Jacqueline Fernandez-Nora Fatehiಗೆ ಮತ್ತೆ ಶಾಕ್ ಕೊಟ್ಟ ಜಾರಿ ನಿರ್ದೇಶನಾಲಯ
ದುಬೈನಲ್ಲಿ ಎಂಜಾಯ್ ಮಾಡುತ್ತಿರುವ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರಿಗೆ ಜಾರಿ ನಿರ್ದೇಶನಾಲಯ ( ED) ಮತ್ತೆ ಶಾಕ್ ಕೊಟ್ಟಿದೆ. ಈ ನಟಿಯ ಜೊತೆಗೆ ಈಗ ನೋರಾ ಫತೇಹಿ (Nora Fatehi) ಅವರಿಗೂ ಇಡಿ ಸಮನ್ಸ್ ನೀಡಿದೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ)
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಇಡಿ ಎರಡು ಸಲ ಸಮನ್ಸ್ ಜಾರಿ ಮಾಡಿತ್ತು. ನಟಿ ನೋರಾ ಫತೇಹಿ ಸಹ ಇದೇ ಪ್ರಕರಣಕ್ಕೆ ಸಂಬಂಧಸಿದಂತೆ ಈಗ ವಿಚಾರಣೆಗೆ ಹಾಜರಾಗಬೇಕಿದೆ.
2/ 6
ಹಾಟ್ ಫೋಟೋಶೂಟ್ ಹಾಗೂ ವಿನ್ಯಾಸಿತ ಬೋಲ್ಡ್ ಡ್ರೆಸ್ಗಳನ್ನು ತೊಟ್ಟು ಟ್ರೋಲ್ ಆಗುವ ನಟಿ ನೋರಾ ಈಗ ಇಡಿ ಕಚೇರಿ ತಲುಪಿದ್ದಾರೆ. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದಾರೆ.
3/ 6
ಕೆಲ ತಿಂಗಳ ಹಿಂದೆ ರಾನ್‍ಬ್ಯಾಕ್ಸಿ ಕಂಪನಿಯ ಮಾಜಿ ಪ್ರಮೋಟರ್ಗಳಾದ ಶಿವಿಂದರ್ ಸಿಂಗ್ ಹಾಗೂ ಮಾಳ್ವಿಂದರ್ ಸಿಂಗ್‍ರಿಗೆ ಬರೋಬ್ಬರಿ 200 ಕೋಟಿ ರೂಪಾಯಿ ವಂಚಿಸಿದ್ದ ಖತರ್ನಾಕ್ ಸುಖೇಶ್ ಚಂದ್ರಶೇಖರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನೋರಾ ಸಹ ವಿಚಾರಣೆ ಎದುರಿಸಿದ್ದಾರೆ.
4/ 6
ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನೋರಾ ಫತೇಹಿ ಜತೆ ಈ ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ಹಲವು ಬಾರಿ ದೂರವಾಣಿ ಮೂಲಕ ಮಾತನಾಡಿರುವುದು ಇಡಿ ಅಧಿಕಾರಿಗಳ ಗಮನಕ್ಕೆ ಬಂದಿದೆ. ಅದಕ್ಕೆ ಈಗ ಮತ್ತೆ ಈ ನಟಿಯರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
5/ 6
ಇಂದು ನೋರಾ ಫತೇಹಿ ಅವರು ವಿಚಾರಣೆಗೆ ಹಾಜರಾಗಿದ್ದು, ನಾಳೆ ಜಾಕ್ವೆಲಿನ್ ಫರ್ನಾಂಡಿಸ್ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ಆದರೆ ಸಮನ್ಸ್ ಜಾರಿಯಾಗಿದ್ದರು ಜಾಕ್ವೆಲಿನ್ ವಿಚಾರಣೆಗೆ ಹಾಜರಾಗುವುದು ಖಚಿತವಾಗಿಲ್ಲ.
6/ 6
ಜಾಕ್ವೆಲಿನ್ ಫರ್ನಾಂಡಿಸ್ ಅವರು ಸದ್ಯ ದುಬೈನಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಲ್ಲಿ ಎಂಜಾಯ್ ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ.