ಇನ್ನು ಈ ಸಿನಿಮಾದಲ್ಲಿ ಪಾಕಿಸ್ತಾನದಿಂದ ಬರುವ ವಿಲನ್ ಯಾವ ಧರ್ಮ ಅಥವಾ ಜಾತಿಯಾಗಿರುತ್ತಾನೆ. ಸಿನಿಮಾದ ಕಥೆಗೆ ಅನುಗುಣವಾಗಿ ಪಾತ್ರಗಳನ್ನು ಸೃಷ್ಟಿಸಲಾಗಿದೆ. ಇದರಲ್ಲಿ ಯಾವುದೇ ಜಾತಿ ಅಥವಾ ಧರ್ಮವನ್ನು ಬೆರೆಸುವ ಉದ್ದೇಶ ಇಲ್ಲ. ಇನ್ನು ಇದು ಸಿನಿಮಾ ನೋಡುವ ಪ್ರೇಕ್ಷಕರಿಗೆ ಸಮಸ್ಯೆಯಾಗಿ ಕಾಣುವುದಿಲ್ಲ. ಆದರೆ, ಪ್ರತಿಯೊಂದರಲ್ಲೂ ನಕಾರತ್ಮಕತೆ ಹುಡುಕುವ ಕೆಲವು ಪತ್ರಕರ್ತರಿಗೆ ಮಾತ್ರ ಸಮಸ್ಯೆಯಾಗಿ ಕಾಣುತ್ತದೆ ಎಂದು ಕೊಂಛ ಖಾರವಾಗಿ ಉತ್ತರಿಸಿದ್ದಾರೆ.