'ಹೃದಯದಲ್ಲಿ ಇದ್ದವರನ್ನ ದೇವರ ಮನೆಯಲ್ಲಿ ಕೂರಿಸುವುದು ದೊಡ್ಡ ವಿಷಯವಲ್ಲ' ಎಂದು ಹೇಳಿದರು. 'ನಮ್ಮನ್ನು ತುಂಬಾ ಪ್ರೀತಿ ಮಾಡುತ್ತಿದ್ದರು. ಪ್ರತಿ ಹೆಜ್ಜೆಯಲ್ಲೂ ಅವಳಿಗೆ ಫೋನ್ ಮಾಡೋರು' ಎಂದು ಅವಿನಾಶ್ ಹೇಳಿದರು. 'ತಂದೆ ಸ್ವರೂಪವಾಗಿ ನಮ್ಮ ಜೊತೆ ಇದ್ದರು. ಅವರ ನೆರಳು ನಮ್ಮ ಬಿಟ್ಟು ಹೋಗಿಲ್ಲ' ಎಂದು ಮಾಳವಿಕಾ ವಿವರಿಸಿದರು. ಬಳಿಕ ರಮೇಶ್ ಅರವಿಂದ್ ಮಾತನಾಡಿ, 'ಆಪ್ತ ರಕ್ಷಕ ಎನ್ನುವುದು ಕೇವಲ ಟೈಟಲ್ ಮಾತ್ರವಲ್ಲ, ಅವರ ಸ್ವಾಭಾವ' ಎಂದು ಹೇಳಿದ್ದಾರೆ.