Naresh-Pavitra Lokesh: ಪವಿತ್ರಾ ಲೋಕೇಶ್-ನರೇಶ್ ಲಿಪ್ ಕಿಸ್! ಮದುವೆ ಡೇಟ್ ಫಿಕ್ಸ್
ನರೇಶ್ ಮತ್ತು ಪವಿತ್ರಾ ಲೋಕೇಶ್ ಕಳೆದ ಕೆಲವು ವರ್ಷಗಳಿಂದ ಸಂಬಂಧ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಇವರಿಬ್ಬರು ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದೂ ಸುದ್ದಿ ಇದೆ. ಆದರೆ ಹೊಸ ವರ್ಷದ ಸಂದರ್ಭದಲ್ಲಿ ಪವಿತ್ರಾ ಹಾಗೂ, ನರೇಶ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಮದುವೆಯಾಗುವುದಾಗಿ ಘೋಷಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಜನರ ಮಧ್ಯೆ ಹಾಟ್ ಟಾಕ್ ಆಗಿದ್ದಾರೆ. ಇವರಿಬ್ಬರ ಅಫೇರ್ ಬಗ್ಗೆ ಮಾಧ್ಯಮಗಳಲ್ಲಿ ಬಹಳಷ್ಟು ಸುದ್ದಿ ಹರಿದಾಡಿದ್ದವು. ಇದರೊಂದಿಗೆ ನರೇಶ್ ಕೆಲ ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದರು. ಪವಿತ್ರಾ ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ.
2/ 7
ಇತ್ತೀಚಿನ ದಿನಗಳಲ್ಲಿ ಪವಿತ್ರಾ ಲೋಕೇಶ್ ಸಿನಿಮಾಗಳಿಗಿಂತ ವೈಯಕ್ತಿಕ ಸಮಸ್ಯೆಗಳು ಮತ್ತು ವಿವಾದಗಳಿಂದ ಹೆಚ್ಚು ಸುದ್ದಿಯಾಗಿದ್ದಾರೆ. ಇದರೊಂದಿಗೆ ಪವಿತ್ರಾ ಲೋಕೇಶ್ ಎಲ್ಲೆಡೆ ವೈರಲ್ ಆಗಿದ್ದಾರೆ. ಹಿರಿಯ ನಟ ನರೇಶ್ ಜೊತೆ ಪವಿತ್ರಾ ಲೋಕೇಶ್ ಸಹಜೀವನ ನಡೆಸುತ್ತಿರುವುದು ಕೂಡಾ ಈಗ ಗುಟ್ಟಾಗಿ ಉಳಿದಿಲ್ಲ.
3/ 7
ಹೊಸ ವರ್ಷ ಸಮೀಪಿಸುತ್ತಿದ್ದಂತೆ ಈ ಜೋಡಿ ಶೀಘ್ರದಲ್ಲೇ ಮದುವೆಯಾಗುವುದಾಗಿ ಘೋಷಿಸಿದರು. ಮೇಲಾಗಿ ನರೇಶ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪವಿತ್ರಾಗೆ ಲಿಪ್ ಕಿಸ್ ನೀಡಿದ ವಿಡಿಯೋ ಪೋಸ್ಟ್ ಮಾಡಿದ್ದು, ಅವರ ಮದುವೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.
4/ 7
ನರೇಶ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಹೊಸ ವರ್ಷದ ಮುನ್ನಾದಿನದಂದು ಇಬ್ಬರೂ ಕೇಕ್ ಕತ್ತರಿಸಿ ನಂತರ ಪರಸ್ಪರ ಕೇಕ್ ತಿನ್ನಿಸಿದರು. ನಂತರ ಇಬ್ಬರು ಲಿಪ್ ಲಾಕ್ ಮಾಡಿದರು. ಈಗ ಈ ವಿಡಿಯೋ ಟ್ರೆಂಡಿಂಗ್ ಆಗಿದೆ.
5/ 7
ನರೇಶ್ ಅವರ ಈ ಒಂದೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತು. ಹೊಸ ವರ್ಷದಲ್ಲಿ ನಾವು ಹೊಸ ಜೀವನ ಆರಂಭಿಸುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದವನ್ನು ಬಯಸುತ್ತೇವೆ ಎಂದು ನರೇಶ್ ಮಾಡಿರುವ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
6/ 7
ಮತ್ತೊಮ್ಮೆ ಪವಿತ್ರಾ ಲೋಕೇಶ್ ಹಾಟ್ ಟಾಪಿಕ್ ಆಗಿದ್ದಾರೆ. ನರೇಶ್ ಈಗಾಗಲೇ ಮೂರು ಮದುವೆಯಾಗಿದ್ದಾರೆ. ಪವಿತ್ರಾಗೆ ಇದು ಎರಡನೇ ಮದುವೆ. ಇದಕ್ಕೂ ಮುನ್ನ ನರೇಶ್ ಪವಿತ್ರಾ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸಿದ್ದರು. ನಾವು ಒಟ್ಟಿಗೆ ವಾಸಿಸುತ್ತಿದ್ದೇವೆ. ಮದುವೆಯಾಗಿಲ್ಲ ಎಂದಿದ್ದರು.
7/ 7
ನರೇಶ್ ಈಗಾಗಲೇ ಮೂರು ಮದುವೆಯಾಗಿದ್ದಾರೆ. ಈ ಹಿಂದೆ ಅವರು ಪವಿತ್ರಾ ಅವರನ್ನು ನಾಲ್ಕನೇ ಮದುವೆಯಾಗಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಇತ್ತೀಚೆಗಷ್ಟೇ ಸೂಪರ್ ಸ್ಟಾರ್ ಕೃಷ್ಣ ಅವರ ನಿಧನದ ಸಂದರ್ಭದಲ್ಲೂ ನರೇಶ್ ಪವಿತ್ರಾ ಲೋಕೇಶ್ ಜೊತೆಗೂಡಿ ಅಲ್ಲಿಗೆ ಬಂದಿದ್ದರು. ಶವಸಂಸ್ಕಾರದ ಸಮಯದಲ್ಲಿ ನಟಿಯೂ ಇದ್ದರು.