Mrunal Thakur: ಆಕ್ಷನ್ ಮೂಡ್​ನಲ್ಲಿ 'ಸೀತಾ ಲಕ್ಷ್ಮಿ', ಈ ವಾರ ತೆರೆಗೆ ಬರಲಿದೆ ಮೃಣಾಲ್​ ಠಾಕೂರ್​ ಸಿನಿಮಾ

Mrunal Thakur- ನಟಿ ಮೃಣಾಲ್ ಠಾಕೂರ್, ಹನು ರಾಘವಪುಡಿ ನಿರ್ದೇಶನದ 'ಸೀತಾ ರಾಮಂ' ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ಜೊತೆ ನಟಿಸಿ ಭಾರೀ ಜನಪ್ರಿಯತೆ ಪಡೆದಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗ್ತಿದ್ದಂತೆ ನಟಿ ಮೃಣಾಲ್ ಠಾಕೂರ್ ಗೆ ಸಾಲು ಸಾಲು ಸಿನಿಮಾಗಳ ಆಫರ್ ಸಿಕ್ಕಿದೆ.

First published:

  • 18

    Mrunal Thakur: ಆಕ್ಷನ್ ಮೂಡ್​ನಲ್ಲಿ 'ಸೀತಾ ಲಕ್ಷ್ಮಿ', ಈ ವಾರ ತೆರೆಗೆ ಬರಲಿದೆ ಮೃಣಾಲ್​ ಠಾಕೂರ್​ ಸಿನಿಮಾ

    ಕಿರುತೆರೆಯಲ್ಲಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೃಣಾಲ್ ಠಾಕೂರ್ ಅವರು ಮರಾಠಿ ಚಿತ್ರ 'ವಿಟ್ಟಿ ದಂಡು' ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಆ ನಂತರ ಮರಾಠಿ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. (ಇನ್ಸ್ಟಾಗ್ರಾಮ್/ಫೋಟೋ/ಮೃಣಾಲ್ ಠಾಕೂರ್)

    MORE
    GALLERIES

  • 28

    Mrunal Thakur: ಆಕ್ಷನ್ ಮೂಡ್​ನಲ್ಲಿ 'ಸೀತಾ ಲಕ್ಷ್ಮಿ', ಈ ವಾರ ತೆರೆಗೆ ಬರಲಿದೆ ಮೃಣಾಲ್​ ಠಾಕೂರ್​ ಸಿನಿಮಾ

    ಸೀತಾರಾಮಂ ಸಿನಿಮಾ ಬಳಿಲ ಮೃಣಾಲ್ ಸದ್ಯ ಸೆಲ್ಫಿ ಎಂಬ ಹಿಂದಿ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ಮೃಣಾಲ್ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರ ಮಲಯಾಳಂನ ಡ್ರೈವಿಂಗ್ ಲೈಸೆನ್ಸ್ ಸಿನಿಮಾ ರಿಮೇಕ್ ಆಗಿದೆ. ಶೂಟಿಂಗ್ ಕೂಡ ಕಂಪ್ಲೀಟ್ ಆಗಿದ್ದು, ಈ ಚಿತ್ರವು 24 ಫೆಬ್ರವರಿ 2023 ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.

    MORE
    GALLERIES

  • 38

    Mrunal Thakur: ಆಕ್ಷನ್ ಮೂಡ್​ನಲ್ಲಿ 'ಸೀತಾ ಲಕ್ಷ್ಮಿ', ಈ ವಾರ ತೆರೆಗೆ ಬರಲಿದೆ ಮೃಣಾಲ್​ ಠಾಕೂರ್​ ಸಿನಿಮಾ

    ಹನು ರಾಘವಪುಡಿ ನಿರ್ದೇಶನದ 'ಸೀತಾ ರಾಮಂ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ನಾಯಕನಾಗಿ ಮತ್ತು ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸಿದ್ದರು. ಮತ್ತೊಂದು ಪ್ರಮುಖ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಈ ಸಿನಿಮಾದ ಯಶಸ್ಸಿನಿಂದ ಮೃಣಾಲ್ ಠಾಕೂರ್ ಗೆ ಹಲವು ಅವಕಾಶಗಳು ಬರುತ್ತಿವೆ.

    MORE
    GALLERIES

  • 48

    Mrunal Thakur: ಆಕ್ಷನ್ ಮೂಡ್​ನಲ್ಲಿ 'ಸೀತಾ ಲಕ್ಷ್ಮಿ', ಈ ವಾರ ತೆರೆಗೆ ಬರಲಿದೆ ಮೃಣಾಲ್​ ಠಾಕೂರ್​ ಸಿನಿಮಾ

    ಹಿರಿಯ ನಾಯಕ ನಾಗಾರ್ಜುನ ಜೊತೆ ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸಲಿದ್ದಾರಂತೆ. ನಿರ್ದೇಶಕ-ನಿರ್ಮಾಪಕರು ನಾಯಕಿ ಪಾತ್ರಕ್ಕೆ ಮೃಣಾಲ್ ಅವರನ್ನು ಆಯ್ಕೆ ಮಾಡಿದ್ದಾರಂತೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ. ಸೀತಾರಾಮಂ ಚಿತ್ರದ ಯಶಸ್ಸಿನ ನಂತರ ಮೃಣಾಲ್ ಠಾಕೂರ್ ಸಂಭಾವನೆ ಕೂಡ ದುಪ್ಪಟ್ಟಾಗಿದೆ ಎಂಬ ವರದಿಗಳು ಹರಿದಾಡ್ತಿದೆ. ಫೋಟೋ: Instagram

    MORE
    GALLERIES

  • 58

    Mrunal Thakur: ಆಕ್ಷನ್ ಮೂಡ್​ನಲ್ಲಿ 'ಸೀತಾ ಲಕ್ಷ್ಮಿ', ಈ ವಾರ ತೆರೆಗೆ ಬರಲಿದೆ ಮೃಣಾಲ್​ ಠಾಕೂರ್​ ಸಿನಿಮಾ

    ಮರಾಠಿ ಬ್ಯೂಟಿ ಮೃಣಾಲ್ ಠಾಕೂರ್ ಸೀತಾ ರಾಮಂ ಚಿತ್ರದ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಆ ಚಿತ್ರದಲ್ಲಿ ಮೃಣಾಲ್, ಸೀತಾ ಮಹಾಲಕ್ಷ್ಮಿಯಾಗಿ ಮತ್ತು ಮತ್ತೊಂದೆಡೆ ರಾಜಕುಮಾರಿ ನೂರ್ ಜಹಾನ್ ಆಗಿ ಸಖತ್ ಆಗಿ ಅಭಿನಯಿಸಿದ್ರು.

    MORE
    GALLERIES

  • 68

    Mrunal Thakur: ಆಕ್ಷನ್ ಮೂಡ್​ನಲ್ಲಿ 'ಸೀತಾ ಲಕ್ಷ್ಮಿ', ಈ ವಾರ ತೆರೆಗೆ ಬರಲಿದೆ ಮೃಣಾಲ್​ ಠಾಕೂರ್​ ಸಿನಿಮಾ

    ಮೃಣಾಲ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತಾಡಿದ್ದು, ಪ್ರೀತಿ ಹಾಗೂ ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಮಾಜದ ಪ್ರತಿಯೊಬ್ಬ ಮಹಿಳೆಯನ್ನು ಇಂತಹ ಪ್ರಶ್ನೆ ಕಾಡುತ್ತಿರುತ್ತದೆ. ಜನರು ಕೂಡ ನಟಿಯರ ಮದುವೆ, ಪ್ರೀತಿ ಮತ್ತು ಮಕ್ಕಳ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ ಎಂದಿದ್ರು. ಫೋಟೋ: Instagram

    MORE
    GALLERIES

  • 78

    Mrunal Thakur: ಆಕ್ಷನ್ ಮೂಡ್​ನಲ್ಲಿ 'ಸೀತಾ ಲಕ್ಷ್ಮಿ', ಈ ವಾರ ತೆರೆಗೆ ಬರಲಿದೆ ಮೃಣಾಲ್​ ಠಾಕೂರ್​ ಸಿನಿಮಾ

    ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಂಡ ವ್ಯಕ್ತಿಯನ್ನೇ ನಾನು ಮದುವೆಯಾಗುತ್ತೇನೆ. ನಾನು ಚಿತ್ರರಂಗದಲ್ಲಿದ್ದೇನೆ. ಅನೇಕ ಸವಾಲುಗಳು ಮತ್ತು ತೊಂದರೆಗಳು ಎದುರಾಗುತ್ತವೆ. ಮೇಲಾಗಿ ಈ ಸಂದರ್ಭದಲ್ಲಿ ಮಕ್ಕಳ ಬಗ್ಗೆ ಮಾತನಾಡುತ್ತಾ...ನಿಜ ಹೇಳಬೇಕೆಂದರೆ... ನನಗೆ ಮದುವೆಗೂ ಮುನ್ನವೇ ಮಕ್ಕಳಾಗಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೇ ಪ್ರೀತಿಯ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿಲ್ಲ ಎಂದು ಏಕೆ ಹೇಳುತ್ತೀರಿ? ಫೋಟೋ: Instagram

    MORE
    GALLERIES

  • 88

    Mrunal Thakur: ಆಕ್ಷನ್ ಮೂಡ್​ನಲ್ಲಿ 'ಸೀತಾ ಲಕ್ಷ್ಮಿ', ಈ ವಾರ ತೆರೆಗೆ ಬರಲಿದೆ ಮೃಣಾಲ್​ ಠಾಕೂರ್​ ಸಿನಿಮಾ

    ದೊಡ್ಡ ಸ್ಟಾರ್ ಹೀರೋಗಳು ಕೂಡ ಈಕೆಯ ಜೊತೆ ಸಿನಿಮಾ ನಿರ್ಮಾಣಕ್ಕೆ ರೆಡಿಯಾಗುತ್ತಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡ್ತಿದೆ. ಸದ್ಯ ನಾನಿ ಅವರ 30ನೇ ಚಿತ್ರದಲ್ಲಿ ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. (ಇನ್ಸ್ಟಾಗ್ರಾಮ್/ಮೃಣಾಲ್ ಠಾಕೂರ್)

    MORE
    GALLERIES