Actor Chetan Marriage: ಹಸಿರು ಶಾಲು ಹೊದ್ದು, ಸರಳವಾಗಿ ಮದುವೆಯಾದ ನಟ ಚೇತನ್
Chetan- Megha Wedding: ಆ ದಿನಗಳು ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ ನಟ ಚೇತನ್. ಚಿತ್ರರಂಗದಲ್ಲಿ ನಟನಾಗಿ ಮಾತ್ರವಲ್ಲದೆ ಸಾಮಾಜಿಕ ಕಾರ್ಯಕರ್ತನಾಗಿಯೂ ತೊಡಗಿಸಿಕೊಂಡಿರುವ ಚೇತನ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳತಿ ಮೇಘಾ ಜೊತೆ ಚೇತನ್ ಇಂದು ರಿಜಿಸ್ಟರ್ ಮದುವೆಯಾಗಿದ್ದಾರೆ. ನಾಳೆ ಮದುವೆ ಸಮಾರಂಭ ನಡೆಯಲಿದ್ದು, ಸೂಫಿ ಗೀತೆ, ಲಂಬಾಣಿ ನೃತ್ಯ, ವಚನ ಗಾಯನ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಬಿಳಿ ಪಂಚೆಯುಟ್ಟು, ಹಸಿರು ಶಾಲು ಹೊದ್ದ ಚೇತನ್ ಕೆಂಪು ರೇಷ್ಮೆ ಸೀರೆಯುಟ್ಟಿದ್ದ ಮೇಘಾ ಜೊತೆಗೆ ಇಂದು ಸಬ್ ರಿಜಿಸ್ಟ್ರಾರ್ ಆಫೀಸ್ನಲ್ಲಿ ಮದುವೆಯಾಗಿದ್ದಾರೆ.
News18 Kannada | February 1, 2020, 3:23 PM IST
1/ 20
ಆ ದಿನಗಳು ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ ನಟ ಚೇತನ್.
2/ 20
ಚಿತ್ರರಂಗದಲ್ಲಿ ನಟನಾಗಿ ಮಾತ್ರವಲ್ಲದೆ ಹಲವು ಹೋರಾಟಗಳಲ್ಲೂ ತೊಡಗಿಸಿಕೊಂಡಿರುವ ಚೇತನ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
3/ 20
ತಮ್ಮ ಬಹುಕಾಲದ ಗೆಳತಿ ಮೇಘಾ ಜೊತೆ ಚೇತನ್ ಇಂದು ರಿಜಿಸ್ಟರ್ ಮದುವೆಯಾಗಿದ್ದಾರೆ.
4/ 20
ನಾಳೆ ಮದುವೆ ಸಮಾರಂಭ ನಡೆಯಲಿದ್ದು, ಸೂಫಿ ಗೀತೆ, ಲಂಬಾಣಿ ನೃತ್ಯ, ವಚನ ಗಾಯನ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.
5/ 20
ಬಿಳಿ ಪಂಚೆಯುಟ್ಟು, ಹಸಿರು ಶಾಲು ಹೊದ್ದ ಚೇತನ್ ಕೆಂಪು ರೇಷ್ಮೆ ಸೀರೆಯುಟ್ಟಿದ್ದ ಮೇಘಾ ಜೊತೆಗೆ ಇಂದು ಸಬ್ ರಿಜಿಸ್ಟ್ರಾರ್ ಆಫೀಸ್ನಲ್ಲಿ ಮದುವೆಯಾಗಿದ್ದಾರೆ.
6/ 20
ಭಾನುವಾರ ಗಾಂಧಿಭವನದ ಪಕ್ಕದಲ್ಲಿರುವ ವಲ್ಲಭ ನಿಕೇತನದಲ್ಲಿ ನಟ ಚೇತನ್ ಅವರ ಮದುವೆಯ ಸಂತೋಷ ಕೂಟವನ್ನು ಆಯೋಜಿಸಲಾಗಿದೆ.
7/ 20
ಮದುವೆಗೂ ಮುನ್ನ ಅನಾಥಾಶ್ರಮದ ಮಕ್ಕಳ ಜೊತೆಗೆ ಚೇತನ್ ಮತ್ತು ಮೇಘಾ ಫೋಟೋಶೂಟ್ ಮಾಡಿಸಿಕೊಂಡಿದ್ದರು.
8/ 20
ಮಕ್ಕಳೊಂದಿಗಿನ ಈ ಪ್ರೀ ವೆಡ್ಡಿಂಗ್ ಫೋಟೋಶೂಟ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
9/ 20
ಹಳ್ಳಿ ಮಕ್ಕಳ ಜೊತೆ ಬುಗುರಿಯಾಡುತ್ತಾ ಚೇತನ್-ಮೇಘಾ ಫೋಟೋಶೂಟ್ ಮಾಡಿಸಿಕೊಂಡಿದ್ದರು.
10/ 20
ಕಲರ್ಫುಲ್ ಆಗಿದ್ದ ಈ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.
11/ 20
ನಾಳೆಯೂ ಅನಾಥಾಶ್ರಮದ ಮಕ್ಕಳೊಂದಿಗೆ ಮತ್ತು ವೃದ್ಧರೊಂದಿಗೆ ಸಂತೋಷ ಕೂಟ ಆಯೋಜಿಸಲಾಗಿದೆ.
12/ 20
ಭಾನುವಾರ ಸಂಜೆ 6ರಿಂದ ಸಂತೋಷ ಕೂಟ ಶುರುವಾಗಲಿದೆ.
13/ 20
ಇಂದು ಬೆಳಗ್ಗೆ ವಿವಾಹ ಕಾಯ್ದೆ ಅಡಿಯಲ್ಲಿ ಚೇತನ್ ಮತ್ತು ಮೇಘಾ ಮದುವೆಯಾಗಿದ್ದಾರೆ.
14/ 20
ಚೇತನ್ ಮತ್ತು ಮೇಘಾ ಕಾನೂನುಬದ್ಧವಾಗಿ ಮದುವೆಯಾದ ಸಂದರ್ಭದಲ್ಲಿ ಇಬ್ಬರ ಕುಟುಂಬದವರೂ ಹಾಜರಿದ್ದರು.
15/ 20
ಗಾಂಧಿನಗರದಲ್ಲಿರುವ ರಿಜಿಸ್ಟ್ರಾರ್ ಕಚೇರಿಯಲ್ಲಿ ಚೇತನ್ ಮತ್ತು ಮೇಘಾ ಮದುವೆಯಾದರು.
16/ 20
ಅಸ್ಸಾಂ ಮೂಲದ ಮೇಘಾ ಅವರನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು.
17/ 20
ಸಾಮಾಜಿಕ ಹೋರಾಟದ ಮೂಲಕವೇ ಇವರಿಬ್ಬರ ಪರಿಚಯವಾಗಿತ್ತು. ಸಮಾನ ಮನಸ್ಕರಾಗಿರುವ ಚೇತನ್ ಮತ್ತು ಮೇಘಾ ಇದೀಗ ಬಾಳ ಸಂಗಾತಿಗಳಾಗಿದ್ದಾರೆ.
18/ 20
ಆ ದಿನಗಳು, ರಾಮ್, ಬಿರುಗಾಳಿ, ಸೂರ್ಯಕಾಂತಿ, ದಶಮುಖ, ಮೈನಾ, ನೂರೊಂದು ನೆನಪು, ಅತಿರಥ ಸಿನಿಮಾಗಳಲ್ಲಿ ಚೇತನ್ ನಟಿಸಿದ್ದಾರೆ.
19/ 20
ಇವುಗಳಲ್ಲಿ ಆ ದಿನಗಳು, ಬಿರುಗಾಳಿ ಮತ್ತು ಮೈನಾ ಸಿನಿಮಾಗಳು ಚೇತನ್ಗೆ ಹೊಸ ಇಮೇಜ್ ಕಟ್ಟಿಕೊಟ್ಟವು.
20/ 20
ಸದ್ಯಕ್ಕೆ ಚೇತನ್ ಅಭಿನಯದ ರಣಂ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.