Ninaad Harithsa: ಹೆಂಡತಿ ಜೊತೆ ಫೋಟೋಶೂಟ್ನಲ್ಲಿ ತ್ರಿಶೂಲ್ ಮಿಂಚಿಂಗ್ - ನೂರ್ ಕಾಲ ಒಟ್ಟಿಗೆ ಬಾಳಿ ಎಂದ ಅಭಿಮಾನಿಗಳು
Kannada Serial: ಕನ್ನಡ ಕಿರುತೆರೆಯಲ್ಲಿ ಕೇವಲ ಒಂದು ಧಾರಾವಾಹಿಯ ಪಾತ್ರದ ಮೂಲಕ ಬಹಳಷ್ಟು ಹೆಸರು ಪಡೆದವರು ಹಲವಾರು ಜನರಿದ್ದಾರೆ. ಅದರಲ್ಲಿ ನಾಗಿಣಿ 2 ಖ್ಯಾತಿಯ ನಿನಾದ್ ಕೂಡ ಒಬ್ಬರು. ಇತ್ತೀಚೆಗಷ್ಟೇ ನಿನಾದ್ ಮದುವೆಯಾಗಿದ್ದು, ಇದೀಗ ಹೆಂಡತಿಯ ಜೊತೆ ಅವರ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.
ನಾಗಿಣಿ 2 ಧಾರಾವಾಹಿಯು ಸೀರಿಯಲ್ ಪ್ರಿಯರ ನೆಚ್ಚಿನ ಧಾರಾವಾಹಿ ಎನ್ನಬಹುದು. ಇದರಲ್ಲಿ ತ್ರಿಶೂಲ್ ಫಾತ್ರ ಮಾಡುತ್ತಿರುವ ನಿನಾದ್ ಎಂದರೆ ಬಹಳ ಜನರಿಗೆ ಇಷ್ಟ.
2/ 8
ಮುಗ್ಧ ಅಭಿನಯ, ಕ್ಯೂಟ್ ಲುಕ್ ಮೂಲಕ ಹೆಸರುವಾಸಿಯಾಗಿರುವ ಈ ನಿನಾದ್ ಇತ್ತೀಚೆಗಷ್ಟೇ ಸಪ್ತಪದಿ ತುಳಿದಿದ್ದಾರೆ. ಇದೀಗ ಅವರ ಮತ್ತು ಅವರ ಹೆಂಡತಿಯ ಮುದ್ದಾದ ಫೋಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.
3/ 8
ಬಹಳ ದಿನಗಳ ಗೆಳತಿ ರಮ್ಯಾ ಅವರನ್ನು ನಿನಾದ್ ಇದೇ ಮೇ 20ರಂದು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದು, , ಇದು ಲವ್ ಕಮ್ ಅರೇಂಜ್ ಮ್ಯಾರೇಜ್ ಎನ್ನಬಹುದು.
4/ 8
ಇನ್ನು ನಿನಾದ್ ಮದುವೆಯಾಗಿರುವ ಹುಡುಗಿ ರಮ್ಯಾ ಅವರಿಗೆ ಯಾವುದೇ ಸಿನೆಮಾ ಅಥವಾ ಸೀರಿಯಲ್ ಸಂಪರ್ಕವಿಲ್ಲ. ಅವರು ಸಿಎ ಮಾಡ್ತಿದ್ದಾರೆ. ಅಭಿಮಾನಿಗಳು ಈ ಜೋಡಿಯನ್ನು ನೋಡಿ ಬಹಳ ಇಷ್ಟಪಟ್ಟಿದ್ದಾರೆ.
5/ 8
ರಮ್ಯಾ ಮತ್ತು ನಿನಾದ್ ಇಬ್ಬರು ಒಬ್ಬ ಕಾಮನ್ ಫ್ರೆಂಡ್ ಮೂಲಕ ಪರಿಚಯ ಆಗಿದ್ದಾರೆ. ನಂತರ ಅವರ ಸ್ನೇಹ ಪ್ರೀತಿಯಾದ ಬಳಿಕ ಮದುವೆಯ ನಿರ್ಧಾರ ಮಾಡಿ, ಹಿರಿಯರ ಒಪ್ಪಿಗೆ ಮೇರೆ ಹಸೆಮಣೆ ಏರಿದ್ದಾರೆ.
6/ 8
ಇನ್ನು ಈ ಇಬ್ಬರ ಜೋಡಿ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದು, ನೂರು ಕಾಲ ಸುಖವಾಗಿ ಬಾಳಿ ಎಂದು ಆಶೀರ್ವದಿಸಿದ್ದಾರೆ.
7/ 8
ಇನ್ನು ನಿನಾದ್ ತಾಯಿ ಕೂಡ ಕಿರುತೆರೆಯ ಜನಪ್ರಿಯ ನಟಿಯಾಗಿದ್ದು, ಕನ್ನಡತಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
8/ 8
ಇನ್ನು ನಾಗಿಣಿ ಧಾರಾವಾಹಿಯಲ್ಲಿ ಬ್ಯುಸಿ ಇರುವ ನಿನಾದ್ಗೆ ವೆಬ್ ಸೀರಿಸ್ ಸೇರಿದಂತೆ ಹಲವಾರು ಆಫರ್ ಬರುತ್ತಿದ್ದು, ಸಿನೆಮಾದತ್ತ ನಿನಾದ್ ಆಸಕ್ತಿ ಹೊಂದಿದ್ದಾರೆ.