Ponniyin Selvan 2: ಮೊದಲ ದಿನವೇ ಭರ್ಜರಿ ಕಲೆಕ್ಷನ್; ಪೊನ್ನಿಯನ್ ಸೆಲ್ವನ್ 2 ದಾಖಲೆ ಬರೆಯೋದು ಪಕ್ಕಾ!

Ponniyin Selvan 2: ಮಣಿರತ್ನಂ ನಿರ್ದೇಶನದ ತಮಿಳು ಚಿತ್ರ ಪೊನ್ನಿಯನ್ ಸೆಲ್ವನ್ ಸಿನಿಮಾ ಸೆಪ್ಟೆಂಬರ್ 30, 2022 ರಂದು ಬಿಡುಗಡೆಯಾಗಿ ದೊಡ್ಡ ಹಿಟ್ ಆಗಿತ್ತು. ಇದೀಗ ಪೊನ್ನಿಯಿನ್ ಸೆಲ್ವನ್ 2 ಕೂಡ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ವಿಕ್ರಮ್, ಕಾರ್ತಿ, ಜಯಂ ರವಿ, ಐಶ್ವರ್ಯಾ ರೈ ಮತ್ತು ತ್ರಿಶಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

First published:

  • 17

    Ponniyin Selvan 2: ಮೊದಲ ದಿನವೇ ಭರ್ಜರಿ ಕಲೆಕ್ಷನ್; ಪೊನ್ನಿಯನ್ ಸೆಲ್ವನ್ 2 ದಾಖಲೆ ಬರೆಯೋದು ಪಕ್ಕಾ!

    ಪೊನ್ನಿಯಿನ್ ಸೆಲ್ವನ್ 2 ಚಿತ್ರ ತಮಿಳು ಮತ್ತು ತೆಲುಗು ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದೆ. ಬಾಕ್ಸ್ ಆಫೀಸ್​ನಲ್ಲಿ ದಾಖಲೆ ಬರೆಯೋದು ಪಕ್ಕಾ ಎಂದು ವಿಮರ್ಶಕರು ಹೇಳುತ್ತಿದ್ದಾರೆ.

    MORE
    GALLERIES

  • 27

    Ponniyin Selvan 2: ಮೊದಲ ದಿನವೇ ಭರ್ಜರಿ ಕಲೆಕ್ಷನ್; ಪೊನ್ನಿಯನ್ ಸೆಲ್ವನ್ 2 ದಾಖಲೆ ಬರೆಯೋದು ಪಕ್ಕಾ!

    ಪೊನ್ನಿಯನ್ ಸೆಲ್ವನ್ 2 ಮೊದಲ ದಿನ ತೆಲುಗು ರಾಜ್ಯಗಳಲ್ಲಿ 1.40 ಷೇರ್ ಪಡೆದುಕೊಂಡಿದೆ. 2.80 ಒಟ್ಟು ಗಳಿಸಿದೆ. ತೆಲುಗಿನಲ್ಲಿ ಸಿನಿಮಾ ಒಟ್ಟು 10 ಕೋಟಿ ಬ್ಯುಸಿನೆಸ್ ಮಾಡಿದೆ. ಪೊನ್ನಿಯನ್ ಸೆಲ್ವನ್ 2 ಚಿತ್ರದ ಮೊದಲ ದಿನದ ಒಟ್ಟು ವರ್ಲ್ಡ್ ವೈಡ್ ಕಲೆಕ್ಷನ್ ನೋಡಿದರೆ 26.10 ಕೋಟಿ ಶೇರ್ ಹಾಗೂ 54 ಕೋಟಿ ಗ್ರಾಸ್ ಬಂದಿದೆ ಎಂದು ಟ್ರೇಡ್ ಮೂಲಗಳು ತಿಳಿಸಿದೆ.

    MORE
    GALLERIES

  • 37

    Ponniyin Selvan 2: ಮೊದಲ ದಿನವೇ ಭರ್ಜರಿ ಕಲೆಕ್ಷನ್; ಪೊನ್ನಿಯನ್ ಸೆಲ್ವನ್ 2 ದಾಖಲೆ ಬರೆಯೋದು ಪಕ್ಕಾ!

    ಚಿತ್ರದ ಒಟ್ಟು ಮೌಲ್ಯದ ವ್ಯವಹಾರ 170 ಕೋಟಿ ಮತ್ತು ಬ್ರೇಕ್ ಈವ್ 172 ಕೋಟಿ. ಇದರೊಂದಿಗೆ ಈ ಚಿತ್ರ ಇನ್ನೂ 145.90 ಕೋಟಿ ಗಳಿಸಬೇಕಾಗಿದೆ. ತೆಲುಗಿನಲ್ಲಿ ಈ ಸಿನಿಮಾವನ್ನು ಕೊಳ್ಳಲು ಯಾರೂ ಮುಂದೆ ಬರಲಿಲ್ಲ. ದಿಲ್ ರಾಜು ಮತ್ತೊಮ್ಮೆ ಈ ಸಿನಿಮಾ ಥಿಯೇಟಿಕಲ್ ರೈಟ್ಸ್ ಖರೀದಿಸಿದ್ದಾರೆ.

    MORE
    GALLERIES

  • 47

    Ponniyin Selvan 2: ಮೊದಲ ದಿನವೇ ಭರ್ಜರಿ ಕಲೆಕ್ಷನ್; ಪೊನ್ನಿಯನ್ ಸೆಲ್ವನ್ 2 ದಾಖಲೆ ಬರೆಯೋದು ಪಕ್ಕಾ!

    ಇನ್ನು ಈ ಸಿನಿಮಾದ ಬ್ಯುಸಿನೆಸ್ ವಿಚಾರಕ್ಕೆ ಬಂದರೆ, ತಮಿಳುನಾಡು: 80 ಕೋಟಿ, ತೆಲುಗು ರಾಜ್ಯಗಳು: 10 ಕೋಟಿ, ಕೇರಳ: 9 ಕೋಟಿ, ಹಿಂದಿ + ರೆಸ್ಟಾಫ್ ಇಂಡಿಯಾ: 21 ಕೋಟಿ, ವಿದೇಶದಲ್ಲಿ: 50 ಕೋಟಿ. ಒಟ್ಟು 170 ಕೋಟಿ ಕಲೆಕ್ಷನ್ ಮಾಡಿದೆ.

    MORE
    GALLERIES

  • 57

    Ponniyin Selvan 2: ಮೊದಲ ದಿನವೇ ಭರ್ಜರಿ ಕಲೆಕ್ಷನ್; ಪೊನ್ನಿಯನ್ ಸೆಲ್ವನ್ 2 ದಾಖಲೆ ಬರೆಯೋದು ಪಕ್ಕಾ!

    ಎ.ಆರ್ ರೆಹಮಾನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಈ ಸಿನಿಮಾದ ಮೊದಲ ಭಾಗ ಇತ್ತೀಚೆಗಷ್ಟೇ ಟಿವಿಯಲ್ಲಿ ಪ್ರಸಾರವಾಗಿತ್ತು. ಭಾನುವಾರ ಜೆಮಿನಿ ವಾಹಿನಿಯಲ್ಲಿ ಪ್ರಸಾರವಾಗಿತ್ತು.

    MORE
    GALLERIES

  • 67

    Ponniyin Selvan 2: ಮೊದಲ ದಿನವೇ ಭರ್ಜರಿ ಕಲೆಕ್ಷನ್; ಪೊನ್ನಿಯನ್ ಸೆಲ್ವನ್ 2 ದಾಖಲೆ ಬರೆಯೋದು ಪಕ್ಕಾ!

    ಈ ವರ್ಷ ತಮಿಳಿನಲ್ಲಿ ಬಿಡುಗಡೆಯಾದ ದೊಡ್ಡ ಸಿನಿಮಾಗಳಲ್ಲಿ ಪೊನ್ನಿಯನ್ ಸೆಲ್ವನ್ ಕೂಡ ಒಂದು. ಒಳ್ಳೆ ನಿರೀಕ್ಷೆಗಳ ನಡುವೆ ಬಂದ ಈ ಸಿನಿಮಾ ನಿರೀಕ್ಷೆಯಂತೆಯೇ ಕಲೆಕ್ಷನ್ ಮಾಡಿದೆ. ಈ ಸಿನಿಮಾ ತೆಲುಗಿನಲ್ಲಿ ನಿರೀಕ್ಷಿತ ರೇಂಜ್ ನಲ್ಲಿ ಮಿಂಚಲಿಲ್ಲ. ಆದರೆ ತಮಿಳಿನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಫೋಟೋ: ಟ್ವಿಟರ್

    MORE
    GALLERIES

  • 77

    Ponniyin Selvan 2: ಮೊದಲ ದಿನವೇ ಭರ್ಜರಿ ಕಲೆಕ್ಷನ್; ಪೊನ್ನಿಯನ್ ಸೆಲ್ವನ್ 2 ದಾಖಲೆ ಬರೆಯೋದು ಪಕ್ಕಾ!

    ಚಿಯಾನ್ ವಿಕ್ರಮ್, ಕಾರ್ತಿ, ಜಯಂ ರವಿ ಜೊತೆಗೆ ಐಶ್ವರ್ಯಾ ರೈ ಮತ್ತು ತ್ರಿಷಾ ಅವರಂತಹ ದೊಡ್ಡ ತಾರಾಗಣವನ್ನು ಹೊಂದಿರುವ ಚಿತ್ರವನ್ನು ಮಣಿರತ್ನಂ ನಿರ್ದೇಶಿಸಿದ್ದಾರೆ. ಪೊನ್ನಿಯನ್ ಸೆಲ್ವನ್ ಭಾಗ 1 ಚಿತ್ರವು ಪ್ರಸ್ತುತ ಅಮೆಜಾನ್ ಪ್ರೈಮ್​ನಲ್ಲಿ ಸ್ಟ್ರೀಮ್ ಆಗುತ್ತಿದೆ. ಇದೀಗ ಪಾರ್ಟ್ 2 ಕಾಲಿವುಡ್​ನಲ್ಲಿ ಕಲೆಕ್ಷನ್ ವಿಷಯದಲ್ಲಿ ಅಪರೂಪದ ದಾಖಲೆ ಬರೆಯಲಿದೆ.

    MORE
    GALLERIES