MeToo: ವಿಷ್ಣುವರ್ಧನ್, ರವಿಚಂದ್ರನ್ ನಾಯಕಿಯನ್ನು ಮಂಚಕ್ಕೆ ಕರೆದಿದ್ದ ಸ್ಟಾರ್ ನಟ!
ಭಾರತೀಯ ಚಿತ್ರರಂಗದ ನಟಿಯರು MeToo ಆರೋಪ ಮಾಡುವ ಮೂಲಕ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯವನ್ನು ಸಮಾಜದೆದುರು ತೆರೆದಿಟ್ಟಿದ್ದರು. ಬಾಲಿವುಡ್ ನಟಿ ತನುಶ್ರೀ ದತ್ತಾ ಮೊದಲು ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಅದಾದ ನಂತರ ಟಾಲಿವುಡ್, ಬಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ನಟಿಯರು ಮೀಟೂ ಅಭಿಯಾನಕ್ಕೆ ಕೈಜೋಡಿಸಿದ್ದರು. ಕಳೆದ ವರ್ಷ ಜೋರಾಗಿದ್ದ ಮೀಟೂ ಅಭಿಯಾನ ಕ್ರಮೇಣ ತಣ್ಣಗಾಗಿತ್ತು. ನಟಿಯರಾದ ಕಂಗನಾ ರಣಾವತ್, ಅಮಲಾ ಪೌಲ್, ಸ್ಯಾಂಡಲ್ವುಡ್ ನಟಿಯರಾದ ಶ್ರುತಿ ಹರಿಹರನ್, ಸಂಗೀತಾ ಭಟ್, ಸಂಜನಾ ಗಲ್ರಾಣಿ, ಶ್ವೇತಾ ಪಂಡಿತ್ ನಟರು, ನಿರ್ದೇಶಕರು, ನಿರ್ಮಾಪಕರ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಈಗ ಬಾಲಿವುಡ್ ನಟಿ ಇಷಾ ಕೊಪ್ಪೀಕರ್ ಸ್ಟಾರ್ ನಟರೊಬ್ಬರ ವಿರುದ್ಧ ಮೀಟೂ ಆರೋಪ ಮಾಡಿದ್ದಾರೆ.
ಬಾಲಿವುಡ್ನಲ್ಲಿ ಮತ್ತೊಮ್ಮೆ ಮೀಟೂ ಆರೋಪ ಕೇಳಿಬಂದಿದೆ. ನಟಿ ಇಷಾ ಕೊಪ್ಪೀಕರ್ ತಮಗಾದ ಕೆಟ್ಟ ಅನುಭವವನ್ನು ತೆರೆದಿಟ್ಟಿದ್ದಾರೆ
2/ 20
ಬಾಲಿವುಡ್ ನಟಿ ಇಷಾ ಕೊಪ್ಪೀಕರ್ ಹಿಂದಿ, ತಮಿಳು, ತೆಲುಗು, ಕನ್ನಡ, ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದ ನಟಿ.
3/ 20
ಮುಂಬೈನ ಕೊಂಕಣಿ ಕುಟುಂಬದಲ್ಲಿ ಜನಿಸಿದ ಇಷಾ ಕೊಪ್ಪೀಕರ್ 2000- 2010ರ ಅವಧಿಯಲ್ಲಿ ಚಿತ್ರರಂಗವನ್ನು ಆಳಿದ ಚೆಲುವೆ.
4/ 20
ಕನ್ನಡದಲ್ಲಿ ವಿಷ್ಣುವರ್ಧನ್ ಜೊತೆಗೆ 'ಸೂರ್ಯವಂಶ', ರವಿಚಂದ್ರನ್ ಜೊತೆಗೆ 'ಓ ನನ್ನ ನಲ್ಲೆ', ಶಿವರಾಜ್ಕುಮಾರ್ ಜೊತೆಗೆ 'ಕವಚ' ಸಿನಿಮಾದಲ್ಲೂ ನಟಿಸಿದ್ದಾರೆ.
5/ 20
ಸೂರ್ಯವಂಶದಲ್ಲಿ ವಿಷ್ಣುವರ್ಧನ್ಗೆ ನಾಯಕಿಯಾಗಿ ಜಿಲ್ಲಾಧಿಕಾರಿ ಪಾತ್ರದಲ್ಲಿ ನಟಿಸಿದ್ದ ಇಷಾ ಕೊಪ್ಪೀಕರ್ ಓ ನನ್ನ ನಲ್ಲೆ ಸಿನಿಮಾದಲ್ಲೂ ಜಿಲ್ಲಾಧಿಕಾರಿ ಪಾತ್ರವನ್ನು ನಿರ್ವಹಿಸಿದ್ದರು.
6/ 20
ಇತ್ತೀಚೆಗೆ ತೆರೆಕಂಡ ಶಿವರಾಜ್ಕುಮಾರ್ ಅಭಿನಯದ 'ಕವಚ' ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಇಷಾ ಕಾಣಿಸಿಕೊಂಡಿದ್ದರು.
7/ 20
ಬಾಲಿವುಡ್ನ ಕೃಷ್ಣ ಕಾಟೇಜ್, ಎಲ್ಓಸಿ ಕಾರ್ಗಿಲ್. ಹಮ್ ತುಮ್, ಡಾನ್, ಸಲಾಂ ಎ ಇಷ್ಕ್ ಮುಂತಾದ ಹಿಟ್ ಸಿನಿಮಾಗಳಲ್ಲಿ ಸ್ಟಾರ್ ನಟರೊಂದಿಗೆ ಇಷಾ ನಟಿಸಿದ್ದಾರೆ.
8/ 20
ರಾಜಕೀಯದಲ್ಲೂ ಆಸಕ್ತಿ ಹೊಂದಿರುವ ಇಷಾ ಕೊಪ್ಪೀಕರ್ ಇತ್ತೀಚೆಗಷ್ಟೆ ಬಿಜೆಪಿ ಸೇರಿದ್ದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ಇಷಾ ಬಿಜೆಪಿ ಸೇರಿದ್ದರು.
9/ 20
2009ರಲ್ಲಿ ಹೋಟೆಲ್ ಉದ್ಯಮಿ ಟಿಮ್ಮಿ ನಾರಂಗ್ ಅವರೊಂದಿಗೆ ಇಷಾ ಕೊಪ್ಪೀಕರ್ ವಿವಾಹವಾದರು. ಅದಾದ ನಂತರ ಅವರು ಹೆಚ್ಚಾಗಿ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿಲ್ಲ. ಅವರಿಗೆ 5 ವರ್ಷದ ರಿಯಾನಾ ಎಂಬ ಮಗಳಿದ್ದಾಳೆ.
10/ 20
ಡಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ಅತ್ಯದ್ಭುತ ಅಭಿನಯ ನೀಡಿದ್ದ ಇಷಾ ಕೊಪ್ಪೀಕರ್ ಈಗ ಮೀಟೂ ಆರೋಪ ಮಾಡಿದ್ದಾರೆ.
11/ 20
ಪಿಂಕ್ವಿಲ್ಲಾಗೆ ನೀಡಿರುವ ಸಂದರ್ಶನದಲ್ಲಿ ತನ್ನ ಮೇಲಾದ ಲೈಂಗಿಕ ದೌರ್ಜನ್ಯವನ್ನು ಇಷಾ ಬಿಚ್ಚಿಟ್ಟಿದ್ದಾರೆ.
12/ 20
ಸಿನಿಮಾದ ನಿರ್ಮಾಪಕರೊಬ್ಬರು ನನಗೆ ಕರೆಮಾಡಿ ಆ ಸಿನಿಮಾದ ನಾಯಕರಿಗೆ ಓದಲು ಅತ್ಯುತ್ತಮವಾದ ಪುಸ್ತಕವೊಂದನ್ನು ನೀಡುವಂತೆ ಹೇಳಿದರು. ಆಗ ನಾನು ಆ ನಾಯಕರಿಗೆ ಫೋನ್ ಮಾಡಿ ಪುಸ್ತಕ ನೀಡುವ ಬಗ್ಗೆ ಹೇಳಿದಾಗ ಅವರು ನನ್ನನ್ನು ಏಕಾಂತವಾಗಿ ಬಂದು ಭೇಟಿಯಾಗಲು ಹೇಳಿದರು.
13/ 20
ನಾನು ನಮ್ಮ ಡ್ರೈವರ್ ಜೊತೆ ಬಂದು ಭೇಟಿಯಾಗುವುದಾಗಿ ಹೇಳಿದಾಗ ಯಾರ ಜೊತೆಯೂ ಬಾರದೆ ಒಬ್ಬಳೇ ಹೋಟೆಲ್ಗೆ ಬರುವಂತೆ ಕೇಳಿದ್ದರು.
14/ 20
ಈ ಬಗ್ಗೆ ನಾನು ನಮ್ಮ ನಿರ್ಮಾಪಕರಿಗೆ ಹೇಳಿದಾಗ ಅವರು 'ನಿನ್ನ ಪ್ರತಿಭೆ ನೋಡಿ ನಿನ್ನನ್ನು ನಮ್ಮ ಸಿನಿಮಾಗೆ ಆಯ್ಕೆ ಮಾಡಿಕೊಳ್ಳಬೇಕಾ? ಇದಕ್ಕೆಲ್ಲ ಅಡ್ಜಸ್ಟ್ ಆಗಬೇಕು' ಎಂದು ಹೇಳಿದ್ದರು ಎಂದು ಇಷಾ ಆರೋಪಿಸಿದ್ದಾರೆ.
15/ 20
ಆ ನಟನ ಜೊತೆ ಮಂಚವೇರಲು ಒಪ್ಪದ ಕಾರಣಕ್ಕೆ ನಾನು ಆ ಸಿನಿಮಾದ ನಾಯಕಿ ಸ್ಥಾನದಿಂದ ಹೊರಬರಬೇಕಾಯಿತು. ಈ ರೀತಿ ಇನ್ನೂ ಕೆಲವು ಸಿನಿಮಾಗಳ ಅವಕಾಶವನ್ನು ಕಳೆದುಕೊಂಡಿದ್ದೇನೆ ಎಂದು ಇಷಾ ಹೇಳಿದ್ದಾರೆ.
16/ 20
ತಮಗೆ ಯಾವ ನಟನಿಂದ ಮಂಚವೇರಲು ಆಫರ್ ಬಂದಿತ್ತು ಎಂಬ ಬಗ್ಗೆ ಇಷಾ ಕೊಪ್ಪೀಕರ್ ಬಾಯಿ ಬಿಟ್ಟಿಲ್ಲ.
17/ 20
ಕೇವಲ ನಟರು ಮಾತ್ರವಲ್ಲದೆ ಕೆಲವು ಉನ್ನತ ಅಧಿಕಾರಿಗಳು ಕೂಡ ನನ್ನನ್ನು ಅನುಚಿತವಾಗಿ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು ಎಂದು ಕೂಡ ಇಷಾ ಕೊಪ್ಪೀಕರ್ ಹೇಳಿದ್ದಾರೆ.