Unni Rajan P Dev: ಮಡದಿಯ ಆತ್ಮಹತ್ಯೆ ಪ್ರಕರಣ: ಪೊಲೀಸರ ವಶದಲ್ಲಿ ಮಲಯಾಳಂ ನಟ ಉನ್ನಿ ರಾಜನ್​ ಪಿ ದೇವ್​

ಮಲಯಾಳಂ ನಟ ಉನ್ನಿ ರಾಜನ್​ ಪಿ ದೇವ್​ ಅವರ ಮಡದಿ ಪ್ರಿಯಾಂಕಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಟನನ್ನು ವಶಕ್ಕೆ ಪಡೆದಿದ್ದಾರೆ ಪೊಲೀಸರು. ಪ್ರಿಯಾಂಕಾ ಅವರು ಆತ್ಮಹತ್ಯೆ ಮಾಡಿಕೊಂಡಾಗಲೇ ಅವರ ಮನೆಯವರು ಇದು ಕೌಟುಂಬಿಕ ಕಲಹದಿಂದ ಆಗಿರುವ ಘಟನೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಉನ್ನಿ ದೇವ್​ ಅವರು ಕೊಡುತ್ತಿದ್ದ ಮಾನಸಿಕ ಹಾಗೂ ದೈಹಿಕ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದ್ದರು. ಸದ್ಯ ಪೊಲೀಸರು ನಟನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂ ಖಾತೆ)

First published: