ಈ ಬಾರಿ ಆಸ್ಕರ್ ವೇದಿಕೆಯಲ್ಲಿ NTR ಮತ್ತು ರಾಮ್ ಚರಣ್ ಒಟ್ಟಿಗೆ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸದ್ಯವಿಲ್ಲ ಎಂದು NTR ಸ್ಪಷ್ಟಪಡಿಸಿದ್ದಾರೆ. ಹಾಲಿವುಡ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಆದರೆ ಆಸ್ಕರ್ ವೇದಿಕೆಯಲ್ಲಿ ಸಂಗೀತ ನಿರ್ದೇಶಕ ಕೀರವಾಣಿ, ಗಾಯಕರಾದ ಕಾಲಭೈರವ ಮತ್ತು ರಾಹುಲ್ ಸಿಪ್ಲಿಗಂಜ್ ಅವರ ಲೈವ್ ಶೋ ಇರಲಿದೆ.