ಸಮಂತಾ ಜೊತೆ ನಾಗ ಚೈತನ್ಯ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಬ್ಬರೂ ‘ಮಾಯ ಕಾಲವೇ‘ ಚಿತ್ರದ ಮೂಲಕ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ನಂತರ ಆಟೋನಗರ, ಮಜಿಲಿ, ಮನಂ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಪ್ರೀತಿಸಿ ಹಿರಿಯರ ಮನವೊಲಿಸಿ ಮದುವೆಯಾದ ಈ ಜೋಡಿ ಬಳಿಕ ಕೆಲ ವರ್ಷಗಳ ನಂತರ ವಿಚ್ಛೇದನ ನೀಡುವ ಮೂಲಕ ಬೇರೆ ಬೇರೆ ಆಗಿದ್ದಾರೆ.
ವಿಚ್ಛೇದನದ ನಂತರವೂ ಅವರು ಎಲ್ಲಿಯೂ ಒಬ್ಬರನ್ನೊಬ್ಬರು ಟೀಕಿಸಲಿಲ್ಲ ಅಥವಾ ಆರೋಪ ಮಾಡಲಿಲ್ಲ. ಇನ್ನು, ನಾಗ ಚೈತನ್ಯ ಸದ್ಯ ‘ಥ್ಯಾಂಕ್ಯೂ‘ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಾಗ ಚೈತನ್ಯ ಮೂರು ವಿಭಿನ್ನ ಲುಕ್ಗಳಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರವನ್ನು ವಿಕ್ರಮ್ ಕೆ ಕುಮಾರ್ ನಿರ್ದೇಶಿಸಿದ್ದಾರೆ.