ಸಿನಿಮಾ ನಿರ್ದೇಶಕ ಕೆ. ಆಸಿಫ್ ಮಗಳು ಹಿನಾ ಕೌಸರ್ 70ರ ದಶಕದ ನಟಿಯಾಗಿದ್ದಾರೆ. 1991 ರಲ್ಲಿ ದರೋಡೆಕೋರ ಇಕ್ಬಾಲ್ ಮಿರ್ಚಿಯನ್ನು ಮದುವೆಯಾದ್ರು. ಸಿನಿಮಾ ಕೆರಿಯರ್ ನಿಲ್ಲಿಸಿ ಇಕ್ಬಾಲ್ ಮಿರ್ಚಿ ಅವರೊಂದಿಗೆ ಯುಕೆನಲ್ಲಿ ನೆಲೆಸಿದ್ದಾರೆ. ಇಕ್ಬಾಲ್ ಮಿರ್ಚಿ 2013ರಲ್ಲಿ ನಿಧನರಾದರು. ಇದೀಗ ಹಿನಾ ಕೌಸರ್ ಯುಕೆಯಲ್ಲಿ ವಾಸಿಸುತ್ತಿದ್ದಾರೆ. (ಫೋಟೋ ಕ್ರೆಡಿಟ್ಗಳು: YouTube@videograb)
ಪಾಕಿಸ್ತಾನಿ ನಟಿ ಅನಿತಾ ಅಯೂಬ್ ದಾವೂದ್ ಇಬ್ರಾಹಿಂಗೆ ನಿಕಟರಾಗಿದ್ದರು. ಪಾಕಿಸ್ತಾನಿ ನಿರ್ದೇಶಕ ಜಾವೇದ್ ಸಿದ್ದಿಕಿ ತಮ್ಮ ಚಿತ್ರಕ್ಕೆ ಅನಿತಾ ಅಯೂಬ್ ಅವರನ್ನು ರಿಜೆಕ್ಟ್ ಮಾಡಿದ್ರು. ಬಳಿಕ ನಿರ್ದೇಶಕ ಮೇಲೆ ದಾವೂದ್ ಗುಂಡು ಹಾರಿಸಿ ಕೊಂದಿದ್ದಾನೆ ಎನ್ನಲಾಗಿದೆ. ಬಳಿಕವೂ ಅನಿತಾ ಕೆಲ ಕಾಲ ಬಾಲಿವುಡ್ನಲ್ಲೂ ಕೆಲಸ ಮಾಡಿದ್ದರು. (ಫೋಟೋ ಕ್ರೆಡಿಟ್ಗಳು: Instagram@pakdramaspage)
ಮೋನಿಕಾ ಬೇಡಿ ಸಲ್ಮಾನ್ ಖಾನ್, ಸುನಿಲ್ ಶೆಟ್ಟಿ ಮತ್ತು ಗೋವಿಂದ ಅವರಂತಹ ಸ್ಟಾರ್ಗಳೊಂದಿಗೆ ಕೆಲಸ ಮಾಡಿದ್ದಾರೆ. ಆದರೆ ಭೂಗತ ಪಾತಕಿ ಅಬು ಸಲೇಂ ಅವರೊಂದಿಗಿನ ಸಂಬಂಧವನ್ನು ಬಹಿರಂಗಪಡಿಸಿದಾಗ ಅನೇಕರು ಶಾಕ್ ಆಗಿದ್ದರು. ಇಸ್ಲಾಂಗೆ ಮತಾಂತರಗೊಂಡರು ಮತ್ತು ಅಬು ಸಲೇಂ ಅವರನ್ನು ವಿವಾಹವಾಗಿದ್ದರು. ಮೋನಿಕಾ ಮತ್ತು ಅಬು ಸಲೇಂ ಅವರನ್ನು 2002ರಲ್ಲಿ ಲಿಸ್ಬನ್ ಪೊಲೀಸರು ನಕಲಿ ಪಾಸ್ ಪೋರ್ಟ್ಗಳನ್ನು ಬಳಸಿ ಪೋರ್ಚುಗಲ್ಗೆ ಪ್ರವೇಶಿಸಿದ್ದಕ್ಕಾಗಿ ಬಂಧಿಸಿದ್ದರು. ಅವರನ್ನು 2005 ರಲ್ಲಿ ಭಾರತಕ್ಕೆ ಹಸ್ತಾಂತರಿಸಲಾಯಿತು. ಎರಡು ವರ್ಷಗಳ ಜೈಲು ಶಿಕ್ಷೆಯ ನಂತರ, ಮೋನಿಕಾ 2007 ರಲ್ಲಿ ಬಿಡುಗಡೆಯಾದರು. (ಫೋಟೋ ಕ್ರೆಡಿಟ್ಗಳು: Instagram @memonicabedi)