ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿರುವ ಮೊದಲ ಹಿಂದಿ ಸಿನಿಮಾ ಮಿಷನ್ ಮಜ್ನು (Mission Majnu). ಇತ್ತೀಚೆಗಷ್ಟೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಈಗ ಈ ಚಿತ್ರದ ಶೂಟಿಂಗ್ ಮುಕ್ತಾಯವಾದ ಖುಷಿಯಲ್ಲಿ ಪಾರ್ಟಿ ಮಾಡಿದೆ. ಇಲ್ಲಿವೆ ಪಾರ್ಟಿಯ ಚಿತ್ರಗಳು. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರು ಅಭಿನಯಿಸಿರುವ ಮೊದಲ ಹಿಂದಿ ಸಿನಿಮಾ ಮಿಷನ್ ಮಜ್ನು (Mission Majnu). ಇತ್ತೀಚೆಗಷ್ಟೇ ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಕುಂಬಳಕಾಯಿ ಒಡೆದ ಖುಷಿಯಲ್ಲಿದ್ದಾರೆ ರಶ್ಮಿಕಾ.
2/ 8
ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣ ಮುಕ್ತಾಯವಾದ ಹಿನ್ನಲೆಯಲ್ಲಿ ಇಡೀ ಚಿತ್ರತಂಡ ನಿನ್ನೆಯಷ್ಟೆ ಮುಂಬೈನಲ್ಲಿ ಪಾರ್ಟಿ ಮಾಡಿದೆ. ಈ ಪಾರ್ಟಿಗಾಗಿ ರಶ್ಮಿಕಾ ಮುಂಬೈ ತಲುಪಿದ್ದರು.
3/ 8
ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ರಶ್ಮಿಕಾ ಅವರು ಸಖತ್ ಸ್ಟೈಲಿಶ್ ಲುಕ್ನಲ್ಲಿ ಪಾರ್ಟಿಯಲ್ಲಿ ಮಿಂಚಿದ್ದಾರೆ. ಅವರ ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
4/ 8
ಮುಂಬೈನ ಖಾಸಗಿ ಹೋಟೆಲ್ನಲ್ಲಿ ಈ ಪಾರ್ಟಿ ನಡೆದಿದ್ದು, ಚಿತ್ರತಂಡ ಕೇಕ್ ಕತ್ತರಿಸಿ ಸಂಭ್ರಮಿಸಿದೆ. ಪಾರ್ಟಿಯಲ್ಲಿ ರಶ್ಮಿಕಾ ಹಾಗೂ ಸಿದ್ಧಾರ್ಥ್ ಜೊತೆ ಇಡೀ ಚಿತ್ರತಂಡ ಹಾಜರಿತ್ತು.
5/ 8
ಶಾಂತನು ಬಗ್ಚೀ(Shantanu Bagchi) ನಿರ್ದೇಶನದ ಮಿಷನ್ ಮಜ್ನು ನೈಜ ಘಟನೆ ಆಧಾರಿತ ಚಿತ್ರ. ಕಳೆದ 2020ರ ಡಿಸೆಂಬರ್ನಲ್ಲಿ ಸಿನಿಮಾ ಅನೌನ್ಸ್ ಮಾಡಲಾಗಿತ್ತು. ಇದೇ ಫೆಬ್ರವರಿಯಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭ ಮಾಡಲಾಯಿತು. ವಿಶೇಷ ಅಂದರೆ ಕೇವಲ ಆರು ತಿಂಗಳಲ್ಲಿ ಚಿತ್ರತಂಡ ಚಿತ್ರೀಕರಣ ಪೂರ್ಣಗೊಳಿಸಿದೆ.
6/ 8
ಮಿಷನ್ ಮಜ್ನು 1970ರ ದಶಕದಲ್ಲಿ ನಡೆದ ಘಟನೆ ಎನ್ನಲಾಗಿದೆ. ಭಾರತೀಯ ಗೂಢಚಾರ ಸಂಸ್ಥೆ ರಾ ತಂಡ ಪಾಕಿಸ್ತಾನದಲ್ಲಿ ನಡೆಸಿದ ಅತಿ ದೊಡ್ಡ ಆಪರೇಷನ್ ಸುತ್ತ ಚಿತ್ರದ ಘಟನೆ ಹೆಣೆಯಲಾಗಿದೆ.
7/ 8
ಮಿಷನ್ ಮಜ್ನು ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ರಶ್ಮಿಕಾ ಮಂದಣ್ಣ ಹೊರತುಪಡಿಸಿದರೆ ಪರ್ಮೀತ್ ಸೇಥಿ, ಶಾರಿಬ್ ಹಷ್ಮಿ, ಜಾಕಿರ್ ಹುಸೇನ್, ಕುಮುದ್ ಮಿಶ್ರಾ, ಅರ್ಜನ್ ಬಾಜ್ವಾ ಪ್ರಮುಖ ತಾರಾಗಣದಲ್ಲಿದ್ದಾರೆ.
8/ 8
ಮಿಷನ್ ಮಜ್ನು ಬೆನ್ನಲ್ಲೇ ರಶ್ಮಿಕಾ ಗುಡ್ಬೈ ಎಂಬ ಮತ್ತೊಂದು ಹಿಂದಿ ಸಿನಿಮಾ ಕೂಡ ಸೈನ್ ಮಾಡಿದ್ದಾರೆ. ಕ್ವೀನ್ ಖ್ಯಾತಿಯ ವಿಕಾಸ್ ಬೆಹ್ಲ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ರಶ್ಮಿಕಾ ಇದೇ ಮೊದಲ ಬಾರಿಗೆ ಬಾಲಿವುಡ್ ಬಿಗ್ಬಿ ಅಮಿತಾಭ್ ಬಚ್ಚನ್ ಅವರ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ಈಗಾಗಲೇ ಈ ಸಿನಿಮಾ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.