Happy Birthday: ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಮ್ಮನೆ ಯುವರಾಣಿ ಧಾರಾವಾಹಿಯ ನಟ ರಘು..!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಮ್ಮನೆ ಯುವರಾಣಿ' (Nammane Yuvaraani Kannada Serial) ಧಾರಾವಾಹಿಯಲ್ಲಿ ಸಾಕೇತ್ ರಾಜ್ಗುರು ಪಾತ್ರದಲ್ಲಿ ನಟಿಸುತ್ತಿರುವ ರಘು (Raghu) ತಮ್ಮ ಹುಟ್ಟುಹಬ್ಬವನ್ನು (Happy Birthday) ಮಡದಿ ಅಮೃತಾ ರಾಮಮೂರ್ತಿ (Amrutha Ramamoorthy) ಹಾಗೂ ಕುಟುಂಬದವರ ಜೊತೆ ಆಚರಿಸಿಕೊಂಡಿದ್ದಾರೆ. ರಘು ಅವರ ಹುಟ್ಟುಹಬ್ಬದಲ್ಲಿ ಅವರ ಸ್ನೇಹಿತರು ಹಾಗೂ ಸಹ ಕಲಾವಿದರೂ ಭಾಗಿಯಾಗಿದ್ದು ವಿಶೇಷ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ನಮ್ಮನೆ ಯುವರಾಣಿ ಧಾರಾವಾಹಿ ಖ್ಯಾತಿಯ ನಟ ರಘು ಅವರು ಇತ್ತೀಚೆಗಷ್ಟೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮನೆಯವರು, ಮಡದಿ ಹಾಗೂ ಪ್ರೀತಿ ಪಾತ್ರರೊಂದಿಗೆ ಬರ್ತ್ ಡೇ ಸೆಲಬ್ರೇಟ್ ಮಾಡಿ ಸಂಭ್ರಮಿಸಿದ್ದಾರೆ.
2/ 10
ರಘು ಅವರ ಮದಡಿ ಅಮೃತಾ ರಾಮಮೂರ್ತಿ ಸಹ ಕಿರುತೆರೆ ನಟಿ. ಸದ್ಯ ಮೊಲದ ಮಗುವಿನ ನಿರೀಕ್ಷೆಯಲ್ಲಿರುವ ಅಮೃತಾ ಅವರು ಸದ್ಯಕ್ಕೆ ಅಭಿನಯದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.
3/ 10
ರಘು ಅವರು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. ಜೊತೆಗೆ ತಮ್ಮ ಹುಟ್ಟುಹಬ್ಬದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
4/ 10
ರಘು ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರ ಸ್ನೇಹಿತರು ಹಾಗೂ ಸಹ ಕಲಾವಿದರಾದ ಅಂಕಿತಾ ಅಮರ್ ಹಾಗೂ ಇತರರು ಭಾಗಿಯಾಗಿ, ಶುಭ ಕೋರಿದ್ದಾರೆ.
5/ 10
ಕುಟುಂಬದೊಂದಿಗೆ ಸೆಲೆಬ್ರಿಟಿ ದಂಪತಿ ರಘು ಹಾಗೂ ಅಮೃತಾ ರಾಮಮೂರ್ತಿ. ಇನ್ನು ಹಟ್ಟುಹಬ್ಬದ ಸಂಭ್ರಮದ ಜೊತೆಗೆ ಅಮೃತಾ ಅವರ ಬೇಬಿ ಬಂಪ್ ಫೋಟೋಶೂಟ್ ಸಹ ಮಾಡಲಾಗಿದೆ.
6/ 10
ತುಂಬು ಗರ್ಭಿಣಿ ಅಮೃತಾ ರಾಮಮೂರ್ತಿ ಪತಿ ರಘು ಜೊತೆ ಕ್ಯೂಟ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೆ ಅಮೃತಾ ಅವರ ಸೀಮಂತ ಕಾರ್ಯಕ್ರಮ ನಡೆದಿತ್ತು.
7/ 10
ಈ ಜೋಡಿ ತಮ್ಮ ವಿವಾಹ ವಾರ್ಷಿಕೋತ್ಸವದಂದೇ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಷಯವನ್ನು ಬಹಿರಂಗಪಡಿಸಿದ್ದರು. ಈ ಜೋಡಿ ಮೊದಲು ಮಿಸ್ಟರ್ ಆ್ಯಂಡ್ ಮಿಸಸ್ ರಂಗೇಗೌಡ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು.
8/ 10
ಧಾರಾವಾಹಿಯಲ್ಲಿ ನಟಿಸುವಾಗ ಬೆಳೆದ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ನಂತರ ವಿವಾಹವಾದರು. ಅಮೃತಾ ಹಾಗೂ ರಘು ಅವರ ವಿವಾಹ 2019ರಲ್ಲಿ ನಡೆಯಿತು.
9/ 10
ಅಮೃತಾ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ಮೃದುಲಾ ಪಾತ್ರದಲ್ಲಿ ನಟಿಸುತ್ತಿದ್ದರು. ಆದರೆ ಅರ್ಧಕ್ಕೆ ಧಾರಾವಾಹಿಯಿಂದ ಹೊರ ಬಂದರು ಅಮೃತಾ. ಕುಲವಧು ಧಾರಾವಾಹಿಯಲ್ಲಿ ನಟಿಸಿದ್ದ ವಚನಾ ಪಾತ್ರ ಇವರಿಗೆ ಹೆಸರು ತಂದುಕೊಟ್ಟಿತ್ತು.
10/ 10
ತುಂಬು ಗರ್ಭಿಣಿ ಅಮೃತಾ ರಾಮಮೂರ್ತಿ ಹಾಗೂ ನಟ ರಘು ತಮ್ಮ ಮೊದಲ ಮಗುವಿನ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.