Bigg Boss Kannada Season 8: ದಿವ್ಯಾ ಸುರೇಶ್ ಮನೆಯಲ್ಲಿ ವಿಶೇಷ ಭೋಜನ ಸವಿದ ಮಂಜು ಪಾವಗಡ
ಬಿಗ್ ಬಾಸ್ ಕನ್ನಡ ಸೀಸನ್ 8ರ (Bigg Boss Kannada Season 8) ಖ್ಯಾತಿಯ ಜನಪ್ರಿಯ ಜೋಡಿ ದಿವ್ಯಾ ಸುರೇಶ್(Divya Suresh) ಹಾಗೂ ಮಂಜು ಪಾವಗಡ (Manju Pavagada) ಅವರು ಒಟ್ಟಿಗೆ ಗಣೇಶ ಹಬ್ಬ (Ganesh Chaturthi) ಆಚರಿಸಿದ್ದಾರೆ. ದಿವ್ಯಾ ಸುರೇಶ್ ಮನೆಯಲ್ಲೇ ಗಣೇಶನ ಪೂಜೆ ಮಾಡಿ ವಿಶೇಷ ಭೋಜನ ಸವಿದಿದ್ದಾರೆ. (ಚಿತ್ರಗಳು ಕೃಪೆ: ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಇನ್ಸ್ಟಾಗ್ರಾಂ ಖಾತೆ)
ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಬಿಗ್ ಬಾಸ್ ಕನ್ನಡ ಸೀಸನ್ನ ಜನಪ್ರಿಯ ಜೋಡಿಗಳಲ್ಲಿ ಒಂದು. ಇತ್ತೀಚೆಗಷ್ಟೆ ಮಂಜು ಪಾವಗಡ ಅವರು ದಿವ್ಯಾ ಅವರ ಕುಟುಂಬದವರನ್ನು ಭೇಟಿಯಾಗಿ ಸುದ್ದಿಯಾಗಿದ್ದರು. ಈಗ ದಿವ್ಯಾ ಅವರ ಮನೆಯಲ್ಲೇ ಗಣೇಶ ಹಬ್ಬ ಆಚರಿಸಿದ್ದಾರೆ ಮಂಜು.
2/ 7
ಹೌದು, ಮಂಜು ಪಾವಗಡ ಅವರು ದಿವ್ಯಾ ಸುರೇಶ್ ಅವರ ಆತ್ಮೀಯ ಸ್ನೇಹಿತ. ಹೀಗಾಗಿಯೇ ಗಣೇಶನ ಹಬ್ಬದಂದು ಸ್ನೇಹಿತೆಯ ಮನೆಗೆ ಭೇಟಿ ಕೊಟ್ಟಿದ್ದಾರೆ.
3/ 7
ದಿವ್ಯಾ ಸುರೇಶ್ ಅವರ ಮನೆಗೆ ಮಂಜು ಪಾವಗಡ ಮಾತ್ರ ಭೇಟಿ ಕೊಟ್ಟಿಲ್ಲ. ಜೊತೆಗೆ ಮಂಜು ಅವರ ಪ್ರೀತಿಯ ಗುಂಡಮ್ಮ ಶುಭಾ ಪೂಂಜಾ ಹಾಗೂ ಅವರನ್ನು ಮದುವೆಯಾಗಲಿರುವ ಹುಡುಗ ಸಹ ಹೋಗಿದ್ದರು.
4/ 7
ದಿವ್ಯಾ ಅವರ ಮನೆಯಲ್ಲಿ ವಿಶೇಷ ಭೋಜನ ಸವಿದ ನಂತರ ಶುಭಾ ಪೂಂಜಾ ಅವರ ಬಾಯ್ಫ್ರೆಂಡ್ ಸುಮಂತ್ ಬಿಲ್ಲವಾ ಅವರು ಈ ಫೋಟೋ ಪೋಸ್ಟ್ ಮಾಡಿದ್ದಾರೆ.
5/ 7
ಇನ್ನು ಹಬ್ಬದಂದು ಆತ್ಮೀಯ ಸ್ನೇಹಿತರು ಒಂದೆಡೆ ಸೇರಿ ಸಖತ್ತಾಗಿ ಎಂಜಾಯ್ ಮಾಡಿದ್ದು, ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
6/ 7
ಎಲ್ಲರೂ ಸೇರಿ ದಿವ್ಯಾ ಸುರೇಶ್ ಅವರ ಮನೆಯಲ್ಲಿ ಖುಷಿಯಿಂದ ಗಣೇಶನ ಹಬ್ಬವನ್ನು ಸಂಭ್ರಮಿಸಿದ್ದಾರೆ. ಪೂಜೆಯ ನಂತರ ಎಲ್ಲರೂ ಸೇರಿ ಒಂದು ಸೆಲ್ಫಿ ತೆಗೆದುಕೊಂಡಿದ್ದಾರೆ.
7/ 7
ಮಂಜು ಪಾವಗಡ ಅವರ ಜೊತೆ ಶುಭಾ ಪೂಂಜಾ ಅವರ ಬಾಯ್ಫ್ರೆಂಡ್ ಸುಮಂತ್ ಬಿಲ್ಲವ.