ನಾಗಾರ್ಜುನ ಅವರ 2ನೇ ಪತ್ನಿ ಅಮಲಾ ಅಕ್ಕಿನೇನಿ ಕೂಡ ಹಲವಾರು ತೆಲುಗು ಮತ್ತು ತಮಿಳು ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ ನಟಿಯಾಗಿದ್ದಾರೆ. ನಾಗ ಚೈತನ್ಯ ತಮ್ಮ ಆಕರ್ಷಕ ವ್ಯಕ್ತಿತ್ವ ಮತ್ತು ನಟನಾ ಕೌಶಲ್ಯದಿಂದಲೇ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಚೊಚ್ಚಲ ಚಿತ್ರ ಏ ಮಾಯಾ ಚೇಸಾವೆ ಸಿನಿಮಾಗಾಗಿ ಅತ್ಯುತ್ತಮ ಹೊಸ ನಟ (ದಕ್ಷಿಣ) ಫಿಲ್ಮ್ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
2009 ರ ಏ ಮಾಯಾ ಚೇಸಾವೆ ಯಿಂದ 2022ರ ಲಾಲ್ ಸಿಂಗ್ ಚಡ್ಡಾ ವರೆಗೆ, ಅವರು ತಮ್ಮ ಅಭಿನಯದಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಗೌತಮ್ ಮೆನನ್ ನಿರ್ದೇಶನದ ಏ ಮಾಯಾ ಚೇಸಾವೇ (2010) ಚಿತ್ರದಲ್ಲಿನ ಅಭಿನಯದೊಂದಿಗೆ ಅವರು ಸೂಪರ್ ಸ್ಟಾರ್ ಡಮ್ ಪಟ್ಟಕ್ಕೆ ಏರಿದರು. ಏ ಮಾಯಾ ಚೇಸಾವೆ ಯಶಸ್ಸಿನ ನಂತರ, ನಾಗ ಚೈತನ್ಯ 100% ಲವ್ (2011), ಮನಂ (2014), ಪ್ರೇಮಂ (2016) ಮತ್ತು ಮಜಿಲಿ (2019) ನಂತಹ ಹಲವಾರು ಹಿಟ್ಗಳಲ್ಲಿ ನಟಿಸಿದ್ದಾರೆ.
ನಾಗ ಚೈತನ್ಯ ಸಿನಿಮಾ ನಟನೆಯ ಜೊತೆಗೆ ಉದ್ಯಮ ಕ್ಷೇತ್ರದಲ್ಲೂ ಹೆಸರು ಮಾಡುತ್ತಿದ್ದಾರೆ. ನಾಗ ಚೈತನ್ಯ ಹೈದರಾಬಾದ್ನಲ್ಲಿ ಶೋಯು ಎಂಬ ಕ್ಲೌಡ್ ಕಿಚನ್ ಅನ್ನು ಸಹ ಪ್ರಾರಂಭಿಸಿದ್ದಾರೆ. ಇದು ಹೈದರಾಬಾದ್ನಲ್ಲಿರುವ ಎಲ್ಲಾ ಆಹಾರ ಪ್ರಿಯರಿಗೆ ಪ್ಯಾನ್-ಏಷ್ಯನ್ ಪಾಕಪದ್ಧತಿಯನ್ನು ನೀಡುವ ಐಷಾರಾಮಿ ಫುಡ್ ಕೌಂಟರ್ ಆಗಿದೆ. ಇನ್ನಷ್ಟು ಶಾಖೆಗಳನ್ನು ತೆರೆಯಲು ನಾಗ ಚೈತನ್ಯ ಪ್ಲಾನ್ ಮಾಡಿದ್ದಾರೆ.
ಮಾಜಿ ಪತ್ನಿ ಮತ್ತು ನಟಿ ಸಮಂತಾ ರುತ್ ಪ್ರಭು ಜೊತೆ ವಿಚ್ಛೇದನವಾದ ಬಳಿಕ ನಾಗ ಚೈತನ್ಯ ಫೈವ್ ಸ್ಟಾರ್ ಹೋಟೆಲ್ನಲ್ಲಿ ವಾಸಿಸುತ್ತಿದ್ದರು. Gulte.com ನ ಇತ್ತೀಚಿನ ವರದಿಗಳ ಪ್ರಕಾರ, ನಾಗ ಚೈತನ್ಯ ಹೈದರಾಬಾದ್ನಲ್ಲಿ ಹೊಸ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಅವರ ಕುಟುಂಬ ಮತ್ತು ಆಪ್ತ ಸ್ನೇಹಿತರಿಗಾಗಿ ಗೃಹಪ್ರವೇಶ ಸಮಾರಂಭವನ್ನು ಆಯೋಜಿಸುತ್ತಾರೆ ಎನ್ನಲಾಗ್ತಿದೆ. ನಾಗ ಚೈತನ್ಯ ಐಷಾರಾಮಿ ಸೌಕರ್ಯಗಳನ್ನು ಹೊಂದಿರುವ ಪ್ರೀಮಿಯಂ ವಿಲ್ಲಾ ಖರೀದಿಸಿದ್ದಾರಂತೆ.