Simba: ಬಹುಭಾಷಾ ತಾರೆ ಸಿಂಬಾ ಇನ್ನಿಲ್ಲ, ಕನ್ನಡ - ಮಲಯಾಳಂ ಸಿನಿಮಾಗಳಲ್ಲಿ ಇವ್ನೇ ಎಲ್ರಿಗಿಂತ ಕ್ಯೂಟ್
Simba Dog: ಕನ್ನಡದ ನಾನು ಮತ್ತು ಗುಂಡ ಸಿನೆಮಾ ಬಗ್ಗೆ ಹಲವಾರು ಜನರಿಗೆ ಗೊತ್ತು. ಅದರಲ್ಲಿರುವ ನಾಯಿ ಯಾರಿಗೇ ತಾನೇ ಗೊತ್ತಿಲ್ಲ. ಆ ಮುದ್ದಾದ ನಾಯಿಯನ್ನು ಇಷ್ಟಪಡದವರು ಯಾರೂ ಇಲ್ಲ. ಅದರ ಹೆಸರು ಸಿಂಬಾ. ಈ ಮುದ್ದು ನಾಯಿ ಕಳೆ ವಾರ ಸಾವನ್ನಪ್ಪಿದ್ದು, ನಿಜಕ್ಕೂ ನೋವಿನ ಸಂಗತಿ.
ಸ್ಯಾಂಡಲ್ವುಡ್ನಲ್ಲಿ ಜನಪ್ರಿಯವಾಗಿದ್ದ ಈ ಸಿಂಬಾ, ಒಂದು ರೀತಿಯಲ್ಲಿ ಸ್ಯಾಂಡಲ್ವುಡ್ ಸೇರಿದವನಂತೆ ಇದ್ದ. ಹೇಳಿದ ಮಾತನ್ನು ಕೇಳುತ್ತಿದ್ದ ಸಿಂಬಾ ಎಂದರೆ ಪ್ರತಿಯೊಬ್ಬರಿಗೂ ಬಹಳ ಇಷ್ಟ.
2/ 10
ಸಿಂಬಾನಿಗೆ ಕೇವಲ 9 ವರ್ಷವಾಗಿದ್ದು, ಮಾಲೀಕ ವರುಣ್ ಆಗಲಿ ಅದರ ಟ್ರೈನರ್ ಸ್ವಾಮಿಯಾಗಲಿ ಸಿಂಬಾ ಸಾವಿನ ನೋವಿನಿಂದ ಹೊರಬರದೆ, ನೋವನ್ನು ಅನುಭವಿಸುತ್ತಿದ್ದಾರೆ.
3/ 10
ಸಿಂಬಾ ಕೇವಲ 30 ತಿಂಗಳುಗಳಿದ್ದಾಗ ಸ್ವಾಮಿ ಟ್ರೈನಿಂಗ್ ನೀಡಲು ಆರಂಭಿಸಿದ್ದರು. ಮನೆಯ ಸದಸ್ಯರಲ್ಲಿ ಒಬ್ಬರಂತಿದ್ದ ಸಿಂಬಾ ನಿಧನ ವರುಣ್ಗೆ ಹಾಗೂ ಅವರ ಕುಟುಂಬಸ್ಥರಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ.
4/ 10
ಸಿಂಬಾನನ್ನ ಮೊದಲು ಕರೆದುಕೊಂಡು ಬಂದಾಗ ಟ್ರೈನ್ ಮಾಡುವುದು ಬಹಳ ಕಷ್ಟವಾಗಿತ್ತು. ತುಂಬಾ ತುಂಟತನ ಇತ್ತು. ಆದರೆ ನಂತರ ಹೇಳಿದ ಮಾತು ಕೇಳುತ್ತಿದ್ದ ಎಂದು ಸ್ವಾಮಿ ಸಿಂಬಾ ಜೊತೆ ಕಳೆದ ಕ್ಷಣಗಳನ್ನು ನೆನೆಸಿಕೊಂಡಿದ್ದಾರೆ.
5/ 10
ಸಿಂಬಾ ನಿಧನದ ವಿಚಾರವನ್ನು ತಮ್ಮ ಸಾಮಾಜಿಕ ಜಾಲಾತಾಣ ಖಾತೆಯಲ್ಲಿ ಸ್ವಾಮಿ ಹಂಚಿಕೊಂಡಿದ್ದು, ಮುದ್ದಾದ ಕೆಲ ಫೋಟೋಗಳನ್ನು ಸಹ ಶೇರ್ ಮಾಡಿಕೊಂಡಿದ್ದಾರೆ.
6/ 10
ಸಿಂಬಾನಿಗೆ ಕೇವಲ ಒಂದು ವರ್ಷವಿದ್ದಾಗ ಮಲಯಾಳಂನ ಅದ್ಭುತ ಚಿತ್ರ ಬೆಂಗಳೂರು ಡೇಸ್ ಗೆ ಆಫರ್ ಬಂದಿತ್ತು. ಅದರ ನಂತರ ಸಿನೆಮಾಗಳಲ್ಲಿ ಆಪರ್ ಬರಲು ಆರಂಭವಾಗಿತ್ತು ಎಂದಿದ್ದಾರೆ.
7/ 10
ಇನ್ನು ನಾನು ಮತ್ತು ಗುಂಡ ಸಿನೆಮಾದ ಶಿವರಾಜ್ ಕೆ.ಆರ್.ಪೇಟೆ ಸಹ ಸಿಂಬಾ ನಿಧನದಿಂದ ಬೇಸರಗೊಂಡಿದ್ದು, ಪ್ರತಿಯೊಂದು ಜೀವಿಗೂ ಹುಟ್ಟು ಸಾವು ಇರುತ್ತದೆ. ನಾವು ಹೇಗೆ ಬದುಕುತ್ತೇವೆಯೋ ಬದುಕು ಎಂದು ಸಾಮಾಜಿಕ ಜಾಲಾತಾಣದಲ್ಲಿ ಬರೆದುಕೊಂಡಿದ್ದಾರೆ.
8/ 10
ಅಲ್ಲದೇ, ಚಿತ್ರದಲ್ಲಿ ಸಿಂಬಾ ಜೊತೆ ನಾನು ನಟನೆ ಮಾಡಿದ್ದೇನೆ. ಅವನಿಂದ ತುಂಬಾ ಕಲಿತಿದ್ದೇನೆ. ಈಗ ಅವನಿಲ್ಲ ಎಂಬ ಸುದ್ದಿ ನಂಬಲು ಸಾಧ್ಯವಾಗುತ್ತಿಲ್ಲ ಎಂದು ನೋವು ತುಂಬಿದ ನುಡಿಗಳನ್ನು ಬರೆದಿದ್ದಾರೆ.
9/ 10
ಸಿಂಬಾ ಶೂಟಿಂಗ್ ಸ್ಥಳಗಳಲ್ಲಿ ಹೇಳಿದಂತೆ ಕೇಳುತ್ತಿದ್ದ. ಒಂದೇ ಟೇಕ್ ಸಾಕಿತ್ತು ಎನ್ನುತ್ತಾರೆ ವರುಣ್. ಅಲ್ಲದೇ, ಶಿವಾಜಿ ಸುತ್ಕಲ್ ಚಿತ್ರದಲ್ಲಿ ಸಹ ಸಿಂಬಾ ಕಾಣಿಸಿಕೊಂಡಿದ್ದ.
10/ 10
ಮಾರ್ಚ್ನಲ್ಲಿ ಸಿಂಬಾನಿಗೆ 9 ವರ್ಷ ತುಂಬಿತ್ತು. ಏಪ್ರಿಲ್ ಕೊನೆಯಲ್ಲಿ ಜ್ವರದಿಂದ ಬಳಲುತ್ತಿದ್ದ,. ಅದೆಷ್ಟೇ ಪರೀಕ್ಷೆ ಮಾಡಿಸಿ, ಔಷಧಿ ಕೊಡಿಸಿದರೂ ಸಹ ಸಿಂಬಾ ಮೇ 9 ರಂದು ಕೊನೆಯುಸಿರೆಳೆದಿದ್ದಾನೆ.