ತಮಿಳು ನಟಿ ಓವಿಯಾ ಕಿರಾತಕ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟರು. ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು.
2/ 18
ಓವಿಯಾ ಕೂಡ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದರು. ಈ ಸಿನಿಮಾ ಬಳಿಕ ಮಿಸ್ಟರ್ ಮೊಮ್ಮಗ ಅಂತ ಇನ್ನೊಂದು ಕನ್ನಡ ಚಿತ್ರ ಮಾಡಿದರು. ಅದು ನಿರೀಕ್ಷೆಯ ಯಶಸ್ಸು ಕೊಟ್ಟಿಲ್ಲ. ಆ ಬಳಿಕ ಓವಿಯಾ ಕನ್ನಡ ಚಿತ್ರರಂಗದಿಂದ ದೂರ ಸರಿದರು.
3/ 18
'ಬಿಗ್ ಬಾಸ್ ತಮಿಳು' ಸೀಸನ್ 1ರಲ್ಲಿ ಭಾಗವಹಿಸಿ ಓವಿಯಾ ಅಲ್ಲೂ ಸಾಕಷ್ಟು ಮಂದಿ ಅಭಿಮಾನಿಗಳನ್ನು ಸಂಪಾದನೆ ಮಾಡಿದರು.
4/ 18
ಸದ್ಯ ತಮಿಳಿನಲ್ಲಿ ಹೆಚ್ಚು ಹೆಚ್ಚು ಸಿನಿಮಾ ಮಾಡುತ್ತಿರುವ ಓವಿಯಾ ಟ್ವಿಟರ್ನಲ್ಲಿ ಇತ್ತೀಚೆಗಷ್ಟೇ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ.
5/ 18
ಶಾಲೆ, ಮದುವೆ ಬಗ್ಗೆ ಓವಿಯಾ ಮಾತನಾಡಿದ್ದಾರೆ. ಅಭಿಮಾನಿಗಳು ತುಂಬ ಆಸಕ್ತಿಕರವಾದ ಪ್ರಶ್ನೆಗಳನ್ನು ಓವಿಯಾಗೆ ಕೇಳಿದ್ದರು.
6/ 18
ಅದರಲ್ಲಿ ಪ್ರಮುಖವಾಗಿ ಅಭಿಮಾನಿಯೊಬ್ಬರು, ಒಂದು ಮಹಿಳೆಯ ಜೀವನ ಹಾಳು ಮಾಡುವುದಕ್ಕಿಂತ ಹಸ್ತಮೈಥುನ ಉತ್ತಮ ಅಲ್ಲವೇ ಎಂದು ಕೇಳಿದ್ದಕ್ಕೆ ಅಷ್ಟೆ ಸಾವಧಾನವಾಗಿ ಹೌದು ಎಂದು ಉತ್ತರಿಸಿದ್ದಾರೆ.
7/ 18
ಅಲ್ಲದೆ ನಿಮ್ಮ ಗಂಡನ ಬಗ್ಗೆ ನಿಮಗೆ ಕಲ್ಪನೆ ಏನು ಎಂದು ಒಬ್ಬರು ಕೇಳಿದ್ದಕ್ಕೆ, ನನಗೆ ಗಂಡ ಬೇಕಿಲ್ಲ ಎಂದು ಥಟ್ಟನೆ ಉತ್ತರ ನೀಡಿದ್ದಾರೆ.
8/ 18
ಇನ್ನೂ ಬಿಗ್ ಬಾಸ್ನಲ್ಲಿ ನಿಮ್ಮ ಫೇವರಿಟ್ ಸ್ಪರ್ಧಿ ಯಾರಾಗಿದ್ದರು? ಪ್ರಶ್ನೆಗೆ ನನಗೆ ನಾನೇ ಫೇವರಿಟ್ ಎಂದು ಹೇಳಿದ್ದಾರೆ. ನೆಪೋಟಿಸಂ ಬಗ್ಗೆಯೂ ಮಾತನಾಡಿರುವ ಇವರು ರಾಜಕೀಯ ಎಲ್ಲ ಕಡೆಗಿದೆ ಎಂದಿದ್ದಾರೆ.
9/ 18
ಶಾಲೆಯಲ್ಲಿ ಕಲಿತಿರುವ ವಿಷಯವನ್ನು ನೀವು ನಿಮ್ಮ ಜೀವನದಲ್ಲಿ ಸದಾ ಬಳಕೆ ಮಾಡುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಓವಿಯಾ, ಶಾಲೆಗೆ ಹೋಗಿ ನನ್ನ ಸಮಯ ಹಾಗೂ ಹಣ ಹಾಳು ಮಾಡಿಕೊಂಡೆ ಎಂದೆನಿಸುತ್ತದೆ ಎಂದು ರಿಪ್ಲೇ ಕೊಟ್ಟಿದ್ದಾರೆ.
10/ 18
ನಟಿ ಓವಿಯಾ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಭಾಷೆಯಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತ ಓವಿಯಾ ಇಂದು ಹೀರೋಯಿನ್ ಆಗಿ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.