ಮದುವೆ ಬಳಿಕವೂ ಮೇಘನಾ ರಾಜ್ ಸಿನಿಮಾದಲ್ಲಿ ಅಭಿನಯಿಸುವುದನ್ನು ಮುಂದುವರೆಸಿದ್ದರು. ಮೇಘನಾ ಅವರ ಅಧಿಕೃತ ಫೇಸ್ಬುಕ್ ಪುಟವು 2.5 ದಶಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ಪಡೆದಿದೆ. ಕೇರಳದ ಪ್ರತಿಷ್ಠಿತ ಕೊಚ್ಚಿ ಟೈಮ್ಸ್ 'ಅತ್ಯಂತ ಅಪೇಕ್ಷಣೀಯ ಮಹಿಳೆ 2015' ಸಮೀಕ್ಷೆಯಲ್ಲಿ ಅವರು ನಂ .19ನೇ ಸ್ಥಾನ ಪಡೆದರು. ಬೆಂಗಳೂರು ಟೈಮ್ಸ್ನ 'ಅತ್ಯಂತ ಅಪೇಕ್ಷಣೀಯ ಮಹಿಳೆ 2015'ರ ಸಮೀಕ್ಷೆಯಲ್ಲಿ ಮೇಘನಾ ರಾಜ್ 10ನೇ ಸ್ಥಾನದಲ್ಲಿದ್ದಾರೆ. (ಫೋಟೋ ಕೃಪೆ: Instagram)