MAA Elections: ಮಾ ಅಧ್ಯಕ್ಷರಾದ ಮಂಚು ವಿಷ್ಣುಗೆ ಶುಭ ಕೋರಿದ ನಟಿ ಮಾಲಾಶ್ರೀ..!

ಮೊದಲಿಗೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಮಿಂಚಿ ನಂತರ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ನಟಿ ಮಾಲಾಶ್ರೀ (Malashree Ramu). ಹೀಗಾಗಿ ಅವರಿಗೆ ಟಾಲಿವುಡ್ ಹಾಗೂ ಕಾಲಿವುಡ್​ನ ಸೆಲೆಬ್ರಿಟಿಗಳ ಜೊತೆ ಆತ್ಮೀಯವಾದ ಸಂಬಂಧವಿದೆ. ಇಂದಿಗೂ ನೆರೆಹೊರೆಯ ಚಿತ್ರರಂಗದ ಸೆಲೆಬ್ರಿಟಿಗಳನ್ನು ಆಗಾಗ ಭೇಟಿಯಾಗುತ್ತಿರುತ್ತಾರೆ. ಈಗಲೂ ಸಹ ಮಾಲಾಶ್ರೀ ಅವರು ಹೈದರಾಬಾದಿಗೆ ಹೋಗಿದ್ದು, ಮೋಹನ್ ಬಾಬು (Mohan Babu) ಹಾಗೂ ಮಂಚು ವಿಷ್ಣು (Manchu Vishnu) ಅವರನ್ನು ಭೇಟಿಯಾಗಿ ಶುಭ ಕೋರಿದ್ದಾರೆ. (ಚಿತ್ರಗಳು ಕೃಪೆ: ಮಾಲಾಶ್ರೀ ರಾಮು ಇನ್​ಸ್ಟಾಗ್ರಾಂ ಖಾತೆ)

First published: