ತಾಯಿ ಸೆಂಟಿಮೆಂಟ್ ಅಂದರೆ ಮೊದಲಿಗೆ ನೆನಪಿಗೆ ಬರುವುದೇ ಜೋಗಿ ಸಿನಿಮಾ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಹಿರಿಯ ನಟಿ, ರಂಗಕರ್ಮಿ ಅರುಂಧತಿ ನಾಗ್ ತಾಯಿ-ಮಗನಾಗಿ ಅಭಿನಯಿಸಿದ್ದ ಈ ಸಿನಿಮಾ ಇಂದಿಗೂ ಕನ್ನಡಿಗರ ಅಚ್ಚುಮೆಚ್ಚಿನ ಚಿತ್ರ. ಪ್ರೇಮ್ ನಿರ್ದೇಶನದ ಈ ಸಿನಿಮಾ 2005ರಲ್ಲಿ ತೆರೆ ಕಂಡು ಬಾಕ್ಸ್ ಆಫೀಸ್ನಲ್ಲಿ ಚಿಂದಿ ಉಡಾಯಿಸಿತ್ತು. ಮ್ಯೂಸಿಕ್, ಹಿನ್ನೆಲೆ ಗಾಯನ, ಕಥೆ, ಚಿತ್ರಕಥೆ, ಸಂಭಾಷಣೆ ಮೂಲಕ ಮನಗೆದ್ದ ಈ ಸಿನಿಮಾದಲ್ಲಿ ತಾಯಿ-ಮಗನ ಬಾಂಧವ್ಯವೇ ಹೈಲೆಟ್ಸ್.
ನಟಸಾರ್ವಭೌಮ ಡಾ. ರಾಜ್ಕುಮಾರ್ ಅಭಿನಯದ ಪ್ರಮುಖ ಸಿನಿಮಾಗಳಲ್ಲಿ ತಾಯಿಗೆ ತಕ್ಕ ಮಗ ಕೂಡ ಒಂದು. 1978ರಲ್ಲಿ ತೆರೆಗೆ ಬಂದ ಈ ಸಿನಿಮಾ ನಿರ್ದೇಶಿಸಿದ್ದು ಸೋಮಶೇಖರ್. ಆಂಜನೇಯ ಪುಷ್ಪಾನಂದ್ ಬರೆದ ಕಥೆಯನ್ನು ಆಧರಿಸಿದ ಇದನ್ನು ನಿರ್ಮಾಣ ಮಾಡಿದ್ದ ಪಾರ್ವತಮ್ಮ ರಾಜ್ಕುಮಾರ್. ಅಂದಿನ ಖ್ಯಾತ ನಟಿ ಸಾವಿತ್ರಿ ಈ ಸಿನಿಮಾದಲ್ಲಿ ತಾಯಿ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದರು.
ಅಮ್ಮ.. ಕನ್ನಡದ ಖ್ಯಾತ ಜೋಡಿ ಅನಂತ್ ನಾಗ್ ಹಾಗೂ ಲಕ್ಷ್ಮೀ ಮತ್ತೆ ಒಂದಾದ ಸಿನಿಮಾ. ಚಿತ್ರದ ಹೆಸರೇ ಹೇಳುವಂತೆ ಚಿತ್ರ ತಾಯಿ ಪ್ರಧಾನ. ಮಾತೆಯ ಮಮತೆಯ ಸುತ್ತಾ ಹೆಣೆದ ಕಥೆ. ಬಿಡುವಿಲ್ಲದೆ ದುಡಿಯುವ ತಾಯಿ ಹೇಗೆ ನಿರ್ಲಕ್ಷಿಸಲ್ಪಡುತ್ತಾಳೆ ಎಂಬುದು ಕಥಾವಸ್ತು. ಇತ್ತೀಚೆಗೆ ಚಿತ್ರದ ಮೊದಲ ದೃಶ್ಯದ ಚಿತ್ರೀಕರಣ ಡಿ. ರಾಜೇಂದ್ರ ಬಾಬು ನಿರ್ದೇಶನದಲ್ಲಿ ಬಂದ ಈ ಸಿನಿಮಾ ರಿಲೀಸ್ ಆಗಿದ್ದು 2013ರಲ್ಲಿ.
ಇತ್ತೀಚಿಗೆ ಬಂದ ತಾಯಿ ಪ್ರೀತಿಯ ಕಥೆ ಹೇಳುವ ಸಿನಿಮಾ ರತ್ನನ್ ಪ್ರಪಂಚ. ನೀವೆಲ್ಲ ಅಮೆಜಾನ್ ಪ್ರೈಮ್ನಲ್ಲಿ (Amazon Prime) ರಿಲೀಸ್ (Release) ಆಗಿದ್ದ, ನಟ ಡಾಲಿ ಧನಂಜಯ್ (Dali Dhananjay), ಉಮಾಶ್ರೀ (Umshri) ಅಭಿನಯದ ‘ರತ್ನನ್ ಪ್ರಪಂಚ’ (Ratnan Prapancha) ಸಿನಿಮಾ ನೋಡಿರುತ್ತೀರಿ. ಅಮ್ಮನೇ (Mother) ಸರ್ವಸ್ವ ಎಂದುಕೊಂಡಿದ್ದ ಮಗ (Son), ಆ ಅಮ್ಮ ನನ್ನ ಸ್ವಂತ ಅಮ್ಮ ಅಲ್ಲ ಎನ್ನುವುದು ಗೊತ್ತಾದಾಗ ತೊಳಲುವ ಪರಿ, ಮಗನಿಗೆ ಸತ್ಯ (Truth) ಗೊತ್ತಾಯ್ತು ಅಂತ ಆತಂಕಗೊಳ್ಳುವ ಅಮ್ಮ, ತನ್ನ ಹೆತ್ತ ಅಮ್ಮನನ್ನು ಹುಡುಕಿಕೊಂಡು ಹೋಗುವ ಕಥಾ ನಾಯಕ (Hero).. ಇವೆಲ್ಲ ನೋಡಿ ನೀವೂ ಕಣ್ಣೀರು ಹಾಕಿರುತ್ತೀರಿ.