Mysterious Deaths: ಹತ್ಯೆಯೋ? ಆತ್ಮಹತ್ಯೆಯೋ? ನಿಗೂಢವಾಗಿದೆ ಈ ನಟ-ನಟಿಯರ ಸಾವಿನ ರಹಸ್ಯ!
ಸಿನಿಮಾ ಮೂಲಕ ರಂಜಿಸಿ ಜನರಿಗೆ ಹತ್ತಿರವಾದ ಕೆಲವು ನಟ-ನಟಿಯರ ಹಠಾತ್ ಸಾವು ಅಭಿಮಾನಿಗಳಲ್ಲಿ ಬೇಸರ ಮೂಡಿಸುತ್ತದೆ. ಅಷ್ಟೇ ಅಲ್ಲದೇ ಅವರ ಅಚಾನಕ್ ಆದ ಸಾವು ಕೊಲೆಯೋ ಆತ್ಮಹತ್ಯೆಯೋ ಎಂಬ ಪ್ರಶ್ನೆಯನ್ನು ಮೂಡಿಸುತ್ತದೆ. ಭಾರತೀಯ ಚಿತ್ರರಂಗದಲ್ಲಿ ಆ ರೀತಿ ಪ್ರಶ್ನೆ ಮೂಡಿಸಿದ ಅನೇಕ ನಟ-ನಟಿಯರ ಸಾವಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ
ಸಿನಿಮಾ ಮೂಲಕ ರಂಜಿಸಿ ಜನರಿಗೆ ಹತ್ತಿರವಾದ ಕೆಲವು ನಟ-ನಟಿಯರ ಹಠಾತ್ ಸಾವು ಅಭಿಮಾನಿಗಳಲ್ಲಿ ಬೇಸರ ಮೂಡಿಸುತ್ತದೆ. ಅಷ್ಟೇ ಅಲ್ಲದೇ ಅವರ ಅಚಾನಕ್ ಆದ ಸಾವು ಕೊಲೆಯೋ ಆತ್ಮಹತ್ಯೆಯೋ ಎಂಬ ಪ್ರಶ್ನೆಯನ್ನು ಮೂಡಿಸುತ್ತದೆ. ಭಾರತೀಯ ಚಿತ್ರರಂಗದಲ್ಲಿ ಆ ರೀತಿ ಪ್ರಶ್ನೆ ಮೂಡಿಸಿದ ಅನೇಕ ನಟ-ನಟಿಯರ ಸಾವಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ
2/ 12
ಜೂನ್ನಲ್ಲಿ ಸಾವನ್ನಪ್ಪಿದ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಕಾರಣ ಹುಡುಕುವಲ್ಲಿ ಇನ್ನು ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಲೇ ಇದ್ದಾರೆ.
3/ 12
ಮಾಡಿದ ಬೆರಳೆಣಿಕೆ ಸಿನಿಮಾದಲ್ಲಿ ಎಲ್ಲರನ್ನು ರಂಜಿಸಿದ್ದ ಸೌಂದರ್ಯವತಿ ನಟಿ ನಿವೇದಿತ ಜೈನ್. ಮಹಡಿ ಮೇಲಿಂದ ಬಿದ್ದು ಗಂಭೀರ ಗಾಯಗೊಂಡ ಸಾವನ್ನಪ್ಪಿದ ಈ ನಟಿ ಸಾವು ಅಸಹಜ ಎಂಬ ಅನುಮಾನವಿದೆ.
4/ 12
ಅಮಿತಾಬ್ ಬಚ್ಚನ್ ಜೊತೆ ನಟಿಸಿ ಬಾಲಿವುಡ್ನಲ್ಲಿ ಸದ್ದು ಮಾಡಿದ್ದ ಜಿಯಾ ಖಾನ್ ಸಾವು ಕೂಡ ಅಸಹಜ ಎಂದು ಆಕೆಯ ತಾಯಿ ಆರೋಪಿಸಿದ್ದಾರೆ. ಸುರಾಜ್ ಪಚೋಲಿಯೇ ಆಕೆ ಸಾವಿಗೆ ಕಾರಣ ಎನ್ನಲಾಗಿದೆ ಆದರೆ, ಈ ಸಾವಿಗೆ ಇನ್ನು ನ್ಯಾಯ ಸಿಕ್ಕಿಲ್ಲ.
5/ 12
ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ದಿವ್ಯ ಭಾರತಿ 19ನೇ ವಯಸ್ಸಿಗೆ ಸಾವನ್ನಪ್ಪಿದ್ದರು.
6/ 12
50ರ ಹರೆಯದಲ್ಲಿಯೂ ಎಲ್ಲರ ಮೋಡಿ ಮಾಡುತ್ತಿದ್ದ ನಟಿ ಶ್ರೀದೇವಿ, ದುಬೈನಲ್ಲಿ ಬಾತ್ ಟಬ್ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಈ ಸಾವಿನ ಕುರಿತು ಹಲವು ಅನುಮಾನ ವ್ಯಕ್ತವಾಗಿದ್ದವು.
7/ 12
ಪರ್ವಿನ್ ಬಾಬಿ ಬಾಲಿವುಡ್ನ ಹಿರಿಯ ನಟಿ. 2005ರಲ್ಲಿ ತಮ್ಮ ಮನೆಯಲ್ಲಿಯೇ ಸಾವನ್ನಪ್ಪಿದ್ದರು. ಇವರು ಸಾವನ್ನಪ್ಪಿದ ಮೂರು ದಿನದ ಬಳಿಕ ಈ ವಿಷಯ ಬಯಲಾಗಿತ್ತು.
8/ 12
ಸಿಲ್ಕ್ಸ್ಮಿತಾ ಕನ್ನಡ ಮಾತ್ರವಲ್ಲದೇ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಾದಕ ನಟಿಯಾಗಿ ರಂಜಿಸಿದವರು ಆರ್ಥಿಕ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದರೂ ಕೆಲವರು ಇದರಲ್ಲಿ ಅನುಮಾನ ವ್ಯಕ್ತಪಡಿಸಿದರು.
9/ 12
ಬಾಲಿವುಡ್ ಮಾಡೆಲ್ ನಸೀಫಾ ಜೋಸೆಫ್ ಆತ್ಮಹತ್ಯೆ ಕೂಡ ಅನೇಕ ಪ್ರಶ್ನೆ ಹುಟ್ಟು ಹಾಕಿತ್ತು.
10/ 12
ಬಾಲಿವುಡ್ ಆಳಿದ ನಟರಲ್ಲಿ ಒಬ್ಬರಾದ ಗುರುದತ್ ಅಧಿಕ ನಿದ್ರೆ ಮಾತ್ರೆ ಸೇವಿಸಿ ಸಾವನ್ನಪ್ಪಿದ್ದರು. ಇವರ ಸಾವು ಕೂಡ ಆತ್ಮಹತ್ಯೆಯಾ ಅನುಮಾನವಾ ಎಂಬ ಪ್ರಶ್ನೆ ಮೂಡಿಸಿದೆ. .
11/ 12
ಇಂದಿಗೂ ಮರ್ಲಿನಾ ಮನ್ರೋ ಎಂಬ ಹೆಸರು ಕೇಳಿದರೆ ಹಲವರು ಹಾರ್ಟ್ ಬೀಟ್ ಹೆಚ್ಚುತ್ತದೆ. ಅತಿ ವರ್ಣರಂಜಿತವಾಗಿದ್ದ ಈ ತಾರೆ ಸಾವಿಗೂ ಕೂಡ ಉತ್ತರ ಸಿಕ್ಕಿಲ್ಲ.
12/ 12
ಬ್ರೂಸ್ಲಿ ಸಾವು ಕೂಡ ಹಲವರಲ್ಲಿ ಅನುಮಾನ ಹುಟ್ಟುಹಾಕಿತ್ತು. ಇವರಿಗೆ ಚುಚ್ಚುಮದ್ದು ನೀಡಿ ಸಾಯಿಸಲಾಯಿತು ಎಂಬ ವಾದ ಕೂಡ ಇದೆ.