ಟಾಲಿವುಡ್ನ ಯಂಗ್ ಹೀರೋ, ಅಕ್ಕಿನೇನಿ ಉತ್ತರಾಧಿಕಾರಿ ನಾಗ ಚೈತನ್ಯ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದೆಡೆ ಸಿನಿಮಾ ಮಾಡುತ್ತಿದ್ದರೆ ಇನ್ನೊಂದೆಡೆ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ನಲ್ಲೂ ಸಿನಿಮಾ ಮಾಡುತ್ತಿದ್ದಾರೆ. ಆದರೆ ಅವರ ಇತ್ತೀಚಿನ ಸಿನಿಮಾ ಪ್ರಚಾರದ ಭಾಗವಾಗಿ, ಅವರು ಕೆಲವು ವಿಷಯಗಳನ್ನು ಮಾತನಾಡಿ ಎಲ್ಲರನ್ನು ಅಚ್ಚರಿಗೊಳಿಸಿದರು.
ವಿಕ್ರಮ್ ಕೆ.ಕುಮಾರ್ ನಿರ್ದೇಶನದ ಥ್ಯಾಂಕ್ಯೂ ಸಿನಿಮಾದಲ್ಲಿ ನಾಗ ಚೈತನ್ಯ ಮೂರು ವಿಭಿನ್ನ ಲುಕ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಶಿ ಖನ್ನಾ, ಮಾಳವಿಕಾ ನಾಯರ್ ಮತ್ತು ಅವಿಕಾ ಗೋರ್ ನಟಿಸಿದ್ದಾರೆ. ಮನಂ ಸಿನಿಮಾದ ನಂತರ ವಿಕ್ರಮ್-ಚೈತನ್ಯ ಕಾಂಬೋ ಬರುತ್ತಿರುವುದರಿಂದ ಈ ಸಿನಿಮಾದ ಬಗ್ಗೆ ಜನರಲ್ಲಿ ನಿರೀಕ್ಷೆ ಹೆಚ್ಚಿದೆ. ಈ ಚಿತ್ರಕ್ಕಾಗಿ ಅಕ್ಕಿನೇನಿ ಅಭಿಮಾನಿಗಳು ಕಾಯುತ್ತಿದ್ದಾರೆ.