Naga Chaitanya: ಶ್ರುತಿ ಹಾಸನ್ ಪ್ರೀತಿಸಿ ಸಮಂತಾಳನ್ನು ಮದುವೆ ಆಗಿದ್ಯಾಕೆ ನಾಗ ಚೈತನ್ಯ? ಇದು ಲವ್, ಬ್ರೇಕಪ್, ಡಿವೋರ್ಸ್ ಸ್ಟೋರಿ!
Naga chaitanya Affairs And Breakup: ಟಾಲಿವುಡ್ ನಟ ನಾಗಾರ್ಜುನ ಪುತ್ರ ನಾಗ ಚೈತನ್ಯ ಸಿನಿಮಾಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರದಲ್ಲೇ ಸುದ್ದಿಯಾಗಿದ್ದಾರೆ. ಸಮಂತಾ ಜೊತೆ ಮದುವೆಗೂ ಮುನ್ನ ನಾಗಚೈತನ್ಯ ಶ್ರುತಿ ಹಾಸನ್ ಜೊತೆ ಡೇಟಿಂಗ್ ಮಾಡ್ತಿದ್ರು ಎನ್ನುವ ಸುದ್ದಿ ಹೊರಬಿದ್ದಿದೆ.
ಟಾಲಿವುಡ್ನಲ್ಲಿ ಅನೇಕ ಸಿನಿಮಾಗಳನ್ನು ಮಾಡಿರುವ ನಾಗ ಚೈತನ್ಯ, ಸಮಂತಾರನ್ನು ಲವ್ ಮಾಡುವುದಕ್ಕೂ ಮೊದಲು ಶ್ರುತಿ ಹಾಸನ್ ರನ್ನು ಪ್ರೀತಿ ಮಾಡ್ತಿದ್ದರಂತೆ ಆದ್ರೆ ಕೆಲ ದಿನಗಳ ಬಳಿಕ ಇಬ್ಬರ ನಡುವಿನ ಲವ್ ಬ್ರೇಕಪ್ ನಲ್ಲಿ ಕೊನೆಗೊಂಡಿದೆ.
2/ 8
ನಾಗ ಚೈತನ್ಯ 2013ರಲ್ಲೇ ಶ್ರುತಿ ಹಾಸನ್ ಅವರನ್ನು ಪ್ರೀತಿಸುತ್ತಿದ್ದರು. ಅನೇಕ ಬಾರಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 2013ರಲ್ಲಿಯೇ ನಡೆದ ಸೌತ್ ಇಂಡಿಯನ್ ಫಿಲ್ಮ್ ಫೇರ್ ಅವಾರ್ಡ್ ನೈಟ್ ನಲ್ಲಿ ಇಬ್ಬರೂ ತುಂಬಾ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದಾರೆ. ಬಳಿಕ ಇಬ್ಬರೂ ಮದುವೆಯಾಗ್ತಾರೆ ಎನ್ನುವ ಸುದ್ದಿ ಕೂಡ ಹರಡಿತ್ತು.
3/ 8
ಶ್ರುತಿ ಜೊತೆ ಬ್ರೇಕ್ ಅಪ್ ಆಗಲೂ ಅಕ್ಷರಾ ಹಾಸನ್ ಕಾರಣ ಎನ್ನಲಾಗಿದೆ. ಅಕ್ಷರಾ ಹಾಸನ್ರಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು, ಆಮೇಲೆ ಒಬ್ಬರ ಜೊತೆ ಒಬ್ಬರು ಮಾತಾಡೋದನ್ನೇ ಬಿಟ್ಟರಂತೆ.
4/ 8
ಶ್ರುತಿ ಜೊತೆ ಬ್ರೇಕಪ್ ಬಳಿಕ ನಾಗ ಚೈತನ್ಯ, ನಟಿ ಸಮಂತಾ (Naga chaitanya-Samantha) ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. 2016 ರಲ್ಲಿ 'ಪ್ರೇಮಂ' ಚಿತ್ರದಲ್ಲಿ ಸಮಂತಾರನ್ನು ಮೊದಲ ಬಾರಿಗೆ ಭೇಟಿಯಾದರು. ಇಬ್ಬರ ಸ್ನೇಹ ಬಳಿಕ ಪ್ರೀತಿಯಾಗಿ ಬೆಳೆಯಿತು.
5/ 8
ಸಮಂತಾ ಮತ್ತು ನಾಗ ಚೈತನ್ಯ 1 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದಾರೆ. 2017 ರಲ್ಲಿ ಮದುವೆಯಾಗಲು ನಿರ್ಧರಿಸಿದರು. ಜನವರಿಯಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು ಬಳಿಕ ಅಕ್ಟೋಬರ್ನಲ್ಲಿ ವಿವಾಹವಾಗಿದ್ದಾರೆ. ಅದ್ಧೂರಿಯಾಗಿ ವಿವಾಹ ಫೋಟೋಗಳು ಸಖತ್ ವೈರಲ್ ಆಗಿತ್ತು.
6/ 8
ಟಾಲಿವುಡ್ನ ಕ್ಯೂಟ್ ಕಪಲ್ ಆಗಿದ್ದ ಸಮಂತಾ-ನಾಗ ಚೈತನ್ಯ ಜೋಡಿ ಬಹುಕಾಲ ಒಟ್ಟಿಗೆ ಉಳಿಯಲಿಲ್ಲ. 4 ವರ್ಷಗಳ ನಂತರ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ವಿಚ್ಛೇದನದ ಸುದ್ದಿಯನ್ನು ಅವರೇ ಸೋಶಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.
7/ 8
ವಿಚ್ಛೇದನದ ಬಳಿಕ ಸಮಂತಾ ಮೇಲೆ ಹಲವು ಆರೋಪಗಳು ಕೇಳಿ ಬಂದಿದೆ. ತಾಯಿಯಾಗಲು ಇಷ್ಟವಿಲ್ಲದೇ ನಾಗ ಚೈತನ್ಯ ಜೊತೆ ವಿಚ್ಛೇದನ ಪಡೆದಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬಂದಿತ್ತು. ಆದ್ರೆ ಯಾವ ವಿಚಾರಕ್ಕೂ ಸಮಂತಾ ಪ್ರತಿಕ್ರಿಯೆ ನೀಡಿಲ್ಲ.
8/ 8
ಸಮಂತಾ ಮತ್ತು ನಾಗ ಚೈತನ್ಯ ನಡುವಿನ ಸಂಬಂಧದಲ್ಲಿ ಬಿರುಕು ಮೂಡಲು ಕಾರಣ ಏನು ಎಂಬುದು ಇದುವರೆಗೂ ಬಹಿರಂಗವಾಗಿಲ್ಲ. ಇದೀಗ ಇಬ್ಬರೂ ತಮ್ಮ ತಮ್ಮ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ.