Ganesh Chaturthi ವಿಶೇಷ ಫೋಟೋಶೂಟ್ನಲ್ಲಿ ಸ್ಟಾರ್ ಅಮ್ಮ-ಮಗ
ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ನಂತರ ಬೆಳ್ಳಿತೆರೆಯಲ್ಲಿ ನಾಯಕಿಯಾಗಿ ಮಿಂಚಿದ ಮಯೂರಿ (Actress Mayuri) ಅವರು ತಮ್ಮ ಮಗನ ಜೊತೆ ಈ ಸಲ ಗಣೇಶ ಹಬ್ಬ (Ganesh Chaturthi) ಆಚರಿಸುತ್ತಿದ್ದಾರೆ. ಮಗ ಹುಟ್ಟಿದ ನಂತರದ ಮೊದಲ ಗಣಪತಿ ಹಬ್ಬ ಇದಾಗಿದೆ. ಈ ಸಲ ಹಬ್ಬಕ್ಕೆಂದು ವಿಶೇಷವಾಗಿ ಮಾಡಿರುವ ಫೋಟೋಶೂಟ್ನಲ್ಲಿ ಮಯೂರಿ ಹಾಗೂ ಮಗ ಆರವ್ ಪೋಸ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಮಯೂರಿ ಇನ್ಸ್ಟಾಗ್ರಾಂ ಖಾತೆ)
ಮದುವೆಯಾಗಿ ಮಗುವಾದ ನಂತರ ನಟಿ ಮಯೂರಿ ಸಿನಿಮಾಗಳಿಂದ ಕೊಂಚ ದೂರ ಕಾಯ್ದುಕೊಂಡಿದ್ದಾರೆ. ಮಗನ ಲಾಲನೆ ಪಾಲನೆ ಮಾಡುತ್ತಾ ಕಾಲ ಕಳೆಯುತ್ತಿರುವ ಮಯೂರಿ ಮನಗ ಜೊತೆ ಸಾಕಷ್ಟು ಫೋಟೋಶೂಟ್ಗಳಿಗೆ ಪೋಸ್ ಕೊಡುತ್ತಿದ್ದಾರೆ.
2/ 7
ಗಣೇಶ ಹಬ್ಬಕ್ಕೆಂದು ಮಗ ಆರವ್ ಜೊತೆ ನಟಿ ಮಯೂರಿ ಈ ವಿಶೇಷ ಫೋಟೋಶೂಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟಾರ್-ಅಮ್ಮ ಮಗನ ಲೆಟೆಸ್ಟ್ ಫೋಟೋಗಳು ಇಲ್ಲಿವೆ. ಮಯೂರಿ ಅವರ ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
3/ 7
ಸಖತ್ ಕ್ಲಾಸಿ ಲುಕ್ನಲ್ಲಿ ಮಯೂರಿ ರೆಡಯಾಗಿದ್ದು, ಮಗನಿಗೆ ಬಿಳಿ ಪಂಚೆ ಹಾಗೂ ಹಸಿರು ಅಂಗಿ ತೊಡಿಸಿ ಮುದ್ದಾಗಿ ಫೋಟೋಶೂಟ್ಗೆ ಪೋಸ್ ಕೊಟ್ಟಿದ್ದಾರೆ.
4/ 7
ಅವಕಾಶ ಸಿಕ್ಕಾಗಲೆಲ್ಲ ಮಯೂರಿ ಮಗನಿಗೆ ಇಷ್ಟ ವೇಷ ಹಾಕಿ ಫೋಟೋಶೂಟ್ ಮಾಡಿಸುತ್ತಾರೆ. ಮಗ ಬಾಲ್ಯದ ಸುಂದರ ನೆನೆಪುಗಳನ್ನು ಫೋಟೋಗಳಲ್ಲಿ ಸೆರೆ ಹಿಡಿದಿಟ್ಟುಕೊಳ್ಳುತ್ತಿದ್ದಾರೆ.
5/ 7
ಮಗನಿಗೆ ಒಮ್ಮೆ ಕ್ಯೂಟ್ ರೌಡಿ ವೇಷ ಹಾಕಿದರೆ, ಮತ್ತೆ ಮುದ್ದು ಕೃಷ್ಣ ಹೀಗೆ ನಾನಾ ರೀತಿ ಸಿಂಘರಿ ಖುಷಿ ಪಡುತ್ತಿದ್ದಾರೆ ಮಯೂರಿ. ಒಟ್ಟಾರೆ ತಾಯ್ತನವನ್ನು ಹೇಗೆಲ್ಲ ಅನುಭವಿಸಬಹುದು ಎಂದು ತೋರಿಸಿಕೊಡುತ್ತಿದ್ದಾರೆ.
6/ 7
ಮಗ ಆರವ್ ಲಾಲನೆ ಪಾಲನೆ ಮಾಡುತ್ತಿರುವ ಮಯೂರಿ ಕಿರುತೆರೆಯಲ್ಲಿ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ.
7/ 7
ನಟಿ ಮಯೂರಿ ಅವರ ಮಗ ಆರವ್ ತುಂಟು ಕೃಷ್ಣನ ಅವತಾರದಲ್ಲಿ. ಕಳೆದ ಕೃಷ್ಣಾಷ್ಟಮಿಯಂದು ತೆಗೆದ ಚಿತ್ರ ಇದಾಗಿದೆ.