Music Director Keeravani: ಪ್ರತಿ ಸಿನಿಮಾಗೆ M M ಕೀರವಾಣಿ ಪಡೆಯುವ ಸಂಭಾವನೆ ಎಷ್ಟು? ಆಸ್ಕರ್ ಗೆದ್ದ ಬಳಿಕ ಹೆಚ್ಚಿದ ಡಿಮ್ಯಾಂಡ್​

RRR ಸಿನಿಮಾದ ನಾಟು ನಾಟು ಹಾಡಿನ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳ ಮನಗೆದ್ದ M.M ಕೀರವಾಣಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಅಸ್ಕರ್ ಸಿಕ್ಕ ಖುಷಿಯಲ್ಲಿರುವ ಕೀರವಾಣಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಪ್ರತಿ ಸಿನಿಮಾಗೆ ಇವ್ರು ಸಂಭಾವನೆ ಎಷ್ಟು ಅಂತ ತಿಳಿದುಕೊಳ್ಳೋಣ.

First published:

  • 18

    Music Director Keeravani: ಪ್ರತಿ ಸಿನಿಮಾಗೆ M M ಕೀರವಾಣಿ ಪಡೆಯುವ ಸಂಭಾವನೆ ಎಷ್ಟು? ಆಸ್ಕರ್ ಗೆದ್ದ ಬಳಿಕ ಹೆಚ್ಚಿದ ಡಿಮ್ಯಾಂಡ್​

    ಜಾಗತಿಕ ಮಟ್ಟದಲ್ಲಿ ಸಂಗೀತ ನಿರ್ದೇಶಕ M.M ಕೀರವಾಣಿ ಅವರು ಮಿಂಚುತ್ತಿದ್ದಾರೆ. ನಾಟು ನಾಟು ಅವರಿಗೆ ತಂದು ಕೊಟ್ಟ ಕೀರ್ತಿ ಅಷ್ಟಿಷ್ಟಲ್ಲ. ಆಸ್ಕರ್ ಪಡೆಯುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವ ಕೆಲಸ ಮಾಡಿದ್ದಾರೆ.

    MORE
    GALLERIES

  • 28

    Music Director Keeravani: ಪ್ರತಿ ಸಿನಿಮಾಗೆ M M ಕೀರವಾಣಿ ಪಡೆಯುವ ಸಂಭಾವನೆ ಎಷ್ಟು? ಆಸ್ಕರ್ ಗೆದ್ದ ಬಳಿಕ ಹೆಚ್ಚಿದ ಡಿಮ್ಯಾಂಡ್​

    ಹಲವು ವರ್ಷಗಳಿಂದ ಸಿನಿಮಾ ಲೋಕದಲ್ಲಿರುವ ಕೀರವಾಣಿ ತೆಲುಗು, ತಮಿಳು ಹಾಗೂ ಕನ್ನಡ ಸೇರಿದಂತೆ ಅನೇಕ ಭಾಷೆಗಳ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದು, ಸೂಪರ್ ಹಿಟ್ ಸಾಂಗ್​​ಗಳನ್ನು ನೀಡಿದ್ದಾರೆ. ಪ್ರತಿ ಸಿನಿಮಾಗೂ ಇವ್ರು ದುಬಾರಿ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ.

    MORE
    GALLERIES

  • 38

    Music Director Keeravani: ಪ್ರತಿ ಸಿನಿಮಾಗೆ M M ಕೀರವಾಣಿ ಪಡೆಯುವ ಸಂಭಾವನೆ ಎಷ್ಟು? ಆಸ್ಕರ್ ಗೆದ್ದ ಬಳಿಕ ಹೆಚ್ಚಿದ ಡಿಮ್ಯಾಂಡ್​

    ನಿರ್ದೇಶಕ ಎಸ್.ಎಸ್. ರಾಜಮೌಳಿ ಎಲ್ಲಾ ಸಿನಿಮಾಗಳು ಎಂ.ಎಂ. ಕೀರವಾಣಿ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಇಬ್ಬರದ್ದು ಹಿಟ್ ಕಾಂಬಿನೇಷನ್ ಆಗಿದೆ. ಇದೀಗ ಬಹುಭಾಷೆಯಲ್ಲೂ ಕೀರವಾಣಿಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

    MORE
    GALLERIES

  • 48

    Music Director Keeravani: ಪ್ರತಿ ಸಿನಿಮಾಗೆ M M ಕೀರವಾಣಿ ಪಡೆಯುವ ಸಂಭಾವನೆ ಎಷ್ಟು? ಆಸ್ಕರ್ ಗೆದ್ದ ಬಳಿಕ ಹೆಚ್ಚಿದ ಡಿಮ್ಯಾಂಡ್​

    ಸಂಗೀತ ಲೋಕದಲ್ಲಿ ಎಂ.ಎಂ ಕೀರವಾಣಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಪ್ರತಿ ಸಿನಿಮಾಗೆ ಅವರು ದುಬಾರಿ ಸಂಭಾವನೆ (MM Keeravani Remuneration) ಪಡೆಯುತ್ತಾರೆ. ಈಗ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದಿರುವುದರಿಂದ ಅವರಿಗೆ ಇದ್ದ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ.

    MORE
    GALLERIES

  • 58

    Music Director Keeravani: ಪ್ರತಿ ಸಿನಿಮಾಗೆ M M ಕೀರವಾಣಿ ಪಡೆಯುವ ಸಂಭಾವನೆ ಎಷ್ಟು? ಆಸ್ಕರ್ ಗೆದ್ದ ಬಳಿಕ ಹೆಚ್ಚಿದ ಡಿಮ್ಯಾಂಡ್​

    ‘ಬಾಹುಬಲಿ’, ‘RRR’ ಚಿತ್ರದ ಹಾಡುಗಳು ಸಖತ್ ಫೇಮಸ್ ಆಗಿ ಕೀರವಾಣಿ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡ್ರು. ಕೀರವಾಣಿ ಪ್ರತಿ ಸಿನಿಮಾಗೆ  18 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿತ್ತು.

    MORE
    GALLERIES

  • 68

    Music Director Keeravani: ಪ್ರತಿ ಸಿನಿಮಾಗೆ M M ಕೀರವಾಣಿ ಪಡೆಯುವ ಸಂಭಾವನೆ ಎಷ್ಟು? ಆಸ್ಕರ್ ಗೆದ್ದ ಬಳಿಕ ಹೆಚ್ಚಿದ ಡಿಮ್ಯಾಂಡ್​

    ಇದೀಗ RRR ಸಿನಿಮಾ ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದ್ದು, ಕೀರವಾಣಿ ಅವರ ಡಿಮ್ಯಾಂಡ್ ಮತ್ತಷ್ಟು ಹೆಚ್ಚಿದೆ. ಜಾಗತಿಕ ಮಟ್ಟದಲ್ಲಿ ಗುರುತಿಸಿ ಕೊಂಡಿದ್ದು, ಇದೀಗ ಅವರ ಸಂಭಾವನೆ ಕೂಡ ಮತ್ತಷ್ಟು ಏರಿಕೆ ಆಗಲಿದೆ

    MORE
    GALLERIES

  • 78

    Music Director Keeravani: ಪ್ರತಿ ಸಿನಿಮಾಗೆ M M ಕೀರವಾಣಿ ಪಡೆಯುವ ಸಂಭಾವನೆ ಎಷ್ಟು? ಆಸ್ಕರ್ ಗೆದ್ದ ಬಳಿಕ ಹೆಚ್ಚಿದ ಡಿಮ್ಯಾಂಡ್​

    ರಾಜಮೌಳಿ ಅವರು ಮುಂಬರುವ ದಿನಗಳಲ್ಲಿ ಹಾಲಿವುಡ್​ಗೆ ಲಗ್ಗೆ ಇಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ರಾಜಮೌಳಿ ಹಾಲಿವುಡ್ ಸಿನಿಮಾ ಮಾಡಿದರೆ ಆ ಚಿತ್ರಕ್ಕೂ ಕೂಡ ಎಂಎಂ ಕೀರವಾಣಿ ಅವರೇ ಸಂಗೀತ ನೀಡಲಿದ್ದಾರೆ.

    MORE
    GALLERIES

  • 88

    Music Director Keeravani: ಪ್ರತಿ ಸಿನಿಮಾಗೆ M M ಕೀರವಾಣಿ ಪಡೆಯುವ ಸಂಭಾವನೆ ಎಷ್ಟು? ಆಸ್ಕರ್ ಗೆದ್ದ ಬಳಿಕ ಹೆಚ್ಚಿದ ಡಿಮ್ಯಾಂಡ್​

    ಎಂ.ಎಂ ಕೀರವಾಣಿ ಅವರು ಹಾಲಿವುಡ್ ಪ್ರೊಡಕ್ಷನ್ ಕಂಪನಿಗಳ ಜೊತೆ ಕೈ ಜೋಡಿಸಿದರೆ ನಿರೀಕ್ಷೆಗೂ ಮೀರಿದ ಸಂಭಾವನೆಯನ್ನು ಎಂಎಂ ಕೀರವಾಣಿ ಪಡೆಯಲಿದ್ದಾರೆ. ಎಂಎಂ ಕೀರವಾಣಿ ಆಸ್ಕರ್ ಜೊತೆಗೆ ಒಮ್ಮೆ ರಾಷ್ಟ್ರ ಪ್ರಶಸ್ತಿ, 8 ಬಾರಿ ಫಿಲ್ಮ್​ಫೇರ್ ಪ್ರಶಸ್ತಿ, 11 ಬಾರಿ ‘ನಂದಿ ಅವಾರ್ಡ್ಸ್’ ಪಡೆದಿದ್ದಾರೆ.

    MORE
    GALLERIES