Naga Chaitanya: ಲಂಡನ್ ಹೋಟಲ್‌ನಲ್ಲಿ ನಟಿ ಜೊತೆ ನಾಗ ಚೈತನ್ಯ! ವಿದೇಶದಲ್ಲಿ ಪಾರ್ಟಿ ಬಲುಜೋರು

Naga Chaitanya: ವಿಚ್ಛೇದನದ ಬಳಿಕ ಸಮಂತಾ ಮತ್ತು ನಾಗ ಚೈತನ್ಯ ಇಬ್ಬರೂ ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ನಟ ನಾಗ ಚೈತನ್ಯ ಲಂಡನ್​ನಲ್ಲಿರುವ ಫೋಟೋ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ನಾಗ ಚೈತನ್ಯ ಜೊತೆ ಇರುವ ನಟಿ ಯಾರು ಅಂತ ಫೋಟೋ ಜೂಮ್ ಮಾಡಿ ನೋಡ್ತಿದ್ದಾರೆ.

First published:

  • 17

    Naga Chaitanya: ಲಂಡನ್ ಹೋಟಲ್‌ನಲ್ಲಿ ನಟಿ ಜೊತೆ ನಾಗ ಚೈತನ್ಯ! ವಿದೇಶದಲ್ಲಿ ಪಾರ್ಟಿ ಬಲುಜೋರು

    ಸಮಂತಾಳನ್ನು ಪ್ರೀತಿಸಿ ಮದುವೆಯಾಗಿದ್ದ ನಾಗ ಚೈತನ್ಯ ಜೊತೆಗಿನ ಕಾರಣಾಂತರಗಳಿಂದ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಅಂದಿನಿಂದ ಈ ಇಬ್ಬರಿಗೆ ಸಂಬಂಧಿಸಿದ ಹಲವು ವಿಷಯಗಳು ಟ್ರೆಂಡಿಂಗ್ ಆಗಿವೆ. ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಮತ್ತು ನಾಗ ಚೈತನ್ಯ ಬಗ್ಗೆ ಲೆಕ್ಕವಿಲ್ಲದಷ್ಟು ವದಂತಿಗಳು ಹರಡಿದೆ.

    MORE
    GALLERIES

  • 27

    Naga Chaitanya: ಲಂಡನ್ ಹೋಟಲ್‌ನಲ್ಲಿ ನಟಿ ಜೊತೆ ನಾಗ ಚೈತನ್ಯ! ವಿದೇಶದಲ್ಲಿ ಪಾರ್ಟಿ ಬಲುಜೋರು

    ಸಮಂತಾ ಮತ್ತು ನಾಗ ಚೈತನ್ಯ ಇಬ್ಬರೂ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಾಗ ಚೈತನ್ಯ ಅವರ ಫೋಟೋ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಫೋಟೋದಲ್ಲಿ ಚೈತು ಜೊತೆಗೆ ನಾಯಕಿ ಸೋಭಿತಾ ಧೂಳಿಪಾಳ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 37

    Naga Chaitanya: ಲಂಡನ್ ಹೋಟಲ್‌ನಲ್ಲಿ ನಟಿ ಜೊತೆ ನಾಗ ಚೈತನ್ಯ! ವಿದೇಶದಲ್ಲಿ ಪಾರ್ಟಿ ಬಲುಜೋರು

    ನಾಗ ಚೈತನ್ಯ, ಸೋಭಿತಾ ಧೂಳಿಪಾಳ ಜೊತೆ ಕ್ಲೋಸ್ ಆಗಿದ್ದಾರೆ ಎನ್ನಲಾಗಿದೆ. ಇಬ್ಬರೂ ಆಗಾಗ ವಿದೇಶಕ್ಕೆ ಟ್ರಿಪ್ ಹೋಗುತ್ತಾರೆ. ನಾಗ ಚೈತನ್ಯ ಆಕೆಯನ್ನು ಹೊಸದಾಗಿ ಕಟ್ಟಿದ ಮನೆಗೆ ಹಲವು ಬಾರಿ ಕರೆದುಕೊಂಡು ಹೋಗಿದ್ದಾರಂತೆ. ನಾಗ ಚೈತನ್ಯ ಸೋಭಿತಾಳನ್ನು ಮದುವೆಯಾಗ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

    MORE
    GALLERIES

  • 47

    Naga Chaitanya: ಲಂಡನ್ ಹೋಟಲ್‌ನಲ್ಲಿ ನಟಿ ಜೊತೆ ನಾಗ ಚೈತನ್ಯ! ವಿದೇಶದಲ್ಲಿ ಪಾರ್ಟಿ ಬಲುಜೋರು

    ಈ ರೂಮರ್ಸ್ ನಡುವೆ ನಾಗ ಚೈತನ್ಯ ಅವರ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ನಾಗ ಚೈತನ್ಯ-ಸೋಭಿತಾ ಧೂಳಿಪಾಲ ಲಂಡನ್ನಲ್ಲಿ ಡಿನ್ನರ್ ಡೇಟ್​ಗೆ ಒಟ್ಟಿಗೆ ಹೋಗಿದ್ದಾರೆ. ಈ ಫೋಟೋವನ್ನು ಚೈತು ಅಥವಾ ಶೋಭಿತಾ ಹಂಚಿಕೊಂಡಿಲ್ಲ. ಹೋಟೆಲ್ ಸಿಬ್ಬಂದಿ ಸೋಶಿಯಲ್ ಮೀಡಿಯದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

    MORE
    GALLERIES

  • 57

    Naga Chaitanya: ಲಂಡನ್ ಹೋಟಲ್‌ನಲ್ಲಿ ನಟಿ ಜೊತೆ ನಾಗ ಚೈತನ್ಯ! ವಿದೇಶದಲ್ಲಿ ಪಾರ್ಟಿ ಬಲುಜೋರು

    ಹೋಟೆಲ್ ಸಿಬ್ಬಂದಿ ಸುರೇಂದರ್ ಮೋಹನ್, ಸೆಲೆಬ್ರಿಟಿಯಾಗಿರುವ ನಾಗ ಚೈತನ್ಯ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಆದರೆ ಅವರ ಹಿಂದೆ ಟೇಬಲ್​ನಲ್ಲಿ ಶೋಭಿತಾ ಕೂಡ ಕುಳಿತಿದ್ದಾರೆ. ಫೋಟೋಗೆ ನಟಿ ಪೋಸ್ ಕೊಡದಿದ್ರೂ ಅನಿರೀಕ್ಷಿತವಾಗಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 67

    Naga Chaitanya: ಲಂಡನ್ ಹೋಟಲ್‌ನಲ್ಲಿ ನಟಿ ಜೊತೆ ನಾಗ ಚೈತನ್ಯ! ವಿದೇಶದಲ್ಲಿ ಪಾರ್ಟಿ ಬಲುಜೋರು

    ಈ ಫೋಟೋದಲ್ಲಿ ನಾಗಚೈತನ್ಯ ಹಿಂದೆ ಟೇಬಲ್ ಬಳಿ ಶೋಭಿತಾ ಕುಳಿತಿರುವುದನ್ನು ಗಮನಿಸಿದ ನೆಟ್ಟಿಗರು ನಾಗ ಚೈತನ್ಯ ಜೊತೆ ಡೇಟಿಂಗ್ ಮಾಡುತ್ತಿರೋದು ಪಕ್ಕಾ ಎನ್ನುತ್ತಿದ್ದಾರೆ. ಸೊಭಿತಾ ಹಾಗೂ ನಾಗ ಚೈತನ್ಯ ಲಂಡನ್ ಹೋಟೆಲ್ಗೆ ಏಕೆ ಹೋಗಿದ್ದಾರೆ? ಅವರು ಖಂಡಿತವಾಗಿಯೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ

    MORE
    GALLERIES

  • 77

    Naga Chaitanya: ಲಂಡನ್ ಹೋಟಲ್‌ನಲ್ಲಿ ನಟಿ ಜೊತೆ ನಾಗ ಚೈತನ್ಯ! ವಿದೇಶದಲ್ಲಿ ಪಾರ್ಟಿ ಬಲುಜೋರು

    ಈ ಹಿಂದೆಯೂ ನಾಗ ಚೈತನ್ಯ ಅವರು ಸೋಭಿತಾ ಜೊತೆಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಅನುಮಾನ ಮೂಡಿಸಿದ್ದನ್ನು ನೋಡಿದ್ದೇವೆ. ವಿದೇಶಿ ಪ್ರವಾಸದ ವೇಳೆ ಇಬ್ಬರು ಫೋಟೋಗೆ ಪೋಸ್ ನೀಡಿದ್ದರು  ನಂತರ ಅದು ಮಾರ್ಫಿಂಗ್ ಫೋಟೋ ಎಂದು ತಿಳಿದು ಬಂದಿದೆ.

    MORE
    GALLERIES