MeToo: ಮಂಚಕ್ಕೆ ಬರಲೊಪ್ಪದ ನನ್ನ ಸಿನಿಮಾದಿಂದ ತೆಗೆದುಹಾಕಿದ್ರು; ಗೋಲ್ಡನ್ ಸ್ಟಾರ್ ಗಣೇಶ್ ಹೀರೋಯಿನ್ ಬಿಚ್ಚಿಟ್ಟ ಅಸಲಿ ಕಥೆ!
MeToo Allegation: ಭಾರತೀಯ ಚಿತ್ರರಂಗದ ನಟಿಯರು MeToo ಆರೋಪ ಮಾಡುವ ಮೂಲಕ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯವನ್ನು ಸಮಾಜದೆದುರು ತೆರೆದಿಟ್ಟಿದ್ದರು. ಬಾಲಿವುಡ್ ನಟಿ ತನುಶ್ರೀ ದತ್ತಾ ಮೊದಲು ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಅದಾದ ನಂತರ ಟಾಲಿವುಡ್, ಬಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ನಟಿಯರು ಮೀಟೂ ಅಭಿಯಾನಕ್ಕೆ ಕೈಜೋಡಿಸಿದ್ದರು. ಕಳೆದ ವರ್ಷ ಜೋರಾಗಿದ್ದ ಮೀಟೂ ಅಭಿಯಾನ ಕ್ರಮೇಣ ತಣ್ಣಗಾಗಿತ್ತು. ನಟಿಯರಾದ ಕಂಗನಾ ರಣಾವತ್, ಅಮಲಾ ಪೌಲ್, ಸ್ಯಾಂಡಲ್ವುಡ್ ನಟಿಯರಾದ ಶ್ರುತಿ ಹರಿಹರನ್, ಸಂಗೀತಾ ಭಟ್, ಸಂಜನಾ ಗಲ್ರಾಣಿ ನಟರು, ನಿರ್ದೇಶಕರು, ನಿರ್ಮಾಪಕರ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಕೆಲ ದಿನಗಳ ಹಿಂದಷ್ಟೆ ಬಾಲಿವುಡ್ ನಟಿ ಇಷಾ ಕೊಪ್ಪೀಕರ್ ಸ್ಟಾರ್ ನಟರೊಬ್ಬರ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಇದೀಗ ಕನ್ನಡ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ತೆರೆ ಹಂಚಿಕೊಂಡಿದ್ದ ನಟಿಯೊಬ್ಬರು ತಮಗಾದ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ನಟಿಸಿದ್ದ ನಟಿಯೊಬ್ಬರು ಮೀಟೂ ಆರೋಪ ಮಾಡುವ ಮೂಲಕ ಚಿತ್ರರಂಗದ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದಾರೆ.
2/ 33
ಕೆಲವು ದಿನಗಳ ಹಿಂದಷ್ಟೆ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದ ನಟಿ ಇಷಾ ಕೊಪ್ಪೀಕರ್ ಕೂಡ ಮೀಟೂ ಆರೋಪ ಮಾಡಿದ್ದರು.
3/ 33
ಸ್ಟಾರ್ ನಟರೊಬ್ಬರು ತಮ್ಮನ್ನು ಮಂಚಕ್ಕೆ ಆಹ್ವಾನಿಸಿದ್ದರು. ಆ ಕಾರಣದಿಂದಲೇ ಆ ಸಿನಿಮಾದಿಂದ ಹೊರಬಂದಿದ್ದೆ ಎಂದು ಇಷಾ ಹೇಳಿದ್ದರು.
4/ 33
ಆದರೆ, ಆ ಹೀರೋ ಯಾರೆಂಬ ಬಗ್ಗೆ ಸುಳಿವು ಬಿಟ್ಟುಕೊಟ್ಟಿರಲಿಲ್ಲ.
5/ 33
ಇದೀಗ ಚಿತ್ರರಂಗದ ಮತ್ತೊಂದು ಮುಖವನ್ನು ಬಾಲಿವುಡ್ ನಟಿ ಮಂಜರಿ ಫಡ್ನಿಸ್ ತೆರೆದಿಟ್ಟಿದ್ದಾರೆ.
6/ 33
ಕನ್ನಡದಲ್ಲಿ 'ಮುಂಜಾನೆ' ಎಂಬ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ಗೆ ಜೋಡಿಯಾಗಿ ಮಂಜರಿ ನಟಿಸಿದ್ದರು.
7/ 33
2012ರಲ್ಲಿ ತೆರೆಕಂಡ ಈ ಸಿನಿಮಾಗೆ ಎಸ್. ನಾರಾಯಣ ಚಿತ್ರಕಥೆ ಬರೆದು, ನಿರ್ಮಿಸಿ, ನಿರ್ದೇಶಿಸಿದ್ದರು.
8/ 33
ಹಿಂದಿ, ಬೆಂಗಾಲಿ, ಕನ್ನಡ, ತೆಲುಗು, ಮರಾಠಿ ಸಿನಿಮಾಗಳಲ್ಲಿ ಮಂಜರಿ ನಟಿಸಿದ್ದಾರೆ.
9/ 33
'ಜಾನೆ ತೂ ಯಾ ಜಾನೇ ನಾ', 'ವಾರ್ನಿಂಗ್', 'ಫಾಲ್ತು', 'ಗ್ರ್ಯಾಂಡ್ ಮಸ್ತಿ' ಸೇರಿದಂತೆ ಅನೇಕ ಬಾಲಿವುಡ್ ಸಿನಿಮಾಗಳಲ್ಲಿ ಮಂಜರಿ ನಾಯಕಿಯಾಗಿ ಅಭಿನಯಿಸಿದ್ದಾರೆ.
10/ 33
ಮಧ್ಯಪ್ರದೇಶದಲ್ಲಿ ಹುಟ್ಟಿದ ಮಂಜರಿಯ ತಂದೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ವರ್ಗಾವಣೆ ಆಗುತ್ತಿತ್ತು. ಹೀಗಾಗಿ, ಶಿಮ್ಲಾ, ಜಮ್ಮು, ದೆಹಲಿ, ಮುಂಬೈ, ಪುಣೆ ಮುಂತಾದ ಕಡೆ ಮಂಜರಿ ವಿದ್ಯಾಭ್ಯಾಸ ಮುಗಿಸಿದರು.
11/ 33
ಮಂಜರಿ ಅವರಿಗೂ ಲೈಂಗಿಕ ಕಿರುಕುಳದ ಅನುಭವವಾಗಿತ್ತು ಎಂದು ಅವರೇ ಹೇಳಿದ್ದಾರೆ.
12/ 33
ಈ ಬಗ್ಗೆ ನವಭಾರತ್ ಟೈಮ್ಸ್ ವರದಿ ಮಾಡಿದೆ. ಇತ್ತೀಚೆಗೆ ಗೋವಾದಲ್ಲಿ ನಡೆದ 50ನೇ ಭಾರತೀಯ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪಾಲ್ಗೊಂಡಿದ್ದ ಮಂಜರಿ ತಮ್ಮ ಹಳೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ.
13/ 33
ನಾನು 15 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ನಾನು ಅನೇಕ ಪ್ರಸಿದ್ಧ ನಿರ್ಮಾಪಕರ ಜೊತೆ ಕೆಲಸ ಮಾಡಿದ್ದೇನೆ.
14/ 33
'ಕಾಂಪ್ರಮೈಸ್' ಆಗಬೇಕೆಂದು ಹೇಳಿದ್ದರಿಂದ ಕೆಲವು ಒಳ್ಳೆಯ ಕತೆ ಮತ್ತು ಪ್ರೊಡಕ್ಷನ್ ಸಂಸ್ಥೆಯ ಸಿನಿಮಾಗಳಿಂದ ನಾನೇ ಆಚೆ ಬಂದಿದ್ದೇನೆ.
15/ 33
ತಮ್ಮ ಜೊತೆ ಎಲ್ಲ ರೀತಿಯಲ್ಲೂ ಸಹಕರಿಸಬೇಕು ಎಂದು ಹೇಳಿದರೆಂಬ ಕಾರಣಕ್ಕೆ ಹಲವು ದೊಡ್ಡ ಬಜೆಟ್ನ ಜಾಹೀರಾತು, ಸಿನಿಮಾಗಳನ್ನು ತಿರಸ್ಕರಿಸಿದ್ದೇನೆ.
16/ 33
ನಾನು ಅವರೊಂದಿಗೆ ಸಹಕರಿಸುವುದಿಲ್ಲ ಎಂಬ ಕಾರಣಕ್ಕೇ ಹಲವು ನಿರ್ದೇಶಕರು, ನಟರು ನನ್ನನ್ನು ಹೀರೋಯಿನ್ ಆಗಿ ಆಯ್ಕೆ ಮಾಡಿಕೊಳ್ಳಲಿಲ್ಲ.
17/ 33
ಕೊನೆಗೆ ನಾನು ಕಡಿಮೆ ಬಜೆಟ್ನ ಸಿನಿಮಾಗಳನ್ನು ಒಪ್ಪಿಕೊಳ್ಳತೊಡಗಿದೆ.
18/ 33
ನಾನು ಅನಿವಾರ್ಯವಾಗಿ ಒಪ್ಪಿಕೊಂಡ ಕಡಿಮೆ ಬಜೆಟ್ನ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಹೆಚ್ಚಿನ ಸದ್ದು ಮಾಡಲಿಲ್ಲ.
19/ 33
ಇದೇ ಕಾರಣಕ್ಕೆ ನಾನು ಈ ಹಿಂದೆ ಅನೇಕ ಬಾರಿ ಖಿನ್ನತೆಗೂ ಒಳಗಾಗಿದ್ದೆ ಎಂದು ಮಂಜರಿ ಹೇಳಿಕೊಂಡಿದ್ದಾರೆ.
20/ 33
ಪ್ರತಿಯೊಬ್ಬರೂ ತಮ್ಮ ವೃತ್ತಿ ಜೀವನದ ಒಂದಲ್ಲ ಒಂದು ಹಂತದಲ್ಲಿ ಸೋಲನ್ನು ಅನುಭವಿಸಿಯೇ ಇರುತ್ತಾರೆ.
21/ 33
ಅದು ಶಾರುಖ್ ಖಾನ್ ಆಗಿರಲಿ, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್ನೇ ಆಗಿರಲಿ. ಅದೇ ಕಾರಣಕ್ಕೆ ನಾನು ಸಮಾಧಾನ ಮಾಡಿಕೊಂಡೆ ಎಂದು ಮಂಜರಿ ಹೇಳಿದ್ದಾರೆ.
22/ 33
ಸಿನಿಮಾ ರಂಗದಲ್ಲಿ ಕಾಂಪ್ರಮೈಸ್ ಮಾಡಿಕೊಂಡರೆ ಮಾತ್ರ ನಟಿಯರಿಗೆ ಉತ್ತಮ ಅವಕಾಶಗಳು ಸಿಗುತ್ತವೆ.
23/ 33
ಆದರೆ, ಯಾರೂ ನಮ್ಮನ್ನು ಒತ್ತಾಯ ಮಾಡುವುದಿಲ್ಲ.
24/ 33
ನಾವು ಕಾಂಪ್ರಮೈಸ್ ಆಗಲು ಒಪ್ಪದಿದ್ದರೆ ಅವರು ಸುಮ್ಮನಾಗುತ್ತಾರೆ. ಆದರೆ, ಹಾಗೆ ಮಾಡಿದರೆ ನಮಗೆ ಅವಕಾಶಗಳು ಕಡಿಮೆಯಾಗುತ್ತವೆ ಎಂದು ಮಂಜರಿ ಹೇಳಿದ್ದಾರೆ.
25/ 33
ಯಾವ ಸಿನಿಮಾಗಳ ನಟರು, ನಿರ್ದೇಶಕರು ಕಾಂಪ್ರಮೈಸ್ ಆಗಬೇಕೆಂದು ಕೇಳಿದ್ದರು ಎಂಬ ಪ್ರಶ್ನೆಗೆ ಉತ್ತರಿಸಲು ಮಂಜರಿ ನಿರಾಕರಿಸಿದ್ದಾರೆ.
26/ 33
ಅದೆಲ್ಲ ಮುಗಿದು ಹೋದ ಕತೆ. ಈಗ ಆ ಬಗ್ಗೆ ಮಾತನಾಡಿ ಉಪಯೋಗವಿಲ್ಲ. ಸುಮ್ಮನೆ ನನ್ನಿಂದ ವಿವಾದ ಸೃಷ್ಟಿಯಾಗುತ್ತದೆ ಎಂದಿದ್ದಾರೆ.
27/ 33
ನಾನು ಕಾಂಪ್ರಮೈಸ್ ಆಗುವುದಿಲ್ಲ ಎಂಬ ಕಾರಣಕ್ಕೆ ಕೆಲವು ಸಿನಿಮಾಗಳಿಗೆ ಸಹಿ ಹಾಕಿ ಶೂಟಿಂಗ್ ಆರಂಭಿಸಿದ ಮೇಲೂ ನನ್ನನ್ನು ತೆಗೆದುಹಾಕಿದ್ದರು.
28/ 33
ಈಗ ನಿರ್ದೇಶಕರು, ನಿರ್ಮಾಪಕರ ಜೊತೆ ಅವರಿಗೆ ಬೇಕಾದಂತೆಲ್ಲ ನಾನು ಕಾಂಪ್ರಮೈಸ್ ಆಗುವುದಿಲ್ಲ ಎಂಬುದು ಅವರಿಗೂ ಗೊತ್ತಾಗಿದೆ.
29/ 33
ಹಾಗಾಗಿ, ಆ ರೀತಿಯ ಉದ್ದೇಶವಿಟ್ಟುಕೊಂಡವರು ನನಗೆ ನಟಿಸಲು ಆಫರ್ ಕೊಡಲು ಬರುವುದಿಲ್ಲ ಎಂದು ಮಂಜರಿ ಹೇಳಿದ್ದಾರೆ.
30/ 33
ಕೇವಲ ಬಾಲಿವುಡ್ನಲ್ಲಿ ಮಾತ್ರವಲ್ಲ, ದಕ್ಷಿಣ ಭಾರತದ ಚಿತ್ರರಂಗದಲ್ಲೂ ನಿರ್ಮಾಪಕರೊಬ್ಬರು ನನ್ನನ್ನು ಮಂಚಕ್ಕೆ ಆಹ್ವಾನಿಸಿದ್ದರು.
31/ 33
ನಾನು ನಿನ್ನನ್ನು ನಮ್ಮ ಸಿನಿಮಾಗೆ ಆಯ್ಕೆ ಮಾಡಿದರೆ ನನಗೇನು ಸಿಗುತ್ತದೆ? ಎಂದು ದಕ್ಷಿಣ ಭಾರತದ ಬಿಗ್ ಬಜೆಟ್ ಸಿನಿಮಾದ ನಿರ್ಮಾಪಕರು ನನ್ನ ಬಳಿ ಕೇಳಿದ್ದರು.
32/ 33
ಅದಕ್ಕೆ ಅಷ್ಟೇ ನಿರ್ಲಿಪ್ತವಾಗಿ ಉತ್ತರಿಸಿದ್ದ ನಾನು 'ನೀವು ನನ್ನನ್ನು ನಿಮ್ಮ ಸಿನಿಮಾಗೆ ಆಯ್ಕೆ ಮಾಡಿಕೊಂಡರೆ ನೀವು ನಿರೀಕ್ಷಿಸಿದ್ದಕ್ಕಿಂತಲೂ ಚೆನ್ನಾಗಿ ನನ್ನ ಪಾತ್ರವನ್ನು ನಿಭಾಯಿಸುತ್ತೇನೆ. ಆ ಪಾತ್ರಕ್ಕೆ ಬೇಕಾದ ನಟನೆಯನ್ನು ಕೊಡುತ್ತೇನೆ' ಎಂದಿದ್ದೆ.
33/ 33
ಹಳೆಯ ದಿನಗಳನ್ನು ನೆನಪಿಸಿಕೊಂಡರೆ ನನಗೀಗ ನಗು ಬರುತ್ತದೆ. ಕೇವಲ ನನ್ನ ದೇಹವನ್ನು ಇಷ್ಟಪಟ್ಟು ಸಿನಿಮಾದ ಆಫರ್ ನೀಡಲು ಬಂದವರನ್ನು ನೆನಪಿಸಿಕೊಂಡರೆ ನಗು ಬರುತ್ತದೆ. ಅವರು ಈಗಲೂ ನನ್ನ ಕಣ್ಣ ಮುಂದೆ ಆಗಾಗ ಕಾಣಿಸುತ್ತಾರೆ. ಆಗೆಲ್ಲ ನಿರ್ಲಕ್ಷ್ಯದ ನಗು ಬೀರಿ ಸುಮ್ಮನಾಗುತ್ತೇನೆ ಎಂದು ಮಂಜರಿ ಹೇಳಿದ್ದಾರೆ.