ಟಾಪ್ ಸ್ಟಾರ್ಸ್, ಸೆಲೆಬ್ರಿಟಿಗಳು ಪರಸ್ಪರ ಭೇಟಿಯಾದಾಗ ಅವರ ಫೋಟೊಗಳು ಬೇಗನೆ ವೈರಲ್ ಆಗುತ್ತವೆ. ನಟಿ ತಮನ್ನಾ ಭಾಟಿಯಾ ಜೊತೆ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಇರುವ ಫೋಟೋ ವೈರಲ್ ಆಗಿದೆ.
2/ 7
ಫೇಸ್ಬುಕ್ನಲ್ಲಿ ಈ ಫೋಟೋಗಳನ್ನು ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದ್ದು ಇದರಲ್ಲಿ ತಮನ್ನಾ ಅವರು ನಾರ್ಮಲ್ ನೈಟ್ ಡ್ರೆಸ್ನಂತಹ ಉಡುಪು ಧರಿಸಿದ್ದಾರೆ.
3/ 7
ಡಾರ್ಲಿಂಗ್ ಜೋಡಿ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರು ಬ್ಲ್ಯಾಕ್ ಡ್ರೆಸ್ ಧರಿಸಿಕೊಂಡಿದ್ದರು. ಸತ್ಯದೇವ್ ಕೂಡಾ ಫೋಟೋದಲ್ಲಿದ್ದಾರೆ.
4/ 7
ಈ ಫೋಟೋ ಈಗ ವೈರಲ್ ಆಗುತ್ತಿದೆಯಾದರೂ ಇದು 2 ವರ್ಷ ಹಿಂದಿನ ಫೋಟೋ ಆಗಿದೆ. ಕೃಷ್ಣ ಹಾಗೂ ಮಿಲನಾ ಅವರು ವಿವಾಹ ಆಹ್ವಾನ ಪತ್ರಿಕೆ ಕೊಟ್ಟ ಕ್ಷಣದಲ್ಲಿ ಕ್ಲಿಕ್ಕಿಸಲಾಗಿತ್ತು.
5/ 7
ದಂಪತಿ ಇಬ್ಬರೂ ಒಟ್ಟಿಗೇ ಹೋಗಿ ಸೌತ್ ನಟಿ ತಮನ್ನಾ ಅವರಿಗೆ ವಿವಾಹ ಆಮಂತ್ರಣ ಪತ್ರಿಕೆ ಕೊಟ್ಟುಬಂದಿದ್ದರು. ಇದನ್ನು ಡಾರ್ಲಿಂಗ್ ಕೃಷ್ಣ ಅವರೇ ಈ ಹಿಂದೆ ಹೇಳಿದ್ದರು.
6/ 7
ಇತ್ತೀಚಿನ ದಿನಗಳಲ್ಲಿ ತಮನ್ನಾ ಅವರ ಮದುವೆ ವಿಚಾರ ಆಗಾಗ ಮುನ್ನೆಲೆಗ ಬರುತ್ತಿದೆ. ಅವರ ಮದುವೆ ಬಗ್ಗೆ ಅಭಿಮಾನಿಗಳು ಅಪ್ಡೇಟ್ಗಾಗಿ ಕಾಯುತ್ತಿದ್ದಾರೆ.
7/ 7
ಆದರೆ ನಟಿ ತಮನ್ನಾ ಅವರು ತಮ್ಮ ವಿವಾಹ ನಿಗದಿಯಾಗಿಲ್ಲ. ಇದು ರೂಮರ್ಸ್ ಮಾತ್ರ ಎಂದು ಪದೇ ಪದೇ ಹೇಳುತ್ತಲೇ ಇದ್ದಾರೆ. ನಟಿ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.