Pathaan: ಪ್ರತಿಭಟನೆ ಮಾಡೋದ್ರಲ್ಲಿ ಅರ್ಥವೇ ಇಲ್ರಪ್ಪಾ! ಪಠಾಣ್ ಬ್ಯಾನ್ ಬ್ಯಾನ್ ಎಂದ BJP ಸಚಿವ ಪ್ಲೇಟ್ ಚೇಂಜ್

ಪಠಾಣ್ ಬ್ಯಾನ್ ಬ್ಯಾನ್ ಎಂದು ಕಿರುಚಿದ್ದ ಸಚಿವರೊಬ್ಬರು ಈಗ ಫುಲ್ ಬದಲಾಗಿದ್ದಾರೆ. ಮೋದಿ ವಾರ್ನಿಂಗ್ ಬಂದ ಬೆನ್ನಲ್ಲೇ ಗುಪ್ ಚುಪ್ ಆದ ಸಚಿವರು ಈ ಸಿನಿಮಾ ವಿರುದ್ಧ ಪ್ರತಿಭಟನೆ ಮಾಡೋದ್ರಲ್ಲಿ ಅರ್ಥವೇ ಇಲ್ರಪ್ಪಾ ಎಂದು ಹೇಳಿ ಪ್ಲೇಟ್ ಚೇಂಜ್ ಮಾಡಿದ್ದಾರೆ.

First published:

  • 110

    Pathaan: ಪ್ರತಿಭಟನೆ ಮಾಡೋದ್ರಲ್ಲಿ ಅರ್ಥವೇ ಇಲ್ರಪ್ಪಾ! ಪಠಾಣ್ ಬ್ಯಾನ್ ಬ್ಯಾನ್ ಎಂದ BJP ಸಚಿವ ಪ್ಲೇಟ್ ಚೇಂಜ್

    ಮಧ್ಯಪ್ರದೇಶದಲ್ಲಿ ಪಠಾಣ್ ಬ್ಯಾನ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಈಗ ಪ್ಲೇಟ್ ಚೇಂಜ್ ಮಾಡಿದ್ದಾರೆ. ಮೋದಿ ವಾರ್ನಿಂಗ್ ಬಂದಿದ್ದೇ ತಡ ಗಪ್ ಚುಪ್ ಅಂತ ಸುಮ್ಮನಾಗಿದ್ದಾರೆ.

    MORE
    GALLERIES

  • 210

    Pathaan: ಪ್ರತಿಭಟನೆ ಮಾಡೋದ್ರಲ್ಲಿ ಅರ್ಥವೇ ಇಲ್ರಪ್ಪಾ! ಪಠಾಣ್ ಬ್ಯಾನ್ ಬ್ಯಾನ್ ಎಂದ BJP ಸಚಿವ ಪ್ಲೇಟ್ ಚೇಂಜ್

    ಸೆನ್ಸಾರ್ ಮಂಡಳಿ ಈಗಾಗಲೇ ವಿವಾದಾತ್ಮಕ ಪದಗಳನ್ನು ತೆಗೆದು ಹಾಕಿರುವುದರಿಂದ ಇನ್ನು ಮುಂದೆ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಸಚಿವ ಹೇಳಿದ್ದಾರೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ ಪಠಾಣ್ ಸಿನಿಮಾದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ರಾಜಕಾರಣಿಗಳಲ್ಲಿ ನರೋತ್ತಮ್ ಮಿಶ್ರಾ ಕೂಡ ಒಬ್ಬರು.

    MORE
    GALLERIES

  • 310

    Pathaan: ಪ್ರತಿಭಟನೆ ಮಾಡೋದ್ರಲ್ಲಿ ಅರ್ಥವೇ ಇಲ್ರಪ್ಪಾ! ಪಠಾಣ್ ಬ್ಯಾನ್ ಬ್ಯಾನ್ ಎಂದ BJP ಸಚಿವ ಪ್ಲೇಟ್ ಚೇಂಜ್

    ಡಿಸೆಂಬರ್ 2022 ರಲ್ಲಿ, ಪಠಾಣ್‌ನ 'ಬೇಷರಂ ರಂಗ್' ಹಾಡು ಬಿಡುಗಡೆಯಾದ ನಂತರ, ನರೋತ್ತಮ್ ಮಿಶ್ರಾ ಮಧ್ಯಪ್ರದೇಶದಲ್ಲಿ ಸಿನಿಮಾ ನಿಷೇಧಿಸುವುದಾಗಿ ಬೆದರಿಕೆ ಹಾಕಿದ್ದರು. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

    MORE
    GALLERIES

  • 410

    Pathaan: ಪ್ರತಿಭಟನೆ ಮಾಡೋದ್ರಲ್ಲಿ ಅರ್ಥವೇ ಇಲ್ರಪ್ಪಾ! ಪಠಾಣ್ ಬ್ಯಾನ್ ಬ್ಯಾನ್ ಎಂದ BJP ಸಚಿವ ಪ್ಲೇಟ್ ಚೇಂಜ್

    ಹಿಂದಿಯಲ್ಲಿ ಟ್ವೀಟ್‌ ಮಾಡಿದ ಸಚಿವ ಸಿನಿಮಾದಲ್ಲಿ ಡ್ರೆಸ್ಸಿಂಗ್ ಹೆಚ್ಚು ಆಕ್ಷೇಪಾರ್ಹವಾಗಿವೆ. ಹಾಡನ್ನು ಕೊಳಕು ಮನಸ್ಥಿತಿಯಿಂದ ಚಿತ್ರೀಕರಿಸಲಾಗಿದೆ ಎಂದು ಆರೋಪ ಮಾಡಿದ್ದರು.

    MORE
    GALLERIES

  • 510

    Pathaan: ಪ್ರತಿಭಟನೆ ಮಾಡೋದ್ರಲ್ಲಿ ಅರ್ಥವೇ ಇಲ್ರಪ್ಪಾ! ಪಠಾಣ್ ಬ್ಯಾನ್ ಬ್ಯಾನ್ ಎಂದ BJP ಸಚಿವ ಪ್ಲೇಟ್ ಚೇಂಜ್

    ವಿವಾದ ನಡೆದ ನಂತರ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಮಂಡಳಿಯ ಮಾರ್ಗಸೂಚಿಗಳಿಗೆ ಅನುಸಾರವಾಗಿ ಅದರ ಹಾಡುಗಳನ್ನು ಒಳಗೊಂಡಂತೆ ಚಿತ್ರದಲ್ಲಿ ಹಲವು ಬದಲಾವಣೆಗಳನ್ನು ಮಾಡಲು ಪಠಾಣ್ ತಯಾರಕರಿಗೆ ಸೂಚನೆ ನೀಡಿತ್ತು.

    MORE
    GALLERIES

  • 610

    Pathaan: ಪ್ರತಿಭಟನೆ ಮಾಡೋದ್ರಲ್ಲಿ ಅರ್ಥವೇ ಇಲ್ರಪ್ಪಾ! ಪಠಾಣ್ ಬ್ಯಾನ್ ಬ್ಯಾನ್ ಎಂದ BJP ಸಚಿವ ಪ್ಲೇಟ್ ಚೇಂಜ್

    ಚಿತ್ರ ಜನವರಿ 25 ರಂದು ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಓಪನಿಂಗ್ ಪಡೆಯಿತು. ಆದರೂ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ, ಕೆಲವು ಸಂಘಟನೆಗಳು ಸಿನಿಮಾ ವಿರುದ್ಧ ಪ್ರತಿಭಟನೆ ನಡೆಸಿದವು.

    MORE
    GALLERIES

  • 710

    Pathaan: ಪ್ರತಿಭಟನೆ ಮಾಡೋದ್ರಲ್ಲಿ ಅರ್ಥವೇ ಇಲ್ರಪ್ಪಾ! ಪಠಾಣ್ ಬ್ಯಾನ್ ಬ್ಯಾನ್ ಎಂದ BJP ಸಚಿವ ಪ್ಲೇಟ್ ಚೇಂಜ್

    ಇಂದೋರ್ ಮತ್ತು ಭೋಪಾಲ್‌ನಲ್ಲಿ ಕೆಲವು ಚಿತ್ರಮಂದಿರಗಳಲ್ಲಿ ಕೆಲವು ಪ್ರದರ್ಶನಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಲಾಗಿತ್ತು. ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ನರೋತ್ತಮ್ ಮಿಶ್ರಾ ಪ್ರತಿಭಟನಾಕಾರರಿಗೆ ಪ್ರತಿಭಟನೆ ಮಾಡದಂತೆ ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ.

    MORE
    GALLERIES

  • 810

    Pathaan: ಪ್ರತಿಭಟನೆ ಮಾಡೋದ್ರಲ್ಲಿ ಅರ್ಥವೇ ಇಲ್ರಪ್ಪಾ! ಪಠಾಣ್ ಬ್ಯಾನ್ ಬ್ಯಾನ್ ಎಂದ BJP ಸಚಿವ ಪ್ಲೇಟ್ ಚೇಂಜ್

    ಸಿನಿಮಾದಲ್ಲಿ ಎಲ್ಲಾ ಬದಲಾವಣೆಗಳನ್ನು ಮಾಡಲಾಗಿದೆ ಎಂದು ನಾನು ನಂಬುತ್ತೇನೆ. ಸೆನ್ಸಾರ್ ಮಂಡಳಿ ತಿದ್ದುಪಡಿ ಮಾಡಿದೆ. ವಿವಾದಾತ್ಮಕ ಪದಗಳನ್ನು ತೆಗೆದುಹಾಕಲಾಗಿದೆ. ಹಾಗಾಗಿ ಈಗ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ನರೋತ್ತಮ್ ಮಿಶ್ರಾ ಹೇಳಿದ್ದಾರೆ.

    MORE
    GALLERIES

  • 910

    Pathaan: ಪ್ರತಿಭಟನೆ ಮಾಡೋದ್ರಲ್ಲಿ ಅರ್ಥವೇ ಇಲ್ರಪ್ಪಾ! ಪಠಾಣ್ ಬ್ಯಾನ್ ಬ್ಯಾನ್ ಎಂದ BJP ಸಚಿವ ಪ್ಲೇಟ್ ಚೇಂಜ್

    ಈ ತಿಂಗಳ ಆರಂಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಸಿನಿಮಾಗಳ ಬಗ್ಗೆ ಯಾವುದೇ ಅನಗತ್ಯ ಟೀಕೆಗಳನ್ನು ಮಾಡದಂತೆ ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದರು ಎಂದು ಹೇಳಲಾಗಿದೆ. ಜನವರಿ 16 ಮತ್ತು 17 ರಂದು ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಈ ಸೂಚನೆ ಕೊಟ್ಟಿದ್ದರು ಎಂದು ತಿಳಿದುಬಂದಿದೆ.

    MORE
    GALLERIES

  • 1010

    Pathaan: ಪ್ರತಿಭಟನೆ ಮಾಡೋದ್ರಲ್ಲಿ ಅರ್ಥವೇ ಇಲ್ರಪ್ಪಾ! ಪಠಾಣ್ ಬ್ಯಾನ್ ಬ್ಯಾನ್ ಎಂದ BJP ಸಚಿವ ಪ್ಲೇಟ್ ಚೇಂಜ್

    ಪ್ರಧಾನಿ ಮೋದಿಯವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಮಿಶ್ರಾ, ಪಿಎಂ ಮೋದಿ ಅವರ ಪ್ರತಿ ಪದ, ವಾಕ್ಯವು ನಮಗೆ ಮುಖ್ಯವಾಗಿದೆ. ಅದಕ್ಕಾಗಿಯೇ ಎಲ್ಲಾ ಕಾರ್ಯಕರ್ತರು ಅವರಿಂದ ಸ್ಫೂರ್ತಿ ಪಡೆದಿದ್ದೇವೆ ಎಂದಿದ್ದಾರೆ.

    MORE
    GALLERIES