ಈ ವಾರ OTT ಅಲ್ಲಿ ಬಿಡುಗಡೆ ಆಗುತ್ತಿದೆ ಸಾಲು ಸಾಲು ಚಿತ್ರಗಳು, ಸಿನಿರಸಿಕರಿಗೆ ರಸದೌತಣ
ಈ ವಾರ ಭಾರತೀಯ ಓಟಿಟಿ ಫ್ಲಾಟ್ ಪಾರ್ಮ್ ನಲ್ಲಿ ಅನೇಕ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ನೀವು ಏನಾದರೂ ಚಿತ್ರಮಂದಿರಗಳಲ್ಲಿ ಈ ಚಿತ್ರಗಳನ್ನು ಮಿಸ್ ಮಾಡಿಕೊಂಡಲ್ಲಿ ಇದೀಗ ಮನೆಯಲ್ಲಿಯೇ ಕುಳಿತು ಅರಾಮವಾಗಿ ಸಿನಿಮಾ ವೀಕ್ಷಿಸಿ.
ಸತೀಶ್ ನೀನಾಸಂ ನಟನೆಯ 'ಡಿಯರ್ ವಿಕ್ರಂ' ಚಿತ್ರವು ಜೂನ್ 30 ವೂಟ್ನಲ್ಲಿ ಬಿಡುಗಡೆ ಆಗಿದೆ. ನಕ್ಸಲ್ ಕತೆಯನ್ನು ಒಳಗೊಂಡ ಸಿನಿಮಾ ಇದಾಗಿದ್ದು ನಟ ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ನಟಿಸಿದ್ದಾರೆ.
2/ 7
ಸಾಯಿ ಪಲ್ಲವಿ, ರಾಣಾ ದಗ್ಗುಬಾಟಿ ನಟಿಸಿರುವ ತೆಲುಗು ಸಿನಿಮಾ 'ವಿರಾಟ ಪರ್ವಂ' ಸಿನಿಮಾ ಜುಲೈ 01 ರಂದು ನೆಟ್ಫ್ಲಿಕ್ಸ್ನಲ್ಲಿ ತೆರೆಗೆ ಬರುತ್ತಿದೆ. ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಅಷ್ಟಾಗಿ ಸದ್ದು ಂಆಡದ ಹಿನ್ನಲೆ ಬಹುಬೇಗ ಓಟಿಟಿ ಕಡೆ ಮುಖ ಮಾಡಿದೆ.
3/ 7
ಕನ್ನಡಿಗ ಮೇಝರ್ ಸಂದೀಪ್ ಉನ್ನಿಕೃಷ್ಣನ್ ಜೀವನ ಆಧರಿಸಿದ 'ಮೇಜರ್' ಸಿನಿಮಾ ಸಹ ನೆಟ್ಫ್ಲಿಕ್ಸ್ನಲ್ಲಿಯೇ ತೆರೆ ಕಾಣುತ್ತಿದೆ. ಜುಲೈ 3ರಿಂದ ನೆಟ್ಫ್ಲಿಕ್ಸ್ನಲ್ಲಿ ಲಭ್ಯವಿರುತ್ತದೆ. ಚಿತ್ರವು ಪ್ರಮುಖ ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಸಾರವಾಗಲಿದೆ.
4/ 7
ವಿಕ್ರಮ್ ಚಿತ್ರವು ಅಂತಿಮವಾಗಿ OTT ಬಿಡುಗಡೆ ದಿನಾಂಕವನ್ನು ಸ್ಪಷ್ಟಪಡಿಸಿದೆ. ಡಿಸ್ನಿ + ಹಾಟ್ಸ್ಟಾರ್ ಕಂಪನಿಯು ಇತ್ತೀಚೆಗೆ ಚಲನಚಿತ್ರ ದಿನಾಂಕವನ್ನು ಘೋಷಿಸಿದೆ. ಕಮಲ್ ಕುರಿತು ಆಸಕ್ತಿದಾಯಕ ಆಕ್ಷನ್ ವೀಡಿಯೊದೊಂದಿಗೆ, ಚಿತ್ರವು ಜುಲೈ 8 ರಿಂದ ಅವರ ಹಾಟ್ ಸ್ಟಾರ್ನಲ್ಲಿ ಲಭ್ಯವಿರುತ್ತದೆ ಎಂದು ಖಚಿತಪಡಿಸಲಾಗಿದೆ.
5/ 7
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 'ಸಾಮ್ರಾಟ್ ಪೃಥ್ವಿರಾಜ್' ಬಿಡುಗಡೆಯಾಗಿ ಅಷ್ಟೊಂದು ಸದ್ದು ಮಾಡಲಿಲ್ಲ. ಅಮೆಜಾನ್ ಪ್ರೈಮ್ ಇತ್ತೀಚೆಗೆ ಚಿತ್ರದ OTT ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಜುಲೈ 1, 2022 ರಿಂದ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ತಮಿಳು ಮತ್ತು ತೆಲುಗು ಡಬ್ಗಳ ಜೊತೆಗೆ ಹಿಂದಿಯಲ್ಲಿ ಚಲನಚಿತ್ರವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.
6/ 7
ಹಾಲಿವುಡ್ನ'ಸ್ಟ್ರೇಂಜರ್ ಥಿಂಗ್ಸ್' ವೆಬ್ ಸರಣಿಯ 4ನೇ ಸೀಸನ್ನ 2ನೇ ವಾಲ್ಯುಮ್ ನೆಟ್ಫ್ಲಿಕ್ಸ್ನಲ್ಲಿ ಜುಲೈ 1 ಕ್ಕೆ ಬಿಡುಗಡೆ ಆಗಿದೆ.ಇದರೊಂದಿಗೆ ಹಾಲಿವುಡ್ನ 'ಪವರ್ ಪ್ಲೇಯರ್ಸ್', 'ಲವ್ ಸಾಂಗ್', 'ಮೈಟಿ ಓಕ್' ಸಿನಿಮಾಗಳು ರಿಲೀಸ್ ಆಗಲಿವೆ.
7/ 7
ಜುಲೈ 1ರಿಂದ ಮಲಯಾಳಂನ 'ಕೀದಂ' ಚಿತ್ರವು ಜೀ 5ನಲ್ಲಿ ಬಿಡುಗಡೆ ಆಗಲಿದೆ. ಇದರೊಂದಿಗೆ ಮಿಯಾ ಬೀವಿ ಔರ್ ಮರ್ಡರ್' ವೆಬ್ ಸಿರೀಸ್, ಶಟಪ್ ಸೋನಾ' ಸಿನಿಮಾಗಳೂ ಸಹ ಬಿಡುಗಡೆ ಆಗುತ್ತಿದ್ದು ಈ ವಾರ ಸಿನಿ ಪ್ರೇಮಿಗಳಿಗೆ ಸೂಪರ್ ವೀಕೆಂಡ್ ಆಗಲಿದೆ.