ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಎಷ್ಟು ದುಬಾರಿ ಅನ್ನೋ ವಿಷಯ ಗೊತ್ತೇ ಇದೆ. ಅದರಲ್ಲೂ ಬಡವರು ಕಾಯಿಲೆ ಬಂದು ಖಾಸಗಿ ಆಸ್ಪತ್ರೆಗಳಿಗೆ ಸೇರಿದರೆ ಮುಗಿದೇ ಹೋಯಿತು. ಇರೋ ಬರೋ ಆಸ್ತಿ ಮಾರಿ ಆಸ್ಪತ್ರೆಗಳ ಬಿಲ್ ಕಟ್ಟಬೇಕಾಗುತ್ತದೆ ಎಂದು ಸಾಕಷ್ಟು ಜನರು ಹೇಳೋದನ್ನು ಕೇಳಿದ್ದೇವೆ. ಹೀಗಿರುವಾಗ 35 ದಿನಗಳ ಕಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಟ ಸಾಯಿ ಧರಮ್ ತೇಜ ಅವರ ಬಿಗ್ ಎಷ್ಟಾಗಿರಬಹುದು ಅನ್ನೋ ಊಹೆ ಆದರೂ ನಿಮಗಿದೆಯಾ..?
ಸೆಪ್ಟೆಂಬರ್ 10ರಂದು ಹೈದರಾಬಾದಿನಲ್ಲಿ ತಮ್ಮ ದುಬಾರಿ ಬೆಲೆಯ ಬೈಕ್ನಲ್ಲಿ ಹೋಗುವಾಗ ಸಾಯಿ ಧರಮ್ ತೇಜ ಅವರು ಅಪಘಾತಕ್ಕೀಡಾಗಿದ್ದರು. ಅಪಘಾತವಾದಾಗ ಸಾಯಿ ಧರಮ್ ತೇಜ ಅವರಿಗೆ ಪ್ರಜ್ಞೆ ಇರಲಿಲ್ಲ. ಕೋಮದಲ್ಲಿದ್ದ ನಟನಿಗೆ ಕೆಲವು ದಿನಗಳ ನಂತರ ಪ್ರಜ್ಞೆ ಬಂದಿತ್ತು. ಅಪಘಾತವಾದ ನಂತರ 10 ದಿನಗಳವರೆಗೆ ನಟನಿಗೆ ಏನಾಗಿದೆ. ಅವರು ಮತ್ತೆ ಮೊದಲಿನಂತಾಗಿ ಮರಳುತ್ತಾರೋ ಅಥವಾ ಇಲ್ಲವೋ ಅನ್ನೋದು ಖಚಿತವಾಗಿರಲಿಲ್ಲ. ಯಾವಾಗ ಎಂತಹ ಸುದ್ದಿ ಆಸ್ಪತ್ರೆಯಿಂದ ಹೊರ ಬೀಳಲಿದೆ ಎಂದು ಅಭಿಮಾನಿಗಳು ಹಾಗೂ ಕುಟುಂಬದವರು ಆತಂಕದಲ್ಲಿದ್ದರು.
ಸಾಯಿ ಧರಮ್ ತೇಜ ಅವರಿಗೆ ಅಪಘಾತವಾಗಿ ಎರಡು ವಾರಗಳು ಕಳೆಯುತ್ತಿದ್ದಂತೆಯೇ ಅಂದರೆ ಸೆ. 25ಕ್ಕೆ ರಿಪಬ್ಲಿಕ್ ಸಿನಿಮಾದ ಪ್ರೀ-ರೀಲೀಸ್ ಇವೆಂಟ್ ಆಗಿತ್ತು. ಆಗಲೂ ಸಾಯಿ ಧರಮ್ ಅವರು ಕೋಮಾದಲ್ಲೇ ಇದ್ದರು. ನಂತರ ಅವರಿಗೆ ಒಂದು ಶಸ್ತ್ರ ಚಿಕಿತ್ಸೆ ಸಹ ಮಾಡಲಾಗಿತ್ತು. ಇದಾದ 2-3 ದಿನಗಳ ನಂತರ ನಟನಿಗೆ ಪ್ರಜ್ಞೆ ಬಂದಿತ್ತು. ಅಕ್ಟೋಬರ್ 15ರಂದು ಸಾಯಿ ಧರಮ್ ತೇಜ ಅವರ ಹುಟ್ಟುಹಬ್ಬವಿತ್ತು. ಆಗಲೇ ನಟನನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಯಿತು.