Actress Roja: ರೋಜಾ ಜೀವನದ ರೋಚಕ ಸ್ಟೋರಿ; ಡೈರೆಕ್ಟರ್ ಕೈ ಹಿಡಿಯಲು ಪಟ್ಟಪಾಡು ಅಷ್ಟಿಷ್ಟಲ್ಲ!

Actress Roja: ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಹೆಸರು ಮಾಡಿರುವ ನಿರ್ದೇಶಕ ಸೆಲ್ವಮಣಿ. ಆದರೆ ಅವರ ಹೆಸರು ತೆಲುಗಿನಲ್ಲಿ ಸಿನಿಮಾಗಳಿಗಿಂತ ಹೆಚ್ಚು ಜನಪ್ರಿಯವಾಗಲು ನಟಿ ರೋಜಾ ಕಾರಣರಾಗಿದ್ದಾರೆ. ಸೆಲ್ವಮಣಿ ಮದುವೆಯಾಗಲು ನಟಿ ರೋಜಾ ಏನೆಲ್ಲಾ ಮಾಡಿದ್ದಾರೆ.

First published:

  • 18

    Actress Roja: ರೋಜಾ ಜೀವನದ ರೋಚಕ ಸ್ಟೋರಿ; ಡೈರೆಕ್ಟರ್ ಕೈ ಹಿಡಿಯಲು ಪಟ್ಟಪಾಡು ಅಷ್ಟಿಷ್ಟಲ್ಲ!

    ನಟಿ ರೋಜಾ ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟಿ ಸಿನಿಮಾ ಇಂಡಸ್ಟ್ರಿಯಲ್ಲಿ ಬಹುಬೇಡಿಕೆ ಇರುವಾಗಲೇ ಡೈರೆಕ್ಟರ್ ಸೆಲ್ವಮಣಿ ಪ್ರೀತಿಯ ಬಲೆಗೆ ಬಿದ್ದಿದ್ದರು.

    MORE
    GALLERIES

  • 28

    Actress Roja: ರೋಜಾ ಜೀವನದ ರೋಚಕ ಸ್ಟೋರಿ; ಡೈರೆಕ್ಟರ್ ಕೈ ಹಿಡಿಯಲು ಪಟ್ಟಪಾಡು ಅಷ್ಟಿಷ್ಟಲ್ಲ!

    ಸೆಲ್ವಮಣಿಯ ಪ್ರೀತಿಗಾಗಿ ರೋಜಾ ಏನೆಲ್ಲಾ ಮಾಡಿದ್ದಾರೆ ಗೊತ್ತಾ. ಸೆಲ್ವಮಣಿ ಕೈಹಿಡಿಯಲು ತಮಿಳು ಮಾತಾಡುವುದನ್ನು ಕಲಿತರು ಬಳಿಕ ತಮಿಳನ್ನು ಓದಲು ಸಹ ಕಲಿತಿದ್ದಾರೆ. ಕೊನೆಗೆ ತಾನು ಪ್ರೀತಿಸಿದ ಡೈರೆಕ್ಟರ್ ನನ್ನು ಮದುವೆಯಾದ್ರು.

    MORE
    GALLERIES

  • 38

    Actress Roja: ರೋಜಾ ಜೀವನದ ರೋಚಕ ಸ್ಟೋರಿ; ಡೈರೆಕ್ಟರ್ ಕೈ ಹಿಡಿಯಲು ಪಟ್ಟಪಾಡು ಅಷ್ಟಿಷ್ಟಲ್ಲ!

    ಟಾಲಿವುಡ್, ಕಾಲಿವುಡ್ನಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ ನಟಿ ರೋಜಾ, ನಿರ್ದೇಶಕ ಸೆಲ್ವಮಣಿಯನ್ನು ವಿವಾಹವಾದ್ರು. ರೋಜಾ ಸೆಲ್ವಮಣಿ ಆಗಿ ಎರಡೂ ರಾಜ್ಯಗಳ ಅಭಿಮಾನಿಗಳ ಮನಗೆದ್ದಿದ್ದರು.

    MORE
    GALLERIES

  • 48

    Actress Roja: ರೋಜಾ ಜೀವನದ ರೋಚಕ ಸ್ಟೋರಿ; ಡೈರೆಕ್ಟರ್ ಕೈ ಹಿಡಿಯಲು ಪಟ್ಟಪಾಡು ಅಷ್ಟಿಷ್ಟಲ್ಲ!

    ಸೌತ್ ಇಂಡಸ್ಟ್ರಿಯಲ್ಲಿ ಅನೇಕ ನಾಯಕಿಯರು ನಿರ್ದೇಶಕರನ್ನು ಮದುವೆಯಾದ ಉದಾಹರಣೆ ಇದೆ. ಅದರಲ್ಲಿ ಸುಹಾಸಿನಿ ಮಣಿರತ್ನಂ ಕೂಡ ಒಬ್ಬರು. ತೆಲುಗಿನಲ್ಲಿ ಕೃಷ್ಣವಂಶಿ ಮತ್ತು ರಮ್ಯಕೃಷ್ಣ ಜೋಡಿಯೂ ಇದೆ. ಇನ್ನೂ ಕೆಲವು ನಾಯಕಿಯರು ತಮ್ಮ ನೆಚ್ಚಿನ ನಿರ್ದೇಶಕರನ್ನು ಮದುವೆಯಾಗಿದ್ದಾರೆ.

    MORE
    GALLERIES

  • 58

    Actress Roja: ರೋಜಾ ಜೀವನದ ರೋಚಕ ಸ್ಟೋರಿ; ಡೈರೆಕ್ಟರ್ ಕೈ ಹಿಡಿಯಲು ಪಟ್ಟಪಾಡು ಅಷ್ಟಿಷ್ಟಲ್ಲ!

    ಇನ್ನು ರೋಜಾ ತನ್ನ ಪ್ರೀತಿಯನ್ನು ಗೆಲ್ಲಲು ಸೆಲ್ವಮಣಿ ಬಿಗ್ ಪ್ಲಾನ್ ಮಾಡಿದ್ದರಂತೆ. ಅವರ ಅನೇಕ ಸಿನಿಮಾಗಳಿಗೆ ನಟಿ ರೋಜಾ ಅವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ರೋಜಾ ಮೇಲಿನ ಪ್ರೀತಿಗೆ ಸಾಲು ಸಾಲು ಸಿನಿಮಾ ಮಾಡಿದ್ದಾರೆ. ಆದರೆ ಸೆಲ್ವಮಣಿ ತನ್ನ ಪ್ರೀತಿಯ ಬಗ್ಗೆ ರೋಜಾಗೆ ಹೇಳಿರಲಿಲ್ಲ. ಹೀಗೆ ಸೆಲ್ವಮಣಿ ನಿಜ ಜೀವನದಲ್ಲೂ ತಮ್ಮ ನಿರ್ದೇಶನದ ಪ್ರತಿಭೆ ತೋರಿಸಿದರು.

    MORE
    GALLERIES

  • 68

    Actress Roja: ರೋಜಾ ಜೀವನದ ರೋಚಕ ಸ್ಟೋರಿ; ಡೈರೆಕ್ಟರ್ ಕೈ ಹಿಡಿಯಲು ಪಟ್ಟಪಾಡು ಅಷ್ಟಿಷ್ಟಲ್ಲ!

    ಮೊದಲು ರೋಜಾ ಮನೆಯವರನ್ನು ಒಪ್ಪಿಸಲು ಸೆಲ್ವಮಣಿ ಪ್ಲಾನ್ ಮಾಡಿದ್ರು. ಮನೆಯವರು ಒಪ್ಪಿದ್ರೆ ಆಮೇಲೆ ಆಕೆ ಸುಲಭವಾಗಿ ಒಪ್ಪುತ್ತಾಳೆಂದು ಗೊತ್ತಾಯ್ತು. ರೋಜಾಗೆ ಸೆಲ್ವಮಣಿ ಪ್ರಪೋಸ್ ಮಾಡಿದ್ರು ಬಳಿಕ ರೋಜಾ ಕೂಡ ಒಪ್ಪಿಕೊಂಡಿದ್ದರು.

    MORE
    GALLERIES

  • 78

    Actress Roja: ರೋಜಾ ಜೀವನದ ರೋಚಕ ಸ್ಟೋರಿ; ಡೈರೆಕ್ಟರ್ ಕೈ ಹಿಡಿಯಲು ಪಟ್ಟಪಾಡು ಅಷ್ಟಿಷ್ಟಲ್ಲ!

    ಈ ಇಬ್ಬರೂ 10 ವರ್ಷಗಳ ನಂತರ ಪ್ರೀತಿಯ ಬಗ್ಗೆ ಮಾತಾಡಿದ್ದಾರೆ. ಇವಿವಿ ಸತ್ಯನಾರಾಯಣ ಸೀತಾರತ್ನಂ ಅವರ ಬಾಯ್ ಬಾಯ್ ಚಿತ್ರೀಕರಣದಲ್ಲಿದ್ದಾಗ, ಸೆಲ್ವಮಣಿ ತಮ್ಮ ಪ್ರೀತಿಯ ಬಗ್ಗೆ ರೋಜಾಗೆ ತಿಳಿಸಿದರು. 10 ವರ್ಷಗಳ ನಂತರ ಅಂದರೆ 1992 ಪರಿಚಯವಾದ ಜೋಡಿ 2002ರಲ್ಲಿ ವಿವಾಹವಾದರು.

    MORE
    GALLERIES

  • 88

    Actress Roja: ರೋಜಾ ಜೀವನದ ರೋಚಕ ಸ್ಟೋರಿ; ಡೈರೆಕ್ಟರ್ ಕೈ ಹಿಡಿಯಲು ಪಟ್ಟಪಾಡು ಅಷ್ಟಿಷ್ಟಲ್ಲ!

    ಇದೀಗ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸೆಲ್ವಮಣಿ ನನಗೆ ಸಿಕ್ಕಿದ್ದು ಅದೃಷ್ಟ ಎಂದು ರೋಜಾ ಹಲವು ಬಾರಿ ಹೇಳಿದ್ದಾರೆ. ಹಿರಿಯರು ಒಪ್ಪಲಿಲ್ಲ ಎಂದು ಗಲಾಟೆ ಮಾಡುವುದಕ್ಕಿಂತ ಮೊದಲು ಹಿರಿಯರಿಗೆ ಮನವರಿಕೆ ಮಾಡಿ ಆಮೇಲೆ ಪ್ರೀತಿಸಿದ ಹುಡುಗಿಗೆ ಹೇಳುವುದು ಒಳ್ಳೆಯ ಪ್ಲಾನ್ ಎಂದು ರೋಜಾ ಗಂಡನನ್ನು ಮೆಚ್ಚಿಕೊಂಡಿದ್ದಾರೆ.

    MORE
    GALLERIES