ಭಾರತೀಯ ಚಿತ್ರರಂಗದಲ್ಲಿ ಸೌತ್ ಸಿನಿಮಾ ಇದೀಗ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದೆ. ಇಲ್ಲಿನ ಸಿನಿಮಾಗಳು ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ಸೌತ್ ಸ್ಟಾರ್ಗಳ ಜನಪ್ರಿಯತೆ ಕೂಡ ಹೆಚ್ಚಿಸಿದ್ದು, ಆದಾಯ ದುಪ್ಪಟ್ಟಾಗಿದೆ. ಸೌತ್ ಸ್ಟಾರ್ಗಳು ಐಷಾರಾಮಿ ಬದುಕು ನಡೆಸುತ್ತಿದ್ದಾರೆ. ದುಬಾರಿ ಮನೆಗಳಲ್ಲಿ ವಾಸಿಸುತ್ತಿರುವ ತಾರೆಯರು ಯಾರು ಎಂಬುದನ್ನು ತಿಳಿದುಕೊಳ್ಳಬೇಕಿದೆ. (ಸಾಂಕೇತಿಕ ಚಿತ್ರ)
ಡಾರ್ಲಿಂಗ್ ಪ್ರಭಾಸ್ ಬಾಹುಬಲಿಯಾಗಿ ವಿಶ್ವಾದ್ಯಂತ ಖ್ಯಾತಿ ಗಳಿಸಿದರು. ಪ್ರಭಾಸ್ ಜೂಬಿಲಿ ಹಿಲ್ಸ್ ಫಾರ್ಮ್ ಹೌಸ್ನಲ್ಲಿ ವಾಸಿಸುತ್ತಿದ್ದಾರೆ. ಈ ಪ್ಯಾನ್ ಇಂಡಿಯಾ ಸ್ಟಾರ್ ಕಟೌಟ್ನಂತೆ, ಫಾರ್ಮ್ ಹೌಸ್ ಕೂಡ ತುಂಬಾ ವಿಶಾಲವಾಗಿದೆ. ಸುಮಾರು 84 ಎಕರೆ ಪ್ರದೇಶದಲ್ಲಿದೆ. ಈ ಜಾಗದಲ್ಲಿ ಐಷಾರಾಮಿ ಮನೆಯನ್ನು ನಿರ್ಮಿಸಿದ್ದಾರೆ. ಇದರ ಮೌಲ್ಯ ಸುಮಾರು 60 ಕೋಟಿ ರೂಪಾಯಿ ಇದೆ.
ಟಾಲಿವುಡ್ ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ ಈಗಲೂ ಯಂಗ್ ಸ್ಟಾರ್ಗಳಿಗೆ ಸೆಡ್ಡು ಹೊಡೆಯುವಂತೆ ಅಭಿನಯಿಸುತ್ತಾರೆ. ಈ ಕಿಂಗ್ ಹೀರೋ ಕೂಡ ಹೈದರಾಬಾದ್ನ ಜುಬಿಲಿ ಹಿಲ್ಸ್ನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಕುಟುಂಬದೊಂದಿಗೆ ಅತ್ಯಂತ ಟ್ರೆಡಿಷನ್ ಹೌಸ್ನಲ್ಲಿ ವಾಸಿಸುತ್ತಿದ್ದಾರೆ. ರಸ್ತೆ ಸಂಖ್ಯೆ 48ರಲ್ಲಿ ಪತ್ನಿ ಅಮಲಾ ಜತೆ 42 ಕೋಟಿ ರೂ.ಗಳ ಐಷಾರಾಮಿ ಮನೆಯಲ್ಲಿ ವಾಸವಾಗಿದ್ದಾರೆ.
ದಿ ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ಮೂಲಕ ದೇಶಾದ್ಯಂತ ಕ್ರೇಜ್ ಗಳಿಸಿರುವ ನಟಿ ಸಮಂತಾ, ಸಿನಿಮಾಗಿಂತ ಹೆಚ್ಚು ವೈಯಕ್ತಿಕ ಜೀವನದಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಸ್ಯಾಮ್ ಇತ್ತೀಚೆಗೆ 7.8 ಕೋಟಿ ಹೂಡಿಕೆ ಮಾಡಿ ಐಷಾರಾಮಿ ಫ್ಲಾಟ್ ಖರೀದಿಸಿದ್ದಾರೆ. ಸದ್ಯ ಸ್ಯಾಮ್ ಹೈದರಾಬಾದ್ನಲ್ಲಿ ಬಂಗಲೆಯನ್ನೂ ಹೊಂದಿದ್ದಾರೆ. ಸ್ಯಾಮ್ ಈ ಹಿಂದೆ ರೂ.15 ಕೋಟಿ ಹೂಡಿಕೆ ಮಾಡಿ ಮುಂಬೈನಲ್ಲಿ ಫ್ಲ್ಯಾಟ್ ತೆಗೆದುಕೊಂಡಿದ್ದರು.