Megha Shetty: ದಾವಣಿ ಚೆಲುವೆಯಾದ ನಟಿ! ರಶ್ಮಿಕಾ ಬೇಡ, ಪುಷ್ಪ ಸಿನಿಮಾಗೆ ಮೇಘ ಹೀರೋಯಿನ್ ಆಗ್ಬೇಕು ಎಂದ ಫ್ಯಾನ್ಸ್
ಸ್ಯಾಂಡಲ್ವುಡ್ ನಟಿ ಮೇಘ ಶೆಟ್ಟಿ ಲಂಗ-ದಾವಣಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿಯ ಫೋಟೋ ನೋಡಿದ ಅವರ ಫ್ಯಾನ್ಸ್ ಮಾತನಾಡಿದ್ದು ಮಾತ್ರ ಪುಷ್ಪಾ ಸಿನಿಮಾ ಬಗ್ಗೆ.
1/ 14
ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ಮೇಘ ಶೆಟ್ಟಿ ಹೊಸ ಫೋಟೊಸ್ಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
2/ 14
ಅಭಿಮಾನಿಗಳ ಜೊತೆ ಮೂರು ಸೆಟ್ ಆಫ್ ಫೋಟೋಸ್ ಹಂಚಿಕೊಂಡ ನಟಿ ಅಪ್ಪಟ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
3/ 14
ಪಕ್ಕಾ ಟ್ರೆಡೀಷನಲ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಮೇಘ ಶೆಟ್ಟಿ ಕ್ಯೂಟ್ ಸ್ಮೈಲ್ನೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
4/ 14
ನಟಿಯ ಈ ಫೋಟೋಸ್ ನೋಡಿದ ಜನ ಮಾತ್ರ ಇದ್ಯಾವ ಸೀರಿಯಲ್ ಹೇಳಿ, ಅಥವಾ ಇದ್ಯಾವ ಮೂವಿ ಹೇಳಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
5/ 14
ನೀಲಿ ಬಣ್ಣದ ಬ್ಲೌಸ್ ಹಾಗೂ ಅರಶಿನ ಬಣ್ಣದ ದಾವಣಿ ಉಟ್ಟ ನಟಿ ನೀಟಾಗಿ ತಲೆ ಬಾಚಿ ಮುಡಿ ತುಂಬ ಮಲ್ಲಿಗೆ ಮುಡಿದು ಕಾಣಿಸಿಕೊಂಡಿದ್ದು ಹೀಗೆ
6/ 14
ನಟಿಯ ಲಂಗ ದಾವಣಿ ಫೋಟೋಸ್ ನೋಡಿದ ಅಭಿಮಾನಿಗಳು ಪುಷ್ಪ ಸಿನಿಮಾವನ್ನು ನೆನಪಿಸಿಕೊಂಡು ಒಂದು ವಿಶೇಷ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
7/ 14
ಈ ಬೇಡಿಕೆ ಸ್ವಲ್ಪ ವಿಶೇಷವಾಗಿದ್ದರೂ ಮೇಘ ಶೆಟ್ಟಿ ಅವರ ಅಭಿಮಾನಿಗಳು ವಿಭಿನ್ನವಾಗಿ ಯೋಚನೆ ಮಾಡಿ ನಟಿಯ ಕುರಿತ ಕ್ರೇಜ್ ವ್ಯಕ್ತಪಡಿಸಿದ್ದಾರೆ.
8/ 14
ರಶ್ಮಿಕಾ ಅವರನ್ನು ತೆಗೆದು ಮೇಘ ಅಕ್ಕನನ್ನು ಪುಷ್ಪ ಸಿನಿಮಾಗೆ ಹೀರೋಯಿನ್ ಮಾಡಬೇಕು ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
9/ 14
ಮೇಘ ಶೆಟ್ಟಿ ಫ್ಯಾನ್ ಕ್ರೇಜ್ ಯಾವ ಮಟ್ಟಿನಲ್ಲಿ ಇದೆ ಎನ್ನುವುದಕ್ಕೆ ಅವರ ಅಭಿಮಾನಿಗಳ ಕಾಮೆಂಟ್ಗಳೇ ಸಾಕ್ಷಿ. ಅವರ ಈ ಫೋಟೋಸ್ ವೈರಲ್ ಆಗಿದೆ.
10/ 14
ನಟಿಯ ಈ ಎಲ್ಲ ಫೋಟೋಗಳು 58 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದ್ದು ನೂರಾರು ಜನರು ನಟಿಯ ಅಂದವನ್ನು ಹೊಗಳಿ ಕಾಮೆಂಟ್ ಮಾಡುತ್ತಿದ್ದಾರೆ.
11/ 14
ಮೇಘ ಶೆಟ್ಟಿ ಈಗಾಗಲೇ ಕನ್ನಡ ಸಿನಿಮಾ ತ್ರಿಬಲ್ ರೈಡಿಂಗ್ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.
12/ 14
ಅವರ ಜೊತೆ ಜೊತೆಯಲಿ ಧಾರವಾಹಿಯಂತೂ ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿಬರುತ್ತಿದೆ. ನಟಿಗೆ ಈ ಧಾರವಾಹಿ ಹೆಚ್ಚು ಖ್ಯಾತಿ ತಂದುಕೊಟ್ಟಿದೆ.
13/ 14
ಜೊತೆ ಜೊತೆಯಲಿ ಧಾರವಾಹಿಯಲ್ಲಿ ಮೇಘ ಶೆಟ್ಟಿ ಅನು ಸಿರಿಮನೆ ಪಾತ್ರದಲ್ಲಿ ಸಖತ್ತಾಗಿ ಮಿಂಚಿದ್ದಾರೆ. ನಟಿ ಸೋಷಿಯಲ್ ಮಿಡಿಯಾದಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ.
14/ 14
ಮೇಘ ಶೆಟ್ಟಿ ಸದ್ಯ ಇನ್ಸ್ಟಾಗ್ರಾಮ್ನಲ್ಲಿ 1 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದು ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
First published: