2 ಸಾವಿರ ರೂಪಾಯಿ ನೋಟನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ತೆಗೆದುಕೊಂಡಿರುವ ನಿರ್ಧಾರ ಇದೀಗ ಸಂಚಲನ ಮೂಡಿಸಿದೆ. ಈ ನಿರ್ಧಾರದಿಂದ 30ನೇ ಸೆಪ್ಟೆಂಬರ್ 2023ರ ನಂತರ, 2000 ನೋಟು ಸ್ಕ್ರ್ಯಾಪ್ ಪೇಪರ್ ಆಗಲಿದೆ. ಇದರೊಂದಿಗೆ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಎರಡು ಸಾವಿರದ ನೋಟನ್ನು ಬದಲಿಸಿಕೊಳ್ಳಲು ಮುಂದಾಗಿದ್ದಾರೆ.