Naga Chaitanya: ಯುವ ನಟಿ ಜೊತೆ ನಾಗಚೈತನ್ಯ ಡೇಟಿಂಗ್! ರೂಮರ್ಸ್ಗೆ ಸಿಕ್ಕೇ ಬಿಡ್ತಾ ಸಾಕ್ಷ್ಯ?
ಅಕ್ಕಿನೇನಿ ಕುಟುಂಬದ ಮಗ, ನಟ ನಾಗಚೈತನ್ಯ ತೆಲುಗಿನ ಯುವ ನಾಯಕಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ರೂಮರ್ಸ್ ಹಬ್ಬಿದೆ. ಸಮಂತಾ ದೂರವಾದ ಮೇಲೆ ಈ ಯುವನಟಿ ಜೊತೆ ನಾಗಚೈತನ್ಯ ಹತ್ತಿರವಾಗುತ್ತಿದ್ದಾರಂತೆ. ಇದೀಗ ಈ ಗಾಳಿಸುದ್ದಿಗೆ ಪುಷ್ಠಿ ಕೊಡುವಂತೆ ಫೋಟೋಗಳು ವೈರಲ್ ಆಗಿವೆ! ಆದರೆ ಇದು ನಿಜಾನಾ?
ಸಮಂತಾ ಜೊತೆ ಪ್ರೀತಿಯಲ್ಲಿ ಬಿದ್ದ ನಾಗ ಚೈತನ್ಯ ನಾಲ್ಕೇ ವರ್ಷದಲ್ಲಿ ಮದುವೆಗೆ ಫುಲ್ ಸ್ಟಾಪ್ ಇಟ್ಟಿದ್ದು ಗೊತ್ತೇ ಇದೆ. ಅಂದಿನಿಂದ ಚೈತುಗೆ ಸಂಬಂಧಿಸಿದ ಹಲವು ವಿಚಾರಗಳು ಚರ್ಚೆಗೆ ಬಂದಿವೆ. ಅದರಲ್ಲೂ ಯಂಗ್ ಹೀರೋಯಿನ್ ಜೊತೆ ಚೈತು ಸೀಕ್ರೆಟ್ ಅಫೇರ್ ನಡೆಸುತ್ತಿರುವುದು ಒಂದು ರೇಂಜ್ ನಲ್ಲಿ ಟ್ರೆಂಡ್ ಆಗಿದೆ.
2/ 8
ವಿಚ್ಛೇದನದ ನಂತರ ಸಮಂತಾ ಮತ್ತು ನಾಗ ಚೈತನ್ಯ ಇಬ್ಬರೂ ಸದಾ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ತಮ್ಮ ತಮ್ಮ ವೃತ್ತಿಜೀವನದ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದರೂ, ಅವರ ವೈಯಕ್ತಿಕ ವಿಷಯಗಳು ವೈರಲ್ ಆಗುತ್ತಿವೆ.
3/ 8
ನಾಗ ಚೈತನ್ಯ ಅವರು ಯಂಗ್ ಹೀರೋಯಿನ್, ತೆಲುಗು ಬ್ಯೂಟಿ ಶೋಭಿತಾ ಧೂಳಿಪಾಲ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೀಗ ಜನರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇವರಿಬ್ಬರೂ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಸುದ್ದಿಯೂ ಹಬ್ಬಿದೆ!
4/ 8
ನಾಗ ಚೈತನ್ಯ ಶೋಭಿತಾ ದೂಳಿಪಳ್ಳ ಜೊತೆ ಕ್ಲೋಸ್ ಆಗಿದ್ದಾರೆ ಎನ್ನಲಾಗಿತ್ತು.. ಇಬ್ಬರೂ ಆಗಾಗ ವಿಹಾರಕ್ಕೆ ಹೋಗುತ್ತಾರೆ. ಹೊಸದಾಗಿ ಕಟ್ಟುತ್ತಿದ್ದ ಮನೆಗೆ ನಾಗ ಚೈತನ್ಯ ಹಲವು ಬಾರಿ ಕರೆದುಕೊಂಡು ಹೋಗಿದ್ದು, ಶೋಭಿತಾಳನ್ನು ಮದುವೆಯಾಗಲು ಚೈತು ನಿಶ್ಚಯಿಸಿದ್ದ ಎನ್ನಲಾಗಿದೆ.
5/ 8
ಈ ಮಧ್ಯೆ ನಾಗ ಚೈತನ್ಯ ಇದೆಲ್ಲ ಯಾರೋ ಸೃಷ್ಟಿಸಿದ ಸುದ್ದಿ ಎಂದು ತಳ್ಳಿ ಹಾಕಿದ್ದಾರೆ. ಆದರೆ ಇವರಿಬ್ಬರ ನಡುವಿನ ಪ್ರೀತಿ ಪ್ರೇಮದ ಕುರಿತ ರೂಮರ್ಸ್ಗೆ ಇದೀಗ ರೆಕ್ಕೆಪುಕ್ಕ ಬಂದಿದೆ!
6/ 8
ನಾಗ ಚೈತನ್ಯ ಅವರು ಶೋಭಿತಾ ಜೊತೆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನರಲ್ಲಿ ಮತ್ತೊಮ್ಮೆ ಅನುಮಾನ ಮೂಡಿದೆ. ಫೊಟೋ ನೋಡಿದರೆ ಇಬ್ಬರೂ ಫಾರಿನ್ ಟೂರ್ ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರಂತೆ.
7/ 8
ಆದರೆ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಮಾರ್ಫಿಂಗ್ ಎಂಬುದು ಗೊತ್ತಾಗುತ್ತದೆ. ಬೇರೆ ಬೇರೆ ಸಂದರ್ಭಗಳಲ್ಲಿ ಕಾಣಿಸಿಕೊಂಡಿದ್ದ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಳ್ಳ ಅವರ ಫೋಟೋಗಳನ್ನು ಒಂದೇ ಕಡೆ ಜೋಡಿಸಿ ಮನಸೋ ಇಚ್ಛೆ ಹರಿಬಿಡಲಾಗಿದೆ ಎಂದು ತಿಳಿದುಬಂದಿದೆ.
8/ 8
2010ರಲ್ಲಿ ‘ಈಮಾಯ ಚಲವೆ’ ಸಿನಿಮಾದ ಶೂಟಿಂಗ್ ವೇಳೆ ಸಮಂತಾ ಅವರನ್ನು ಪ್ರೀತಿಸಿದ್ದ ನಾಗ ಚೈತನ್ಯ 2017ರಲ್ಲಿ ವಿವಾಹವಾಗಿದ್ದರು. ಆದಾಗ್ಯೂ, ಅವರ ನಡುವಿನ ಭಿನ್ನಾಭಿಪ್ರಾಯದಿಂದಾಗಿ, ಅವರು 2 ನೇ ಅಕ್ಟೋಬರ್ 2021 ರಂದು ಬೇರ್ಪಡುವುದಾಗಿ ಅಧಿಕೃತ ಹೇಳಿಕೆ ನೀಡಿದ್ದರು.