Nabha Natesh: ನಭಾ ನಟೇಶ್ಗೆ ಭೀಕರ ಅಪಘಾತ, ತೀವ್ರ ಗಾಯ! ಸರ್ಜರಿ ಬಳಿಕ ನಟಿ ಹೇಳಿದ್ದೇನು?
ಕನ್ನಡದ ವಜ್ರಕಾಯ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಟಿ ನಭಾ ನಟೇಶ್ ಬಗ್ಗೆ ಶಾಕಿಂಗ್ ಮಾಹಿತಿಯೊಂದು ಹೊರಬಿದ್ದಿದೆ. ಭೀಕರ ಅಪಘಾತದಿಂದ ನಟಿಗೆ ತೀವ್ರವಾಗಿ ಗಾಯಗೊಂಡಿದ್ದರಂತೆ ಈಗ ಹೇಗಿದ್ದಾರೆ?
2021ರ ಬಳಿಕ ನಭಾನಟೇಶ್ ಅವರ ಯಾವ ಸಿನಿಮಾಗಳು ರಿಲೀಸ್ ಆಗಿಲ್ಲ. ಯಾಕೆ ಅಂದ್ರೆ ಅವರು ಯಾವ ಸಿನಿಮಾವನ್ನು ಸಹ ಒಪ್ಪಿಕೊಂಡಿಲ್ವಂತೆ. ಕಾರಣ ಅವರಿಗಾದ ಅಪಘಾತ.
2/ 8
ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಭಾ ನಟೇಶ್ ಕೈಗೆ ಹಲವು ಭಾರೀ ಆಪರೇಷನ್ ಕೂಡ ಮಾಡಲಾಗಿದೆಯಂತೆ.
3/ 8
2022ರಲ್ಲಿ ನಭಾ ನಟೇಶ್ಗೆ ಅಪಘಾತ ಸಂಭವಿಸಿದೆ ಬಳಿಕ ನಟಿ ಆಸ್ಪತ್ರೆಯಲ್ಲಿ ಹಲವು ದಿನಗಳು ಕಳೆದಿದ್ದಾರಂತೆ ಈ ಬಗ್ಗೆ ನಟಿಯೇ ಹೇಳಿಕೊಂಡಿದ್ದಾರೆ.
4/ 8
ಫೋಟೋ ಶೇರ್ ಮಾಡಿದ ನಟಿ ನಭಾ, ಇನ್ಸ್ಟಾಗ್ರಾಮ್ ನಲ್ಲಿ ನಾನು ತೀವ್ರ ಅಪಘಾತಕ್ಕೊಳಪಟ್ಟಿದ್ದೆ ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಎಡ ಭುಜದ ಸಮೀಪ ಸರ್ಜರಿ ಮಾಡಿದ ಗುರುತು ಕಾಣಬಹುದು.
5/ 8
ಅಪಘಾತದಲ್ಲಿ ಎಡಗೈ ಹಾಗೂ ಎಡ ಭುಜಕ್ಕೆ ಪೆಟ್ಟಾಗಿತ್ತು. ಇದರಿಂದ ಹಲವು ಬಾರಿ ಅವರು ಸರ್ಜರಿಗೆ ಒಳಗಾಗಿದ್ದೇನೆ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
6/ 8
ಅಪಘಾತವಾಗಿ ಹಲವು ದಿನಗಳೇ ಕಳೆದಿದ್ದು, ಸದ್ಯಕ್ಕೆ ಚೇತರಿಸಿಕೊಂಡಿದ್ದಾರೆ. ಶೀಘ್ರವೇ ಸಿನಿಮಾಗ ಮೂಲಕ ತೆರೆ ಮೇಲೆ ಬರಲಿದ್ದಾರೆ.
7/ 8
ಇನ್ನು ನಭಾ ನಟೇಶ್ಗೆ ಆದ ಅಪಘಾತದ ಶಾಕಿಂಗ್ ಸುದ್ದಿ ತಿಳಿದ ಅಭಿಮಾನಿಗಳು, ಬೇಗ ಕಂಬ್ಯಾಕ್ ಮಾಡಲಿ ಎಂದು ಫ್ಯಾನ್ಸ್ ಕಮೆಂಟ್ ಮಾಡ್ತಿದ್ದಾರೆ.
8/ 8
ನಟಿ ನಭಾ ನಟೇಶ್ ಅವರು 2015ರಲ್ಲಿ ರಿಲೀಸ್ ಆದ ಕನ್ನಡದ ‘ವಜ್ರಕಾಯ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. 2019ರಲ್ಲಿ ರಿಲೀಸ್ ಆದ ತೆಲುಗಿನ ‘ಇಸ್ಮಾರ್ಟ್ ಶಂಕರ್’ ಚಿತ್ರದ ಮತ್ತಷ್ಟು ಜನಪ್ರಿಯತೆ ಪಡೆದರು.