ಕಾರು ಅಪಘಾತದ ನಂತರ ಮಲೈಕಾ ಅರೋರಾ ತಮ್ಮ ಇತ್ತೀಚಿನ ಫೋಟೋಶೂಟ್ನ ಕೆಲವು ಚಿತ್ರಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ನಟಿಯನ್ನು ಕಪ್ಪು ಉಡುಪಿನಲ್ಲಿ ಕಾಣಬಹುದು.
2/ 8
ಫೋಟೋಗಳಲ್ಲಿ ಮಲೈಕಾ ಅರೋರಾ ಸೋಫಾ ಮೇಲೆ ಕುಳಿತಿದ್ದಾರೆ. ಕಪ್ಪು ಬಟ್ಟೆಯಲ್ಲಿ ಸಖತ್ ಪೋಸ್ ಕೊಟ್ಟಿದ್ದಾರೆ ಮಲೈಕಾ ಅರೋರಾ.
3/ 8
ಸುಮಾರು 3 ಗಂಟೆಗಳ ಹಿಂದೆ ಮಲೈಕಾ ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, 40 ಸಾವಿರಕ್ಕೂ ಹೆಚ್ಚು ಲೈಕ್ಗಳು ಬಂದಿವೆ. ಸೆಲೆಬ್ರಿಟಿಗಳ ಜೊತೆಗೆ, ಅಭಿಮಾನಿಗಳು ಅವರ ಫೋಟೋಗಳಿಗೆ ಕಾಮೆಂಟ್ ಮಾಡುವ ಮೂಲಕ ಅವರ ಸೌಂದರ್ಯವನ್ನು ಹೊಗಳುತ್ತಿದ್ದಾರೆ.
4/ 8
ಮಲೈಕಾ ಅರೋರಾ ಯಾವಾಗಲೂ ತನ್ನ ಫ್ಯಾಶನ್ ಸೆನ್ಸ್ನಿಂದ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫೋಟೋಗಳನ್ನು ಹಂಚಿಕೊಂಡ ಅವರು, 'ಬ್ಲಾಕ್ ಮ್ಯಾಜಿಕ್' ಎಂಬ ಶೀರ್ಷಿಕೆ ಬರೆದುಕೊಂಡಿದ್ದಾರೆ.
5/ 8
ಏಪ್ರಿಲ್ 2 ರಂದು ಮಲೈಕಾ ಅರೋರಾ ಕಾರು ಅಪಘಾತಕ್ಕೊಳಗಾದರು, ಅದರಲ್ಲಿ ಅವರು ಕಣ್ಣಿನ ಬಳಿ ಗಾಯವಾಗಿತ್ತು.
6/ 8
ಏಪ್ರಿಲ್ 2 ರಂದು ಮಲೈಕಾ ಪುಣೆಯಿಂದ ಮುಂಬೈಗೆ ಹಿಂದಿರುಗುತ್ತಿದ್ದಾಗ, ಅಪಘಾತವಾಗಿತ್ತು.ನವಿ ಮುಂಬೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 3 ರಂದು ಮಲೈಕಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.
7/ 8
ಅಪಘಾತವಾದ ಒಂದು ವಾರದ ನಂತರ ತನ್ನನ್ನು ಆರೈಕೆ ಮಾಡಿದ್ದಕ್ಕಾಗಿ ಮತ್ತು ತನಗಾಗಿ ಪ್ರಾರ್ಥಿಸಿದ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಮಲೈಕಾ ಅರೋರಾ ಧನ್ಯವಾದ ತಿಳಿಸಿದ್ದಾರೆ.
8/ 8
ಮಲೈಕಾ ಅರೋರಾ ಅನೇಕ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿದ್ದಾರೆ. ಪ್ರಸ್ತುತ, ಅವರು ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ ಶೋ ಜಡ್ಜ್ ಆಗಿದ್ದಾರೆ.