Bollywood Movies: ರಿಲೀಸ್ ಆಗಿ ಕೆಲವೇ ದಿನದಲ್ಲಿ 300 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವು! ನೀವು ನೋಡಿದ್ದೀರಾ?

ಭಾರತೀಯ ಸಿನಿಮಾ ಇಂಡಸ್ಟ್ರಿ ಎಂದರೆ ಕೇವಲ ಬಾಲಿವುಡ್ ಎನ್ನುವ ಕಾಲ ಒಂದಿತ್ತು. ಆದರೆ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರಗಳ ಮೂಲಕ ದಕ್ಷಿಣ ಭಾರತದ ಚಿತ್ರರಂಗದ ಶಕ್ತಿ ಸಾಬೀತಾಯಿತು. ಹಿಂದಿಯಲ್ಲಿ ರಾಜಮೌಳಿ ನಿರ್ದೇಶಿಸಿದ RRR ರೂ. ಮೊದಲ ದಿನವೇ 20 ಕೋಟಿ ರೂ. ಕಲೆಕ್ಷನ್ ಮಾಡಿತು. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ರೂ. 53.95 ಕೋಟಿ ಒಟ್ಟು ಕಲೆಕ್ಷನ್ ಮಾಡಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ರಿಲೀಸ್ ಆಗಿ ಕೆಲವೇ ದಿನಗಳಲ್ಲಿ 300 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವು.

First published:

  • 111

    Bollywood Movies: ರಿಲೀಸ್ ಆಗಿ ಕೆಲವೇ ದಿನದಲ್ಲಿ 300 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವು! ನೀವು ನೋಡಿದ್ದೀರಾ?

    ಹಿಂದಿಯಲ್ಲಿ ಫಸ್ಟ್​ ಡೇ ಅತ್ಯಧಿಕ ಕಲೆಕ್ಷನ್ ಸಿನಿಮಾ ಲಿಸ್ಟ್ ನೋಡಿದರೆ ಅಲ್ಲಿ ಬಾಲಿವುಡ್ ಒರಿಜಿನಲ್ ಮೂವಿಯೇ ಇರಲಿಲ್ಲ. ಎಲ್ಲ ಬಾಲಿವುಡ್ ಸಿನಿಮಾ ರೆಕಾರ್ಡ್​ಗಳನ್ನು ಸೌತ್ ಸಿನಿಮಾಗಳು ಬ್ರೇಕ್ ಮಾಡಿವೆ. ಆದರೆ ಈಗ ಪಠಾಣ್ ಒಂದು ಬ್ರೇಕ್ ತರುವಲ್ಲಿ ಯಶಸ್ವಿಯಾಗಿದೆ.

    MORE
    GALLERIES

  • 211

    Bollywood Movies: ರಿಲೀಸ್ ಆಗಿ ಕೆಲವೇ ದಿನದಲ್ಲಿ 300 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವು! ನೀವು ನೋಡಿದ್ದೀರಾ?

    ಪಠಾಣ್: ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ಅಭಿನಯದ ಚಿತ್ರ ಪಠಾಣ್. ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಇಂಡಿಯನ್ ಸ್ಪೈ ಏಜೆನ್ಸಿ ಸಿನಿಮಾವಾಗಿ ತಯಾರಾದ ಈ ಆ್ಯಕ್ಷನ್ ಮೂವಿ ಮೊದಲ ದಿನವೇ ದಾಖಲೆಯ ಕಲೆಕ್ಷನ್ ಮಾಡಿದೆ. ಚಿತ್ರವು ತನ್ನ ಮೊದಲ ದಿನ ಬಾಲಿವುಡ್‌ನಲ್ಲಿ ರೂ. 55 ಕೋಟಿ ಗಳಿಸಿದೆ. ಈ ಮೂಲಕ ಹೀರೋ ಆಗಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ ಶಾರುಖ್. ಈ ಸಿನಿಮಾ ಬಿಡುಗಡೆಯಾದ 7 ದಿನಗಳಲ್ಲಿ ರೂ. 300 ಕೋಟಿ ಕ್ಲಬ್ ಸೇರಿದ ಮೊದಲ ಬಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    MORE
    GALLERIES

  • 311

    Bollywood Movies: ರಿಲೀಸ್ ಆಗಿ ಕೆಲವೇ ದಿನದಲ್ಲಿ 300 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವು! ನೀವು ನೋಡಿದ್ದೀರಾ?

    ಬಾಹುಬಲಿ 2: ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಚಿತ್ರದಲ್ಲಿ ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚೀನಾ ಬಿಟ್ಟರೆ ನಮ್ಮ ದೇಶದ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಇಂದಿಗೂ ನಂಬರ್ ವನ್ ಸ್ಥಾನದಲ್ಲಿದೆ. ಹಿಂದಿಯಲ್ಲಿ ಮೊದಲ ದಿನವೇ ಈ ಸಿನಿಮಾ ರೂ. 41 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಸಂಚಲನ ಮೂಡಿಸಿತ್ತು. ಇದು ಹಿಂದಿಯಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ 7 ನೇ ಚಿತ್ರವಾಗಿದೆ. ಈ ಸಿನಿಮಾ ಬಿಡುಗಡೆಯಾದ 10 ದಿನಕ್ಕೆ ಬಾಲಿವುಡ್ ನಲ್ಲಿ ರೂ. 300 ಕೋಟಿ ಕ್ಲಬ್ ಸೇರಿತು. ಈ ಚಿತ್ರ 300 ಕೋಟಿ ಕ್ಲಬ್ ಸೇರಿದ ಚಿತ್ರವಾಗಿ ಮೊದಲ ಸ್ಥಾನದಲ್ಲಿತ್ತು. ಇತ್ತೀಚೆಗೆ ಪಠಾಣ್ ಚಿತ್ರ 7 ದಿನಗಳಲ್ಲಿ ಈ ದಾಖಲೆ ಮಾಡಿ ನಂಬರ್ 1 ಆಗಿದೆ.

    MORE
    GALLERIES

  • 411

    Bollywood Movies: ರಿಲೀಸ್ ಆಗಿ ಕೆಲವೇ ದಿನದಲ್ಲಿ 300 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವು! ನೀವು ನೋಡಿದ್ದೀರಾ?

    ಕೆಜಿಎಫ್ 2: ಯಶ್ ಕನ್ನಡದಲ್ಲಿ ಮಾತ್ರ ಸ್ಟಾರ್ ಹೀರೋ ಆಗಿದ್ದರು. ಆದರೆ ಈಗ ಅವರು ಪ್ಯಾನ್ ಇಂಡಿಯನ್ ಹೀರೋ ಆಗಿದ್ದಾರೆ. ಕೆಜಿಎಫ್ ಚಿತ್ರದ ಮೂಲಕ ದಾಖಲೆ ಬರೆದ ಯಶ್ ಸಿನಿಮಾದ ಹಿಂದಿ ವರ್ಷನ್ 53.95 ಕೋಟಿ ಒಟ್ಟು ಕಲೆಕ್ಷನ್ ಮಾಡುವ ಮೂಲಕ ನಂಬರ್ ವನ್ ಆಯಿತು. ಶಾರುಖ್ ಅಭಿನಯದ ‘ಪಠಾಣ್’ ಚಿತ್ರ ಬಂದ ಮೇಲೆ ಎರಡನೇ ಸ್ಥಾನಕ್ಕೆ ಇಳಿದಿದೆ. ಈ ಚಿತ್ರ 11 ದಿನಗಳಲ್ಲಿ ರೂ. 300 ಕೋಟಿ ಕ್ಲಬ್ ಸೇರಿದ ಚಿತ್ರಗಳ ಪೈಕಿ ಮೂರನೇ ಸ್ಥಾನದಲ್ಲಿದೆ.

    MORE
    GALLERIES

  • 511

    Bollywood Movies: ರಿಲೀಸ್ ಆಗಿ ಕೆಲವೇ ದಿನದಲ್ಲಿ 300 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವು! ನೀವು ನೋಡಿದ್ದೀರಾ?

    ಅಮೀರ್ ಖಾನ್ ಅಭಿನಯದ 'ದಂಗಲ್' ಬಾಲಿವುಡ್ ನಲ್ಲಿ 13 ದಿನಗಳಲ್ಲಿ ರೂ. 300 ಕೋಟಿ ಕಲೆಕ್ಷನ್ ಮಾಡಿ 4ನೇ ಸ್ಥಾನದಲ್ಲಿದೆ.

    MORE
    GALLERIES

  • 611

    Bollywood Movies: ರಿಲೀಸ್ ಆಗಿ ಕೆಲವೇ ದಿನದಲ್ಲಿ 300 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವು! ನೀವು ನೋಡಿದ್ದೀರಾ?

    ಸಂಜು: ಬಾಲಿವುಡ್ ಹೀರೋ ಸಂಜಯ್ ದತ್ ಅವರ ಜೀವನಾಧಾರಿತ ಸಂಜು ಚಿತ್ರ ಸಂಚಲನ ಮೂಡಿಸಿತ್ತು. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ನಾಯಕನಾಗಿ ನಟಿಸಿದ್ದಾರೆ. 2018 ರಲ್ಲಿ ಬಿಡುಗಡೆಯಾದ ಈ ಚಿತ್ರ ರೂ. 580 ಕೋಟಿ ಸಂಗ್ರಹಿಸಿದೆ. ಚಿತ್ರವು ತನ್ನ ಮೊದಲ ದಿನದಲ್ಲಿ ರೂ. 34.75 ಕೋಟಿ ಕಲೆಕ್ಷನ್ ಮಾಡಿ 11ನೇ ಸ್ಥಾನದಲ್ಲಿದೆ. ಈ ಚಿತ್ರ ರೂ. 16ನೇ ದಿನಕ್ಕೆ 300 ಕೋಟಿ ಕ್ಲಬ್ ಸೇರಿದೆ.

    MORE
    GALLERIES

  • 711

    Bollywood Movies: ರಿಲೀಸ್ ಆಗಿ ಕೆಲವೇ ದಿನದಲ್ಲಿ 300 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವು! ನೀವು ನೋಡಿದ್ದೀರಾ?

    ಟೈಗರ್ ಜಿಂದಾ ಹೈ: ಬಾಕ್ಸ್ ಆಫೀಸ್​ನಲ್ಲಿ ಸಲ್ಮಾನ್ ಖಾನ್ ಸೃಷ್ಟಿಸಿದ ಮತ್ತೊಂದು ಸಂಚಲನ, ಏಕ್ ಥಾ ಟೈಗರ್ ನ ಮುಂದುವರಿದ ಭಾಗವಾದ ಟೈಗರ್ ಜಿಂದಾ ಹೈ. ಇದು ರೂ. 562 ಕೋಟಿ ಕಲೆಕ್ಷನ್ ಮಾಡಿತು. ಚಿತ್ರವು ಮೊದಲ ದಿನ ರೂ. 34.10 ಕೋಟಿ ಕಲೆಕ್ಷನ್ ಮಾಡುವ ಮೂಲಕ ಟಾಪ್ 12ರಲ್ಲಿ ಸ್ಥಾನ ಪಡೆದಿದೆ. ಈ ಸಿನಿಮಾ ಬಿಡುಗಡೆಯಾದ 16ನೇ ದಿನಕ್ಕೆ 300 ಕೋಟಿ ಗಳಿಸಿ 5ನೇ ಸ್ಥಾನದಲ್ಲಿದೆ.

    MORE
    GALLERIES

  • 811

    Bollywood Movies: ರಿಲೀಸ್ ಆಗಿ ಕೆಲವೇ ದಿನದಲ್ಲಿ 300 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವು! ನೀವು ನೋಡಿದ್ದೀರಾ?

    ಅಮೀರ್ ಖಾನ್ ನಾಯಕನಾಗಿ ರಾಜ್ ಕುಮಾರ್ ಹಿರಾನಿ ನಿರ್ದೇಶನದ 'ಪಿಕೆ' ವಿಶ್ವಾದ್ಯಂತ ರೂ.854 ಕೋಟಿ ಕಲೆಕ್ಷನ್ ಮಾಡಿದೆ. ಈ ಚಿತ್ರವು ಭಾರತದಲ್ಲಿ ರೂ. 350 ಕೋಟಿ ಸಂಗ್ರಹಿಸಿದೆ. ಈ ಸಿನಿಮಾ ಬಿಡುಗಡೆಯಾದ 17ನೇ ದಿನಕ್ಕೆ ರೂ. 300 ಕೋಟಿ ಕ್ಲಬ್ ಪ್ರವೇಶಿಸಿದೆ.

    MORE
    GALLERIES

  • 911

    Bollywood Movies: ರಿಲೀಸ್ ಆಗಿ ಕೆಲವೇ ದಿನದಲ್ಲಿ 300 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವು! ನೀವು ನೋಡಿದ್ದೀರಾ?

    ವಾರ್: ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ನಾಯಕರಾಗಿ ನಟಿಸಿದ ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರವು ರೂ. 460 ಕೋಟಿ. ಗಳಿಸಿದೆ. ಹಿಂದಿಯಲ್ಲಿ ಮೊದಲ ದಿನವೇ ಚಿತ್ರ 51.60 ಕೋಟಿ ಒಟ್ಟು ಕಲೆಕ್ಷನ್ ಮಾಡಿ ಮೂರನೇ ಸ್ಥಾನ ಪಡೆದುಕೊಂಡಿತು. ಬಿಡುಗಡೆಯಾಗಿ 19ನೇ ದಿನಕ್ಕೆ 300 ಕೋಟಿ ಕ್ಲಬ್ ಪ್ರವೇಶಿಸಿದೆ.

    MORE
    GALLERIES

  • 1011

    Bollywood Movies: ರಿಲೀಸ್ ಆಗಿ ಕೆಲವೇ ದಿನದಲ್ಲಿ 300 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವು! ನೀವು ನೋಡಿದ್ದೀರಾ?

    ಸಲ್ಮಾನ್ ಖಾನ್ ಅವರ ಬಜರಂಗಿ ಭಾಯಿಜಾನ್ ಇಂಡಿಯನ್ ಬಾಕ್ಸ್ ಆಫೀಸ್​ನಲ್ಲಿ ಒಟ್ಟಾರೆಯಾಗಿ 320 ಕೋಟಿ ಸಂಗ್ರಹಿಸಿದೆ. ಬಿಡುಗಡೆಯಾದ 20 ನೇ ದಿನದಂದು ಈ ಚಿತ್ರವು ರೂ. 300 ಕೋಟಿ ಕ್ಲಬ್ ಪ್ರವೇಶಿಸಿದೆ.

    MORE
    GALLERIES

  • 1111

    Bollywood Movies: ರಿಲೀಸ್ ಆಗಿ ಕೆಲವೇ ದಿನದಲ್ಲಿ 300 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವು! ನೀವು ನೋಡಿದ್ದೀರಾ?

    ಸುಲ್ತಾನ್: ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಚಿತ್ರ. ಯಶ್ ರಾಜ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾದ ಈ ಚಿತ್ರ ರೂ. 615 ಕೋಟಿ ಸಂಗ್ರಹಿಸಿತು. ಭಾರತದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ 9 ನೇ ಸ್ಥಾನವನ್ನು ಪಡೆದುಕೊಂಡಿತು. ಈ ಸಿನಿಮಾದ ಮೊದಲ ದಿನ ರೂ. 36.54 ಕೋಟಿ ಪಡೆಯಿತು. ಈ ಸಿನಿಮಾ ರಿಲೀಸ್ ಆದ 35ನೇ ದಿನಕ್ಕೆ ರೂ. 300 ಕೋಟಿ ಕ್ಲಬ್ ಸೇರಿದೆ.

    MORE
    GALLERIES