Most Watched Movies: 2022ರಲ್ಲಿ ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾಗಳಿವು

ಕೊರೋನಾ ನಂತರ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಹೊಡೆತ ಬಿದ್ದಿದೆ. ಈ ವರ್ಷ ದಕ್ಷಿಣ ಭಾರತದ ಸಿನಿಮಾಗಳು ಭರದಿಂದ ಸಾಗುತ್ತಿವೆ. ಮಾರ್ಚ್‌ನಲ್ಲಿ ಬಿಡುಗಡೆಯಾದ ಆರ್‌ಆರ್‌ಆರ್, ಏಪ್ರಿಲ್‌ನಲ್ಲಿ ಬಿಡುಗಡೆಯಾದ ಕೆಜಿಎಫ್ ಚಾಪ್ಟರ್ 2, ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಕಾಂತಾರ ಮತ್ತು ಪೊನ್ನಿಯಿನ್ ಸೆಲ್ವನ್ ಕೋಟ್ಯಂತರ ರೂಪಾಯಿಗಳನ್ನು ಕೊಳ್ಳೆ ಹೊಡೆಯುವ ಮೂಲಕ ಬಾಕ್ಸ್ ಆಫೀಸ್ ರೂಲ್ ಮಾಡಿದೆ. 2022ರಲ್ಲಿ ಅಮೆಜಾನ್ ಪ್ರೈಮ್​ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾಗಳು ಯಾವುವು? ನೋಡೋಣ ಬನ್ನಿ.

First published:

  • 19

    Most Watched Movies: 2022ರಲ್ಲಿ ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾಗಳಿವು

    ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಚಿತ್ರರಂಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಆದರೆ ಈ ವರ್ಷ ಪರಿಸ್ಥಿತಿ ಉತ್ತಮವಾಗಿರುವುದರಿಂದ ಮತ್ತೆ ಸಿನಿಮಾ ನೋಡಲು ಜನ ಥಿಯೇಟರ್‌ಗಳಿಗೆ ಬರಲಾರಂಭಿಸಿದ್ದಾರೆ. ಕೆಲವು ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾಗಿ ತಮ್ಮ ಸಾಮರ್ಥ್ಯವನ್ನು ತೋರಿಸಿವೆ. ಈ ವರ್ಷ ಕೆಲವು ಸಿನಿಮಾಗಳು ಜನಪ್ರಿಯ OTT ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್‌ನ ಟಾಪ್ ಪಟ್ಟಿಗಳಲ್ಲಿ ಸ್ಥಾನ ಪಡೆದಿವೆ.

    MORE
    GALLERIES

  • 29

    Most Watched Movies: 2022ರಲ್ಲಿ ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾಗಳಿವು

    ದಕ್ಷಿಣ ಭಾರತದ ಸಿನಿಮಾಗಳು ಈ ವರ್ಷ ಭರದಿಂದ ಸಾಗುತ್ತಿವೆ. ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರ ಈ ವರ್ಷ ದೇಶಾದ್ಯಂತ ಜನಪ್ರಿಯವಾಗಿದೆ. ಈ ಸಿನಿಮಾದಲ್ಲಿ ಬನ್ನಿ ಖ್ಯಾತಿಯ ಅಲ್ಲು ಅರ್ಜುನ್ ಅವರ ಅಭಿನಯ ನೋಡಿ ಅಭಿಮಾನಿಗಳೆಲ್ಲ ಮೆಚ್ಚಿಕೊಂಡಿದ್ದಾರೆ. ಈ ಚಲನಚಿತ್ರವು ಅಮೆಜಾನ್ ಪ್ರೈಮ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಟಾಪ್ 1 ಚಲನಚಿತ್ರವಾಯಿತು

    MORE
    GALLERIES

  • 39

    Most Watched Movies: 2022ರಲ್ಲಿ ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾಗಳಿವು

    ಪುಷ್ಪಾ ನಂತರ ಆ ಕ್ರೆಡಿಟ್ ಕೆಜಿಎಫ್ ಚಾಪ್ಟರ್ 1ಗೆ ಸಿಕ್ಕಿದೆ. ಕನ್ನಡದ ಹೀರೋ ಯಶ್ ಅಭಿನಯದ ಈ ಚಿತ್ರ ಭಾರತಾದ್ಯಂತ ಜನಪ್ರಿಯತೆ ಗಳಿಸಿದೆ. ಈ ಚಿತ್ರವನ್ನು ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಗಳಿಸಿದ ಕೆಜಿಎಫ್, ಪ್ರೈಮ್‌ನಲ್ಲೂ ಹೆಚ್ಚು ವೀಕ್ಷಿಸಿದ ಎರಡನೇ ಸಿನಿಮಾ ಆಗಿ ಹೊರಹೊಮ್ಮಿದೆ.

    MORE
    GALLERIES

  • 49

    Most Watched Movies: 2022ರಲ್ಲಿ ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾಗಳಿವು

    ಕೆಜಿಎಫ್ ನ ಮುಂದುವರಿದ ಭಾಗವಾದ ಕೆಜಿಎಫ್ 2 ಕೂಡ ಬ್ಲಾಕ್ ಬಸ್ಟರ್ ಆಯಿತು. ಕೆಜಿಎಫ್ 2 ಮಿಸ್ ಮಾಡಿಕೊಂಡವರು ಮತ್ತೆ ಮತ್ತೆ ನೋಡಬೇಕು ಎಂದುಕೊಂಡವರು ಒಟಿಟಿಯಲ್ಲಿ ನೋಡಿದರು. ಈ ಚಿತ್ರ ಪ್ರೈಮ್ ಒಟಿಟಿಯಲ್ಲಿ ಮೊದಲ ಮೂರು ಸ್ಥಾನದಲ್ಲಿದೆ. ಕನ್ನಡದ ಸ್ಟಾರ್ ಹೀರೋ ಯಶ್ ಗೆ ಫುಲ್ ಪಾಪ್ಯುಲಾರಿಟಿ ತಂದುಕೊಟ್ಟಿದ್ದು ಕೆಜಿಎಫ್ ಸೀರಿಸ್.

    MORE
    GALLERIES

  • 59

    Most Watched Movies: 2022ರಲ್ಲಿ ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾಗಳಿವು

    ಸೀತಾರಾಮಂ. ಈ ಹೆಸರು ಎಷ್ಟು ಚೆನ್ನಾಗಿದೆಯೋ ಸಿನಿಮಾ ಅಷ್ಟೇ ಸ್ವಾರಸ್ಯಕರವಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಸಿನಿಮಾ ಬಂದಿಲ್ಲ ಎಂದೇ ಹೇಳಬೇಕು. ವಿಭಿನ್ನ ಪ್ರೇಮಕಥೆಯಾಗಿ ಪ್ರೇಕ್ಷಕರ ಮುಂದೆ ಬಂದ ಸೀತಾರಾಮಂ ಎಲ್ಲರ ಮನ ಗೆದ್ದಿತ್ತು. ಒಟಿಟಿಯಲ್ಲೂ ಸೀತಾರಾಮಂ ಉತ್ತಮ ರೇಟಿಂಗ್ ಪಡೆದಿದೆ. ಅಮೆಜಾನ್ ಪ್ರೈಮ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಚಲನಚಿತ್ರಗಳಲ್ಲಿ ಸೀತಾರಾಮಂ ಸಿನಿಮಾ ನಾಲ್ಕನೇ ಸ್ಥಾನದಲ್ಲಿದೆ.

    MORE
    GALLERIES

  • 69

    Most Watched Movies: 2022ರಲ್ಲಿ ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾಗಳಿವು

    ಪೊನ್ನಿಯನ್ ಸೆಲ್ವನ್ ಭಾಗ ಒಂದನ್ನು ಖ್ಯಾತ ನಿರ್ದೇಶಕ ಮಣಿರತ್ನಂ ಬಹಳ ಮಹತ್ವಾಕಾಂಕ್ಷೆಯಿಂದ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ವಿಕ್ರಮ್, ಕಾರ್ತಿ, ಜಯಂ ರವಿ ಜೊತೆಗೆ ಐಶ್ವರ್ಯ ರೈ, ತ್ರಿಷಾ ಸೇರಿ ದೊಡ್ಡ ತಾರಾಬಳಗವೇ ಇದೆ. ಅಮೆಜಾನ್ ಪ್ರೈಮ್ ನಲ್ಲಿ ಚಿತ್ರ ಐದನೇ ಸ್ಥಾನದಲ್ಲಿದೆ. ಏಪ್ರಿಲ್ 30 ರಂದು ಬಿಡುಗಡೆಯಾದ ಸಿನಿಮಾ ಕಾಲಿವುಡ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ.

    MORE
    GALLERIES

  • 79

    Most Watched Movies: 2022ರಲ್ಲಿ ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾಗಳಿವು

    ಸೌತ್ ಸಿನಿಮಾಗಳು ಟಾಪ್ 5ರಲ್ಲಿವೆ. ಆ ನಂತರ ಬಾಲಿವುಡ್ ಸಿನಿಮಾಗಳು ಮಿಂಚಿವೆ. ಬಚ್ಚನ್ ಪಾಂಡೆ ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ ಚಿತ್ರ. ಪ್ರೈಮ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಸಿನಿಮಾಗಳಲ್ಲಿ ಟಾಪ್ 6ನೇ ಸ್ಥಾನದಲ್ಲಿ ಬಚ್ಚನ್ ಪಾಂಡೆ ಇದೆ.

    MORE
    GALLERIES

  • 89

    Most Watched Movies: 2022ರಲ್ಲಿ ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾಗಳಿವು

    ಜಗ್ ಜಗ್ ಜಿಯೋ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಮತ್ತು ವರುಣ್ ಧವನ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅನಿಲ್ ಕಪೂರ್ ಕೂಡ ನಟಿಸಿದ್ದಾರೆ. ಈ ಸಿನಿಮಾ ಅಮೆಜಾನ್ ನಲ್ಲಿ ಟಾಪ್ 7 ಸ್ಥಾನಗಳಲ್ಲಿತ್ತು.

    MORE
    GALLERIES

  • 99

    Most Watched Movies: 2022ರಲ್ಲಿ ಅಮೆಜಾನ್ ಪ್ರೈಂನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾಗಳಿವು

    ಅದರ ನಂತರ, ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ ಚಿತ್ರ ರನ್ವೇ 34. ಈ ಸಿನಿಮಾದಲ್ಲಿ ಅಜಯ್ ಪೈಲಟ್ ಆಗಿ ನಟಿಸಿದ್ದಾರೆ. ಇದರಲ್ಲಿ ರಾಕುಲ್ ಪ್ರೀತ್ ಸಿಂಗ್ ಕೂಡ ನಟಿಸಿದ್ದಾರೆ. ಪನೋರಮಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಅಜಯ್ ದೇವಗನ್ ನಿರ್ಮಿಸಿ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಮೊದಲು 'ಮೇಡೇ' ಎಂದು ಘೋಷಿಸಲಾಯಿತು. ನಂತರ ಅದನ್ನು 'ರನ್‌ವೇ 34' ಎಂದು ಮಾಡಲಾಯಿತು. ಅಮಿತಾಭ್ ಬಚ್ಚನ್ ಕೂಡ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಪ್ರೈಮ್ ನಲ್ಲಿ ಟಾಪ್ 8 ಸ್ಥಾನ ಗಳಿಸಿದೆ.

    MORE
    GALLERIES