ನಂತರ ವಿವಿಧ ಸಾಂಪ್ರದಾಯಿಕ ಆಟಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪೊಲೀಸರು ಜನರ ನೆಮ್ಮದಿ ಮತ್ತು ಶಾಂತಿಗಾಗಿ ವಿಶ್ರಾಂತಿ ಇಲ್ಲದೇ ಶ್ರಮಿಸಿ ಕೆಲಸಮಾಡುತ್ತಾರೆ. ಆದರೆ ಇಂದು ಗ್ರಾಮೀಣ ವಾತಾವರಣ ನಿರ್ಮಿಸಿರುವುದರಿಂದ ಅವರ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ತಿಳುವಳಿಕೆ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತಾರೆ ಎಂದು ರೋಜಾ ಹೇಳಿದರು.