Viral News: ಒಂದೇ ಚಾನೆಲ್ನಲ್ಲಿ ಪದೇ ಪದೇ ಸೂರ್ಯವಂಶಂ ಸಿನಿಮಾ ಪ್ರಸಾರ; ನೋಡಿ ನೋಡಿ ಬೇಸತ್ತ ವ್ಯಕ್ತಿ ಮಾಡಿದ್ದೇನು?
Sooryavansham: ಅಮಿತಾಭ್ ಬಚ್ಚನ್ ಅವರ ಸೂರ್ಯವಂಶಂ ಚಿತ್ರವನ್ನು ಟಿವಿ ಚಾನೆಲ್ ವೊಂದರಲ್ಲಿ ಪದೇ ಪದೇ ಪ್ರಸಾರ ಮಾಡಿದ್ದಕ್ಕೆ ಬೇಸರಗೊಂಡ ಅಭಿಮಾನಿ ಟಿವಿ ಚಾನೆಲ್ ಹೆಸರಲ್ಲಿ ಪತ್ರ ಬರೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಮೇ 21, 1999 ರಂದು ಅಮಿತಾಭ್ ಬಚ್ಚನ್ ಅವರ ಸೂಪರ್ ಹಿಟ್ ಚಿತ್ರ ಸೂರ್ಯವಂಶಂ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಸುಮಾರು 7 ಕೋಟಿಯಲ್ಲಿ ತಯಾರಾದ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಸುಮಾರು 12.64 ಕೋಟಿ ರೂಪಾಯಿ ಗಳಿಸಿ ಆ ಕಾಲದಲ್ಲೇ ದಾಖಲೆ ಬರೆದಿತ್ತು.
2/ 8
‘ಸೂರ್ಯವಂಶಂ’ ಸಿನಿಮಾ ಪ್ರಸಾರ ಹಕ್ಕು ಸೋನಿ ಮ್ಯಾಕ್ಸ್ ಬಳಿ ಇದೆ. ಈ ಕಾರಣಕ್ಕೆ ಹಲವು ಬಾರಿ ಈ ಚಿತ್ರವನ್ನು ಪ್ರಸಾರ ಮಾಡಲಾಗಿದೆ. ಈ ಸಿನಿಮಾವನ್ನು ಈಗಲೂ ನೋಡುವ ಅಭಿಮಾನಿಗಳಿದ್ದಾರೆ.
3/ 8
ನೋಡಿ ನೋಡಿ ಬೇಸತ್ತ ವ್ಯಕ್ತಿಯೊಬ್ಬ ಚಾನೆಲ್ಗೆ ಪತ್ರ ಬರೆದಿದ್ದು, ಈ ಫೋಟೋಗಳು ಇದೀಗ ಸಖತ್ ಟ್ರೋಲ್ ಆಗಿದೆ.
4/ 8
ಪತ್ರದಲ್ಲಿ ಏನಿದೆ- ‘ಸೂರ್ಯವಂಶಂ ಚಿತ್ರದ ಪ್ರಸಾರ ಹಕ್ಕು ನಿಮ್ಮ ಬಳಿ ಇದೆ. ನಿಮ್ಮ ಕೃಪೆಯಿಂದ ಹೀರಾ ಸಿಂಗ್ (ಅಮಿತಾ ಬಚ್ಚನ್ ಮಾಡಿದ ಪಾತ್ರ) ಕುಟುಂಬದ ಬಗ್ಗೆ ತಿಳಿದುಕೊಂಡಿದ್ದೇವೆ. ನೀವು ಎಷ್ಟು ಬಾರಿ ಈ ಚಿತ್ರವನ್ನು ಟೆಲಿಕಾಸ್ಟ್ ಮಾಡಿದ್ದೀರಿ ಎಂಬುದನ್ನು ತಿಳಿದುಕೊಳ್ಳಬೇಕಿದೆ.
5/ 8
ಸೂರ್ಯವಂಶಂ ಸಿನಿಮಾವನ್ನು ಭವಿಷ್ಯದಲ್ಲಿ ಎಷ್ಟು ಬಾರಿ ಪ್ರಸಾರ ಮಾಡಬೇಕು ಎಂದುಕೊಂಡಿದ್ದೀರಿ ಎಂಬುದು ನನಗೆ ಗೊತ್ತಾಗಬೇಕಿದೆ ಎಂದು ವ್ಯಕ್ತಿಯೊಬ್ಬ ಪತ್ರ ಬರೆದಿದ್ದಾನೆ.
6/ 8
ಈ ಸಿನಿಮಾ ನಮ್ಮ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಿದರೆ ಇದಕ್ಕೆ ಯಾರು ಹೊಣೆ. ದಯವಿಟ್ಟು ತಿಳಿಸಿ ಎಂದು ವೀಕ್ಷಕನೋರ್ವ ಪ್ರಶ್ನೆ ಮಾಡಿದ್ದಾನೆ.
7/ 8
ಈ ಚಲನಚಿತ್ರವು ಸೋನಿ ಮ್ಯಾಕ್ಸ್ ರೇಟಿಂಗ್ಗಳಲ್ಲಿ ಅಗ್ರಸ್ಥಾನದಲ್ಲಿದೆ. ಈ ಚಾನಲ್ ತಿಂಗಳಿಗೊಮ್ಮೆಯಾದರೂ ಸೂರ್ಯವಂಶಂ ಪ್ರಸಾರ ಮಾಡುತ್ತಿದೆ.
8/ 8
ಈ ಪತ್ರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇವಿವಿ ಸತ್ಯನಾರಾಯಣ ನಿರ್ದೇಶನದ 'ಸೂರ್ಯವಂಶಂ' ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜೊತೆಗೆ ಸೌಂದರ್ಯ ಮತ್ತು ಅನುಪಮ್ ಖೇರ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲೂ ಸಹ ರಿಮೇಕ್ ಆಗಿದೆ.