Malaika Arora Nepal Vacation: ಬಾಲಿವುಡ್ ನಟಿ ಮಲೈಕಾ ಅರೋರ ನೇಪಾಳದಲ್ಲಿ ಜಾಲಿ ಟ್ರಿಪ್ ಮಾಡ್ತಿದ್ದಾರೆ. ನೇಪಾಳದಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋವನ್ನು ಮಲೈಕಾ ಹಂಚಿಕೊಂಡಿದ್ದಾರೆ. ಈ ಫೋಟೋಗಳೇ ಇದೀಗ ಸಖತ್ ಟ್ರೋಲ್ ಆಗಿದೆ.
ಬಾಲಿವುಡ್ ನಟಿ ಮಲೈಕಾ ಅರೋರಾ ತನಗಿಂತ ಚಿಕ್ಕ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ನಲ್ಲಿದ್ದಾರೆ. ಆಗಾಗ್ಗೆ ಒಂದಲ್ಲ ಒಂದು ಕಾರಣಕ್ಕಾಗಿ ನಟಿ ಸುದ್ದಿಯಲ್ಲಿರ್ತಾರೆ. ಮತ್ತೆ ಮಾಜಿ ಪತಿ ಜೊತೆ ಕಾಣಿಸಿಕೊಂಡು ಸುದ್ದಿಯಾಗಿದ್ರು.
2/ 8
ನೇಪಾಳದಲ್ಲಿ ರಜೆ ದಿನಗಳನ್ನು ಎಂಜಾಯ್ ಮಾಡಿದ ನಟಿ ಮಲೈಕಾ ಅರೋರಾ, ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕೊಂಚ ವಿಭಿನ್ನವಾಗಿಯೂ ಕಾಣಿಸಿಕೊಂಡಿದ್ದಾರೆ. (ಫೋಟೋ ಕೃಪೆ: Instagram: @malaikaaroraofficial)
3/ 8
ಫೋಟೋಗಳಲ್ಲಿ, ಮಲೈಕಾ ವೈಟ್ ಟಿ-ಶರ್ಟ್, ಬ್ಲೂ ಡೆನಿಮ್ ಮತ್ತು ವೈಟ್ ಪಫರ್ ಜಾಕೆಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಮಲೈಕಾ ನೀಲಿ ಸನ್ ಗ್ಲಾಸ್ ಹಾಕಿದ್ದು, ತುಂಬಾ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. (ಫೋಟೋ ಕೃಪೆ: Instagram: @malaikaaroraofficial)
4/ 8
ಈ ಚಿತ್ರಗಳನ್ನು ಸ್ವತಃ ನಟಿ ಮಲೈಕಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ನಟಿ ಫೋಟೋ ಹಂಚಿಕೊಂಡ ಕೆಲವೇ ಗಂಟೆಯನ್ನು ಲೈಕ್ಸ್ ಹಾಗೂ ಕಮೆಂಟ್ ಗಳ ಸುರಿಮಳಯಾಗಿದೆ. (ಫೋಟೋ ಕೃಪೆ: Instagram: @malaikaaroraofficial)
5/ 8
ಈ ಫೋಟೋಗಳಲ್ಲಿ ಮಲೈಕಾ ಮುಖದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದೆ. ಆಕೆಯ ಮುಖವು ಸ್ವಲ್ಪ ಊದಿಕೊಂಡಂತೆ ಕಾಣುತ್ತಿದೆ. ಹೀಗಾಗಿ ನಟಿ ಸಾಕಷ್ಟು ಟ್ರೋಲ್ಗೆ ಒಳಗಾಗಿದ್ದಾರೆ. (ಫೋಟೋ ಕೃಪೆ: Instagram: @malaikaaroraofficial)
6/ 8
ಮಲೈಕಾ ಫೋಟೋಗೆ ಅನೇಕು ಕಮೆಂಟ್ ಮಾಡಿದ್ದಾರೆ. ಅದರಲ್ಲಿ ಒಬ್ಬರು 'ಮುಖಕ್ಕೆ ಏನಾಯಿತು? ತುಂಬಾ ವಿಚಿತ್ರ ಅನಿಸುತ್ತಿದೆ.' ಮತ್ತೊಬ್ಬರು 'ಅರ್ಜುನ್ ಜೊತೆಯಲ್ಲಿ ಬರಲಿಲ್ಲವೇ?' ಎಂದು ಕಮೆಂಟ್ ಮಾಡಿದ್ದಾರೆ. (ಫೋಟೋ ಕೃಪೆ: Instagram: @malaikaaroraofficial)
7/ 8
ಮತ್ತೊಂದೆಡೆ ನಟಿಯ ಸ್ಟೈಲಿಶ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮಲೈಕಾ ಫ್ಯಾಷನ್ ಸೆನ್ಸ್ ಹಾಗೂ ಕಣ್ಣು ಕುಕ್ಕುವ ನೋಟವನ್ನು ಹೊಗಳಿದ್ದಾರೆ. (ಫೋಟೋ ಕೃಪೆ: Instagram: @malaikaaroraofficial)
8/ 8
ಫೋಟೋವನ್ನು ಹಂಚಿಕೊಂಡ ಮಲೈಕಾ, 'ಹಲೋ ನೇಪಾಳ, ನಾನು ಇಲ್ಲಿಗೆ ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಬರೆದಿದ್ದಾರೆ. ಮೂಡ್ ಮತ್ತು ವೈವ್ ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ. (ಫೋಟೋ ಕೃಪೆ: Instagram: @malaikaaroraofficial)