ಬಾಲಿವುಡ್ ಬಳುಕುವ ಬಳ್ಳಿ ಮಲೈಕಾ ಅರೋರ ಒಂದಲ್ಲ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿರುವ ನಟಿ.
2/ 19
ಡೇಟಿಂಗ್, ಮೀಟಿಂಗ್ ಮೂಲಕ ಪೇಜ್3 ಕಾಲಂನಲ್ಲಿ ಕಾಣಿಸಿಕೊಳ್ಳುವ ನಟಿ ಈ ಬಾರಿ ಸುದ್ದಿಯಾಗಿದ್ದು ಬೇರೊಂದು ವಿಷಯಕ್ಕೆ.
3/ 19
ಸಾಮಾನ್ಯವಾಗಿ ಮಲ್ಲಿಕಾ ಅರೋರ ಸಮುದ್ರ ಕಿನಾರೆಯಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿರುವ ಬಿಕಿನಿ ಫೋಟೋಗಳ ಪಡ್ಡೆ ಹೈಕ್ಳ ಹೃದಯಕ್ಕೆ ಕಿಚ್ಚು ಹಚ್ಚುತ್ತಾರೆ. ಇತ್ತೀಚೆಗೆ ಮಲೈಕಾರ ಅರೆನಗ್ನ ಫೋಟೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೇ ಹೆಚ್ಚು.
4/ 19
ಅದರಲ್ಲೂ ಚಿರ ಯೌವ್ವನವನ್ನು ಉಳಿಸಿಕೊಂಡಿರುವ ನಟಿ ಹಾಟ್ ಲುಕ್ಗೆ ಅನೇಕರು ಫಿದಾ ಆಗಿದ್ದರು.
5/ 19
ಏಕೆಂದರೆ ಮುನ್ನಿ ಬದ್ನಾಮ್ ಹೂಯಿ...ಎಂದು ಮೈ ಬಳುಕಿಸಿದ್ದ 45ರ ತಾರೆ ಇನ್ನೂ ಕೂಡ ಯೌವ್ವನವನ್ನು ಕಾಪಾಡಿಕೊಂಡಿದ್ದಾರೆ. ತಮ್ಮ ಮಾದಕ ಮೈಮಾಟದ ಫೋಟೋ ಮೂಲಕ ಮೋಡಿ ಮಾಡುವ ನಟಿ ತಾಯಂದಿರ ದಿನದ ಪ್ರಯುಕ್ತ ಅಮ್ಮನ ಫೋಟೋವನ್ನು ಹಂಚಿಕೊಂಡಿದ್ದಾರೆ.
6/ 19
ಹೌದು, ನಟಿ ಮಲೈಕಾ ಅರೋರಾ ಅವರು ತಾಯಿಯ ದಿನದಂದು ಅಮ್ಮನ ಫೋಟೊ ಹಂಚಿಕೊಂಡು ಮದರ್ಸ್ ಡೇ ಶುಭಾಶಯ ತಿಳಿಸಿದ್ದಾರೆ. ಬಣ್ಣದ ಲೋಕದಿಂದ ದೂರವೇ ಉಳಿದಿರುವ ಮಲೈಕಾ ತಾಯಿ ಜಾಯ್ಸ್ ಪಾಲಿಕಾರ್ಪ್ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದು ಅಪರೂಪ.
7/ 19
ಮೂಲತಃ ಕೇರಳದವರಾಗಿರುವ ಜಾಯ್ಸ್ ಪಾಲಿಕಾರ್ಪ್ ಹಾಗೂ ಪಂಜಾಬಿ ಮೂಲದ ಅನಿಲ್ ಅರೋರಾ ಎಂಬವರನ್ನು ವಿವಾಹವಾಗಿದ್ದರು. ಆದರೆ ಮಲೈಕಾಗೆ 11 ವರ್ಷವಿದ್ದಾಗ ಈ ದಂಪತಿ ಡೈವೋರ್ಸ್ ಪಡೆದಿದ್ದರು.
8/ 19
ಆ ಬಳಿಕ ಮಗಳ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರೂ ತಾಯಿ ಮಾತ್ರ ಬಣ್ಣದ ಲೋಕದೊಂದಿಗೆ ಗುರುತಿಸಿಕೊಳ್ಳಲು ಮುಂದೆ ಬಂದಿರಲಿಲ್ಲ. ಇದೀಗ ತಾಯಿಯ ಫೋಟೋದೊಂದಿಗೆ ಮಲೈಕಾ ಅಮ್ಮಂದಿರ ದಿನದಂದು ವಿಶೇಷ ಪೋಸ್ಟ್ ಮಾಡಿದ್ದಾರೆ.
9/ 19
ತಾಯಿಯೊಂದಿಗಿನ ಸೆಲ್ಫಿ ಹಂಚಿಕೊಂಡಿರುವ ಮಲೈಕಾ, 'ನೀವು ಬೀಜವನ್ನು ಬಿತ್ತಿ, ಅದು ಬೆಳೆದು ಮತ್ತು ಸುಂದರವಾದ ಮರವಾಗಲು ಕಾಳಜಿ ಮತ್ತು ಪ್ರೀತಿ ಅತ್ಯಗತ್ಯ. ಅದಕ್ಕೆ ಬೆಳೆಯಲು ನೀರು, ಗಾಳಿ ಮತ್ತು ಸೂರ್ಯನ ಬೆಳಕು ಕೂಡ ಬೇಕು.
10/ 19
ತಾಯಿ ಮಾತ್ರ ಅದನ್ನು ನೀಡಬಲ್ಲರು! ಅವಳು ನಮ್ಮ ಸೂರ್ಯನ ಬೆಳಕು, ಅವಳು ನಮ್ಮ ನೀರು, ಅವಳು ನಮ್ಮ ಗಾಳಿ ಮತ್ತು ನಮ್ಮ ಜೀವನ. ಅಂತಹ ಒಬ್ಬರು ತಾಯಿಯನ್ನು ನಾನು ಹೊಂದಿದ್ದೇನೆ . ನಾನು ತಾಯಿಯಾಗಿದ್ದೇನೆ. ನಾನೇ ಅದೃಷ್ಟಶಾಲಿ. ನನ್ನ ಸೂಪರ್ ಹೀರೋಗೆ ಮದರ್ಸ್ ಡೇ ಶುಭಾಶಯಗಳು ' ಎಂದು ಮಲೈಕಾ ಬರೆದುಕೊಂಡಿದ್ದಾರೆ.
11/ 19
ಮಲೈಕಾ ಅರೋರಾ ಅವರ ತಾಯಿ ಜೊತೆಗಿನ ಫೋಟೋ ಇದೀಗ ಭಾರೀ ವೈರಲ್ ಆಗುತ್ತಿದ್ದು, ಮೊದಲ ಬಾರಿ ಸೋಷಿಯಲ್ ಮೀಡಿಯಾ ಮೂಲಕ ಅಮ್ಮನ ಫೋಟೋ ಹಂಚಿಕೊಂಡಿದ್ದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
12/ 19
ಕೆಲ ದಿನಗಳ ಹಿಂದೆಯಷ್ಟೇ ಮಲೈಕಾ ಮಲಗುವ ಕೋಣೆ ರಹಸ್ಯಗಳ ಬಿಚ್ಚಿಟ್ಟು ಸಖತ್ ಸುದ್ದಿಯಾಗಿದ್ದರು. ಅದರಲ್ಲೂ ಸೆಕ್ಸ್ ಭಂಗಿ ಯನ್ನು ತಿಳಿಸುವ ಮೂಲಕ ಅಚ್ಚರಿ ಮೂಡಿಸಿದ್ದರು.
13/ 19
ಯಾವ ಸೆಕ್ಸ್ ಭಂಗಿ ಇಷ್ಟ ಎಂಬ ಪ್ರಶ್ನೆಗೆ ಯಾವುದೇ ಮುಜುಗರವಿಲ್ಲದೆ ಉತ್ತರಿಸಿದ ಮಲೈಕಾ, ಸೆಕ್ಸ್ ಮಾಡುವಾಗ ನನಗೆ ಮೇಲೆ ಇರುವುದು ತುಂಬಾ ಇಷ್ಟ ಎಂದು ಉತ್ತರಿಸಿದ್ದರು.
14/ 19
ಮಲೈಕಾ ಅರೋರ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಜೊತೆಗಿನ ದಾಂಪತ್ಯ ಜೀವನಕ್ಕೆ 2017ರಲ್ಲಿ ತೀಲಾಂಜಲಿ ಇಟ್ಟಿದ್ದರು. ಇದೀಗ ಯುವ ನಟ ಅರ್ಜುನ್ ಕಪೂರ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ.