Puneeth Rajkumar: ಪುನೀತ್ ಅಭಿಮಾನಿಯ ವಿನೂತನ ಶ್ರದ್ಧಾಂಜಲಿಗೆ ಮೊಳಕೆಯೊಡೆದ ಪೈರು; ಇಲ್ಲಿವೆ ಅದ್ಭುತ ಚಿತ್ರಗಳು

ಅಂದು ಭತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದ ಜಾಗದಲ್ಲಿ ಈಗ ಪೈರು ಬೆಳೆದು ನಿಂತಿದೆ. ರೈತ ಕಾಳಪ್ಪ ರಾಜು ಜಮೀನಿನಲ್ಲಿ ಮತ್ತೆ ಹುಟ್ಟಿ ಬಾ ಪುನೀತ್ ರಾಜ್ ಕುಮಾರ್ ಅಪ್ಪು ಅನ್ನೋದು ಎದ್ದು ಕಾಣ್ತಿದೆ.

First published:

  • 16

    Puneeth Rajkumar: ಪುನೀತ್ ಅಭಿಮಾನಿಯ ವಿನೂತನ ಶ್ರದ್ಧಾಂಜಲಿಗೆ ಮೊಳಕೆಯೊಡೆದ ಪೈರು; ಇಲ್ಲಿವೆ ಅದ್ಭುತ ಚಿತ್ರಗಳು

    ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್(Power Star Puneeth Rajkumar) ನಮ್ಮನ್ನು ಅಗಲಿ ಒಂದಷ್ಟು ತಿಂಗಳುಗಳೇ ಕಳೆದಿದೆ. ಆದ್ರೆ ಅವರ ನೆನಪುಗಳು ಮಾತ್ರ ಜನರ ಮನಸ್ಸಿಂದ ಮರೆಯಾಗದೆ ಹಾಗೆ ಉಳಿದಿವೆ. ಇದಕ್ಕೆ ಕಾರಣ ಅವರ ಮೇಲೆ ಅವರ ಅಭಿಮಾನಿಗಳಿಗೆ ಇದ್ದ ಅಪಾರ ಅಭಿಮಾನ. ಅದೇ ರೀತಿ ಮಂಡ್ಯದಲ್ಲೊಬ್ಬ(Mandya) ಅಭಿಮಾನಿ(Fan) ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಶ್ರದ್ಧಾಂಜಲಿಯನ್ನ ವಿಭಿನ್ನವಾಗಿ ಮಾಡಿದ್ದ. ಆ ವಿಭಿನ್ನ ಇಂದು ಮೊಳಕೆಯೊಡೆದು ಪೈರಾಗಿದೆ.  ಹೀಗಾಗಿ ಆತನ ಅಭಿಮಾನಕ್ಕೆ ಸುತ್ತಳ್ಳಿ ಜನ್ರು ಭೇಷ್​​ ಅಂತಿದ್ದಾರೆ‌. ಹಾಗಾದ್ರೆ ಆತ ಮಾಡಿದ್ದು ಎನೂ ಅಂತ ಯೋಚಿಸ್ತಿದ್ದೀರಾ..? ಇದ್ರ ಕಂಪ್ಲೀಟ್ ವರದಿ ಇಲ್ಲಿದೆ.

    MORE
    GALLERIES

  • 26

    Puneeth Rajkumar: ಪುನೀತ್ ಅಭಿಮಾನಿಯ ವಿನೂತನ ಶ್ರದ್ಧಾಂಜಲಿಗೆ ಮೊಳಕೆಯೊಡೆದ ಪೈರು; ಇಲ್ಲಿವೆ ಅದ್ಭುತ ಚಿತ್ರಗಳು

    ಹೌದು.., ನಟ ಪುನೀತ್ ರಾಜ್‍ಕುಮಾರ್ ಇಂದು ನಮ್ಮೊಡನೆ ಇಲ್ಲ. ಆದ್ರೆ ಅವರು ಮಾಡಿದ ಒಳ್ಳೆ ಕೆಲಸಗಳು ಹಾಗೂ ಅವರ ನಿಸ್ವಾರ್ಥ ಸೇವೆಗಳು ಜನರ ಮನಸ್ಸಿನಲ್ಲಿ ಹಾಗೆ ಅಚ್ಚಳಿಯದೆ ಉಳಿದಿವೆ. ಅದೆಷ್ಟೋ ಜನರು ಇಂದಿಗೂ ಪುನೀತ್ ಅವರ ನೆನಪನ್ನ ಮೆಲುಕು ಹಾಕುತ್ತಾ, ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಸೇರಿದಂತೆ, ಅವರ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳನ್ನ ಮಾಡ್ತಿದ್ದಾರೆ‌.

    MORE
    GALLERIES

  • 36

    Puneeth Rajkumar: ಪುನೀತ್ ಅಭಿಮಾನಿಯ ವಿನೂತನ ಶ್ರದ್ಧಾಂಜಲಿಗೆ ಮೊಳಕೆಯೊಡೆದ ಪೈರು; ಇಲ್ಲಿವೆ ಅದ್ಭುತ ಚಿತ್ರಗಳು

    ಅದೆಷ್ಟೋ ಜನರು ಅವರ ಆದರ್ಶವನ್ನ ರೂಢಿಸಿಕೊಂಡು ಅವರಂತೆ ಬಡವರ, ಅನಾಥರ, ಸೇವೆ ಮಾಡ್ತಿದ್ದಾರೆ. ಇನ್ನು ಕೆಲವರು ಇಂದಿಗೂ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮಗಳನ್ನ ಮಾಡುತ್ತ ಅವರನ್ನ ಸ್ಮರಿಸುತ್ತಿದ್ದಾರೆ.

    MORE
    GALLERIES

  • 46

    Puneeth Rajkumar: ಪುನೀತ್ ಅಭಿಮಾನಿಯ ವಿನೂತನ ಶ್ರದ್ಧಾಂಜಲಿಗೆ ಮೊಳಕೆಯೊಡೆದ ಪೈರು; ಇಲ್ಲಿವೆ ಅದ್ಭುತ ಚಿತ್ರಗಳು

    ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದ ಅಭಿಮಾನಿ: ಹೌದು.., ನಟ ಪುನೀತ್ ರಾಜ್‍ಕುಮಾರ್ ನಿಧನರಾದ ಬಳಿಕ ಮಂಡ್ಯದ ಮೊತ್ತಳ್ಳಿ ಗ್ರಾಮದ ರೈತ ಕಾಳಪ್ಪ ರಾಜು ಭತ್ತದಲ್ಲಿ ಮತ್ತೆ ಹುಟ್ಟಿ ಬಾ ಪುನೀತ್ ರಾಜ್ ಕುಮಾರ್ ಅಪ್ಪು ಎಂದು ತಮ್ಮ ಜಮೀನಿನಲ್ಲಿ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದರು.

    MORE
    GALLERIES

  • 56

    Puneeth Rajkumar: ಪುನೀತ್ ಅಭಿಮಾನಿಯ ವಿನೂತನ ಶ್ರದ್ಧಾಂಜಲಿಗೆ ಮೊಳಕೆಯೊಡೆದ ಪೈರು; ಇಲ್ಲಿವೆ ಅದ್ಭುತ ಚಿತ್ರಗಳು

    ಅಂದು ಭತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದ ಜಾಗದಲ್ಲಿ ಈಗ ಪೈರು ಬೆಳೆದು ನಿಂತಿದೆ. ರೈತ ಕಾಳಪ್ಪ ರಾಜು ಜಮೀನಿನಲ್ಲಿ ಮತ್ತೆ ಹುಟ್ಟಿ ಬಾ ಪುನೀತ್ ರಾಜ್ ಕುಮಾರ್ ಅಪ್ಪು ಅನ್ನೋದು ಎದ್ದು ಕಾಣ್ತಿದೆ. ಹೀಗಾಗಿ ಸುತ್ತಳ್ಳಿ ಜನರು ಕಾಳಪ್ಪ ರಾಜು ಜಮೀನಿನಲ್ಲಿ ಪುನೀತ್ ರಾಜ್‍ಕುಮಾರ್ ಹೆಸರು ಕಂಡು ಅವರ ಅಭಿಮಾನಕ್ಕೆ ಭೇಷ್​​ ಅಂತಿದ್ದಾರೆ‌.

    MORE
    GALLERIES

  • 66

    Puneeth Rajkumar: ಪುನೀತ್ ಅಭಿಮಾನಿಯ ವಿನೂತನ ಶ್ರದ್ಧಾಂಜಲಿಗೆ ಮೊಳಕೆಯೊಡೆದ ಪೈರು; ಇಲ್ಲಿವೆ ಅದ್ಭುತ ಚಿತ್ರಗಳು

    ಇನ್ನು ರೈತ ಕಾಳಪ್ಪ ರಾಜು ಮಾತನಾಡಿ, ನಟ ಪುನೀತ್ ರಾಜ್‍ಕುಮಾರ್ ಅವರು ಅಂದರೆ ನನಗೆ ತುಂಬಾ ಇಷ್ಟ. ಅವರ ನಟನೆಯಿಂದ ನಾನು ಅವರ ಅಭಿಮಾನಿಯಾಗಿದ್ದೆ. ಆದ್ರೆ ಅವರ ಸಾವು ನಮಗೆ ಸಾಕಷ್ಟು ನೋವು ತರಿಸಿದೆ. ಹೀಗಾಗಿ ಅವರ ಶ್ರದ್ಧಾಂಜಲಿಯನ್ನ ನನ್ನ ಜಮೀನಿನಲ್ಲಿ ಭತ್ತದಲ್ಲಿ  ಅವರ ಹೆಸರನ್ನು ಬರೆದಿದ್ದೆ. ಇದೀಗ ಆ ಜಾಗದಲ್ಲಿ ಪೈರು ಬೆಳೆದಿದ್ದು, ಸುತ್ತ ಮುತ್ತಲಿನ ಜನರು ಅದನ್ನ ನೋಡಲು ಬರ್ತಿದ್ದಾರೆ ಅಂತಿದ್ದಾರೆ. ಒಟ್ಟಾರೆ ಪುನೀತ್ ರಾಜ್‍ಕುಮಾರ್ ಎಲ್ಲರನ್ನ ಅಗಲಿದ್ರು ಕೂಡ, ಅಭಿಮಾನಿಗಳ ಮನಸ್ಸಿನಲ್ಲಿ ಹಾಗೆ ಉಳಿದಿದ್ದಾರೆ.

    MORE
    GALLERIES