Mouni Roy : ಮೌನಿ ರಾಯ್ ಅವರು ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು.ಜನವರಿ 27 ರಂದು ಗೋವಾದಲ್ಲಿ ಮಲಯಾಳಿ ಮತ್ತು ಬೆಂಗಾಲಿ ಸಾಂಪ್ರದಾಯಿಕ ರೀತಿಯಲ್ಲಿ ದಂಪತಿಗಳು ವಿವಾಹವಾದರು. ಅವರ ವಿವಾಹದ ಫೋಟೋ, ವಿಡಿಯೋಗಳು ಸಖತ್ ಸೌಂಡ್ ಮಾಡಿತ್ತು.
ಟಿವಿ ನಟಿ ಮತ್ತು ಗಾಯಕಿಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಮೌನಿ ರಾಯ್ ಈಗ ಬಾಲಿವುಡ್ ಬಹುಬೇಡಿಕೆಯ ನಟಿ. ಸದಾ ತಮ್ಮ ಸೌಂದರ್ಯದ ಮೂಲಕವೇ ಮೌನಿ ರಾಯ್ ಸದ್ದು ಮಾಡುತ್ತಿರುತ್ತಾರೆ. ಇದೀಗ ತಮ್ಮ ಹೊಸ ಫೋಟೋಗಳನ್ನು ಮೌನಿ ಶೇರ್ ಮಾಡಿದ್ದಾರೆ.
2/ 7
ಇತ್ತೀಚೆಗೆ ತಮ್ಮ ಬಹುಕಾಲದ ಗೆಳೆಯನೊಟ್ಟಿಗೆ ಮೌನಿ ರಾಯ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅದ್ಧೂರಿಯಾಗಿ ಮದುವೆಯಾಗಿದ್ದರು. ಇದೀಗ ಮೌನಿ ರಾಯ್ ಸೀರೆ ತೊಟ್ಟು ಹೊಸ ಫೋಟೋಶೂಟ್ ಮಾಡಿಸಿದ್ದಾರೆ
3/ 7
ಮೌನಿ ರಾಯ್ ಅವರು ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು.ಜನವರಿ 27 ರಂದು ಗೋವಾದಲ್ಲಿ ಮಲಯಾಳಿ ಮತ್ತು ಬೆಂಗಾಲಿ ಸಾಂಪ್ರದಾಯಿಕ ರೀತಿಯಲ್ಲಿ ದಂಪತಿಗಳು ವಿವಾಹವಾದರು. ಅವರ ವಿವಾಹದ ಫೋಟೋ, ವಿಡಿಯೋಗಳು ಸಖತ್ ಸೌಂಡ್ ಮಾಡಿತ್ತು.
4/ 7
ಮೌನಿ ರಾಯ್ ತನ್ನ ಪತಿ ಸೂರಜ್ ನಂಬಿಯಾರ್ ಅವರೊಂದಿಗೆ ಹನಿಮೂನ್ಗಾಗಿ ಕಾಶ್ಮೀರದ ಗುಲ್ಮಾರ್ಗ್ಗೆ ಹೋಗಿದ್ದರು. ಅಲ್ಲಿಯೂ ತನ್ನ ಹಾಟ್ ಲುಕ್ನಿಂದ ಪಡ್ಡೆ ಹೈಕ್ಳ ಹೃದಯಕ್ಕೆ ಮೌನಿ ರಾಯ್ ಬೆಂಕಿ ಇಟ್ಟಿದ್ದರು.
5/ 7
ತಮ್ಮ ಮೈಮಾಟದ ಮೂಲಕವೇ ಸಾಕಷ್ಟು ಜನಪ್ರಿಯತೆ ಗಳಿಸಿರುವ ಈ ಮುದ್ದುಗುಮ್ಮ ಕೆಜಿಎಫ್ ಸಿನಿಮಾದಲ್ಲಿ `ಗಲಿ ಗಲಿ‘ ಎಂಬ ಐಟಂ ಸಾಂಗ್ನಲ್ಲಿ ಸೊಂಟ ಬಳುಕಿಸಿದ್ದರು. ಇದಾದ ಬಳಿಕ ಅವರ ಸ್ಟಾರ್ ಚೇಂಜ್ ಆಗಿತ್ತು.
6/ 7
ಪರಿಪೂರ್ಣ ವ್ಯಕ್ತಿತ್ವದ ಕನಸು ಕಂಡಿದ್ದ ಮೌನಿ ರಾಯ್ ಚಿಕ್ಕ ವಯಸ್ಸಿನಲ್ಲೇ ಹಲವರ ಸಲಹೆ ಮೇರೆಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಅಲ್ಲಿ ತನ್ನ ಮೋಡಿಯಿಂದ ಎಲ್ಲರನ್ನೂ ತನ್ನ ಕಡೆ ತಿರುಗಿಸಿ ಒಳ್ಳೆಯ ಹೆಸರು ಮಾಡಿದ್ದರು.
7/ 7
ಕಿರುತೆರೆ, ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಬಾಲಿವುಡ್ ತಾರೆ ಮೌನಿ ರಾಯ್ ಮೂಲತಃ ಪಶ್ಚಿಮ ಬಂಗಾಳದ ಕುವರಿ.'ನಾಗಿನ್' ಧಾರಾವಾಹಿಯಲ್ಲಿ ಶಿವನ್ಯಾ ಪಾತ್ರ ಮಾಡಿದ್ದರು. ಅಷ್ಟೇ ಅಲ್ಲದೇ ಮೌನಿ ರಾಯ್ ಒಳ್ಳೆಯ ಕಥಕ್ ಡಾನ್ಸರ್ ಕೂಡ ಹೌದು. ಹಲವು ಡಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.