ಲಿ ಪುನೀತ್​ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಶ್ರುತಿ ಎಂಬ ಪಾತ್ರದಲ್ಲಿ ನಟಿಸಿದ್ದ ಇವರ ಕೊಲೆಯ ಸುತ್ತಲೇ ಇಡೀ ಸಿನಿಮಾ ಹೆಣೆದುಕೊಂಡಿತ್ತು. ಬೊಗಸೆಕಂಗಳ ಕೇರಳದ ಈ ಮುದ್ದು ಹುಡುಗಿಯ ಹೊಸ ಫೋಟೋಶೂಟ್​ನ ಫೋಟೋಗಳು ಇಲ್ಲಿವೆ...

First published: