Manchu Lakshmi: ಬಾಹುಬಲಿಯಲ್ಲಿ ನಟಿಸದ್ದಕ್ಕೆ ಹೆಮ್ಮೆ ಇದೆ ಎಂದ ಟಾಪ್ ನಟಿ
Manchu Lakshmi: ನಟಿ ಲಕ್ಷ್ಮಿ ಮತ್ತೊಮ್ಮೆ ತಮ್ಮ ಹೇಳಿಕೆಗಳ ಮೂಲಕ ಸುದ್ದಿ ಮಾಡಿದ್ದಾರೆ, ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ಅವರು ರಾಜಮೌಳಿ ಬಾಹುಬಲಿಯಲ್ಲಿ ನಟಿಸದೆ ಇರುವುದಕ್ಕೆ ಹೆಮ್ಮೆ ಇದೆ ಎಂದಿದ್ದಾರೆ.
ಮಂಚು ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮಿ. ಲಕ್ಷ್ಮಿ ಬಗ್ಗೆ ಟಾಲಿವುಡ್ ಪ್ರೇಕ್ಷಕರಿಗೆ ಗೊತ್ತು. ಕೆಲವೇ ಸಿನಿಮಾ ಮಾಡಿದ್ದರೂ ಮಂಚು ಲಕ್ಷ್ಮಿಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳು ಮತ್ತು ಫಾಲೋವರ್ಸ್ ಇದ್ದಾರೆ.
2/ 10
ಆದರೆ ಆಕೆಯ ಪೋಸ್ಟ್ಗಳನ್ನು ಹೊಗಳಿದವರ ಜೊತೆಗೆ, ನಟಿಯನ್ನು ಟೀಕಿಸುವವರೂ ಇದ್ದಾರೆ. ಇತ್ತೀಚಿಗೆ ಮಂಚು ಲಕ್ಷ್ಮಿ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಬಾಹುಬಲಿ ಸಿನಿಮಾದ ಬಗ್ಗೆ ಮಂಚು ಲಕ್ಷ್ಮಿ ಮಾಡಿರುವ ಕಾಮೆಂಟ್ ವೈರಲ್ ಆಗುತ್ತಿದೆ.
3/ 10
ರಾಜಮೌಳಿ ನಿರ್ದೇಶನದ ಬಾಹುಬಲಿ ಎಷ್ಟು ಸಂಚಲನ ಸೃಷ್ಟಿಸಿದೆ ಎಂಬುದು ಎಲ್ಲರಿಗೂ ಗೊತ್ತು. ಅದರಲ್ಲಿ ಎಲ್ಲ ಪಾತ್ರಗಳೂ ಹೈಲೈಟ್ ಆಗಿವೆ. ಈ ಚಿತ್ರದಲ್ಲಿ ಶಿವಗಾಮಿಯಾಗಿ ರಮ್ಯಾ ಕೃಷ್ಣ ಅವರ ಅಭಿನಯ ಅದ್ಭುತವಾಗಿದೆ. ಬೇರೆಯವರನ್ನು ಆ ಪಾತ್ರದಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಾಗದಷ್ಟು ಪಾತ್ರದಲ್ಲಿ ಅವರು ಹೈಲೈಟ್ ಆಗಿದ್ದಾರೆ.
4/ 10
ಆದರೆ ಈ ಪಾತ್ರಕ್ಕೆ ಮೊದಲು ಬ್ಯೂಟಿಫುಲ್ ತಾರೆ ಶ್ರೀದೇವಿ ಅವರನ್ನು ಪರಿಗಣಿಸಲಾಗಿತ್ತು. ನಂತರ ಮಂಚು ಲಕ್ಷ್ಮಿಯನ್ನು ಸಂಪರ್ಕಿಸಿದ್ದರು. ಪ್ರಭಾಸ್ ತಾಯಿಯಾಗುವುದು ಸ್ವಲ್ಪ ಕಷ್ಟ ಎಂದು ಅವರು ಪಾತ್ರ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.
5/ 10
ಮಂಚು ಲಕ್ಷ್ಮಿ ನಂತರ ರಮ್ಯಾ ಕೃಷ್ಣಗೆ ಆಫರ್ ಬಂದಿದೆ. ಶಿವಗಾಮಿ ಪ್ರೇಕ್ಷಕರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದರು. ಮಂಚು ಲಕ್ಷ್ಮಿ ಈಗಾಗಲೇ ಬಾಹುಬಲಿ ಆಫರ್ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ಮಂಚು ಲಕ್ಷ್ಮಿ ಮತ್ತೊಮ್ಮೆ ಮಾತನಾಡಿದ್ದು, ಬಾಹುಬಲಿ ಸಿನಿಮಾದ ಬಗ್ಗೆ ಇಂಟ್ರೆಸ್ಟಿಂಗ್ ಕಮೆಂಟ್ಸ್ ಮಾಡಿದ್ದಾರೆ.
6/ 10
ಶಿವಗಾಮಿ ಪಾತ್ರ ಮಾಡದೇ ಇರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದಿದ್ದಾರೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಂಚು ಲಕ್ಷ್ಮಿ ಬಾಹುಬಲಿಯಲ್ಲಿ ಶಿವಗಾಮಿ ಪಾತ್ರವನ್ನು ತಿರಸ್ಕರಿಸಿದ ಬಗ್ಗೆ ಮಾತನಾಡಿದ್ದಾರೆ.
7/ 10
ಒಮ್ಮೆ ನಾವು ಒಂದು ಪಾತ್ರವನ್ನು ನಿರ್ವಹಿಸಿದರೆ, ನಾವು ಅದರಲ್ಲಿ ಉಳಿಯುತ್ತೇವೆ. ಆದರೆ ಒಂದು ರೀತಿಯ ಪಾತ್ರಗಳಿಗೆ ಸೀಮಿತವಾಗಲು ನಾನು ಬಯಸುವುದಿಲ್ಲ ಎಂದಿದ್ದಾರೆ.
8/ 10
ಅದೊಂದು ವಿಶೇಷ ಸಿನಿಮಾ ಆಗಿರಬಹುದು. ಆದರೆ ಆ ಪಾತ್ರಕ್ಕೆ ನಾನು ಸರಿಯಿಲ್ಲ ಅನ್ನಿಸಿತು. ನನ್ನ ಜೀವನ ಮತ್ತು ನನ್ನ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಲು ನಾನು ಆ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಮಂಚು ಲಕ್ಷ್ಮಿ ಹೇಳಿದ್ದಾರೆ.
9/ 10
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಮಂಚು ಲಕ್ಷ್ಮಿ ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಿದ್ದರು. ಮಂಚು ಲಕ್ಷ್ಮಿ ಅವರು 2012 ರಲ್ಲಿ ಓ ಧೀರುಡು ಚಿತ್ರದ ಪಾತ್ರಕ್ಕಾಗಿ ನಂದಿ ಪ್ರಶಸ್ತಿಯನ್ನು ಪಡೆದರು.
10/ 10
ಮಂಚು ಲಕ್ಷ್ಮಿ ಸದ್ಯ ಮಲಯಾಳಂ ಸ್ಟಾರ್ ಮೋಹನ್ ಲಾಲ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಅಗ್ನಿನಕ್ಷತ್ರಂ ಎಂಬ ಸಿನಿಮಾ ಕೂಡ ತಯಾರಾಗುತ್ತಿದೆ. ಒಂದೆಡೆ ಒಟಿಟಿಯಲ್ಲಿ ಸಿನಿಮಾಗಳ ಜೊತೆ ಸ್ಪೆಷಲ್ ಶೋಗಳನ್ನೂ ಮಾಡುತ್ತಿದ್ದಾರೆ.